ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಮಧ್ಯಪ್ರದೇಶ ಸರ್ಕಾರವು ತ್ರಿಚಕ್ರ ವಾಹನಗಳಿಗಾಗಿ ಹೊಸ ಕಾನೂನನ್ನು ಜಾರಿಗೊಳಿಸಿದೆ. ಹೊಸ ಕಾನೂನಿನ ಪ್ರಕಾರ, ಆಟೋರಿಕ್ಷಾಗಳಂತಹ ತ್ರಿಚಕ್ರ ವಾಹನಗಳು ಮಧ್ಯ ಪ್ರದೇಶದಲ್ಲಿ ಆಫ್ಟರ್ ಮಾರ್ಕೆಟ್ ಮ್ಯೂಸಿಕ್ ಸಿಸ್ಟಂಗಳನ್ನು ಹೊಂದುವಂತಿಲ್ಲ.

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಮಧ್ಯ ಪ್ರದೇಶ ಆಟೋ ರಿಕ್ಷಾ ರೆಗ್ಯುಲೇಷನ್ಸ್ ಸ್ಕೀಂ 2021ರ ಅಡಿಯಲ್ಲಿ ತ್ರಿಚಕ್ರ ವಾಹನ ಮಾಲೀಕರು ವಾಹನಗಳಲ್ಲಿ ಯಾವುದೇ ಬದಲಾವಣೆ ಅಥವಾ ಮಾರ್ಪಾಡು ಮಾಡುವಂತಿಲ್ಲ. ಅವುಗಳಲ್ಲಿ ಆಫ್ಟರ್ ಮಾರ್ಕೆಟ್ ಮ್ಯೂಸಿಕ್ ಸಿಸ್ಟಂ ಸಹ ಸೇರಿದೆ.

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಮ್ಯೂಸಿಕ್ ಸಿಸ್ಟಂಗಳ ಅಳವಡಿಕೆಯನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಮಧ್ಯಪ್ರದೇಶ ಹೈಕೋರ್ಟ್ ಫೆಬ್ರವರಿ 15ರ ಆದೇಶದಲ್ಲಿ ಆಟೋ ರಿಕ್ಷಾಗಳಿಗಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಇದರ ಪರಿಣಾಮವಾಗಿ ಮಧ್ಯಪ್ರದೇಶ ಸರ್ಕಾರವು ಆಟೋ ರಿಕ್ಷಾ ನಿಯಂತ್ರಣ ಯೋಜನೆ 2021ಯನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಯಡಿಯಲ್ಲಿ, ಆಟೋ ರಿಕ್ಷಾ ಚಾಲಕರಿಗೆ ಹಲವಾರು ಹೊಸ ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ.

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಆಟೋ ರಿಕ್ಷಾವನ್ನು ತಪ್ಪಾದ ಲೇನ್‌ನಲ್ಲಿ ಚಾಲನೆ ಮಾಡುವುದು, ಸಿಗ್ನಲ್ ಜಂಪ್ ಮಾಡುವುದು, ಕುಡಿದು ವಾಹನ ಚಾಲನೆ ಮಾಡುವುದು, ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಮಾಡಿದರೆ ದಂಡ ವಿಧಿಸಿ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಎರಡಕ್ಕಿಂತ ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘಿಸಿದರೆ ಆಟೋ ಡ್ರೈವರ್‌ಗಳ ವಾಹನ ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಆಟೋರಿಕ್ಷಾಗಳ ಪರವಾನಗಿಯನ್ನು 10 ವರ್ಷಗಳ ನಂತರ ನವೀಕರಿಸಲಾಗುವುದಿಲ್ಲವೆಂದು ಹೊಸ ನಿಯಮಗಳು ತಿಳಿಸಿವೆ.

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಅವುಗಳನ್ನು ಹಂತಹಂತವಾಗಿ ಹೊರಹಾಕಿ ನಂತರ ಸಿಎನ್‌ಜಿ ತ್ರಿಚಕ್ರ ವಾಹನಗಳನ್ನು ಬದಲಿಸಲಾಗುವುದು. ಇದರ ಜೊತೆಗೆ ಆಟೋ ರಿಕ್ಷಾಗಳಲ್ಲಿ ಸ್ಪೀಡ್ ಗವರ್ನರ್ ಸಾಧನವನ್ನು ಅಳವಡಿಸಲಾಗುವುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಇದರಿಂದ ಆಟೋ ರಿಕ್ಷಾಗಳ ಗರಿಷ್ಠ ವೇಗದ ಮಿತಿಯನ್ನು ಪ್ರತಿ ಗಂಟೆಗೆ 40 ಕಿ.ಮೀಗಳಿಗೆ ನಿಗದಿಪಡಿಸಲಾಗುವುದು. ಇದರ ಜೊತೆಗೆ ಲೈವ್ ಟ್ರ್ಯಾಕಿಂಗ್'ಗಾಗಿ ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ಆಟೋ ರಿಕ್ಷಾದಲ್ಲಿ ಅಳವಡಿಸಲಾಗುವುದು.

ಆಟೋ ರಿಕ್ಷಾಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಿದ ಮಧ್ಯ ಪ್ರದೇಶ ಸರ್ಕಾರ

ಆಟೋ ರಿಕ್ಷಾದಲ್ಲಿ ಮ್ಯೂಸಿಕ್ ಸಿಸ್ಟಂ ನಿಷೇಧಿಸುವುದರಿಂದ ಪ್ರಯಾಣಿಕರು ಶಬ್ದ ರಹಿತ ಪ್ರಯಾಣ ಮಾಡಬಹುದು. ಆದರೆ ಆಟೋ ರಿಕ್ಷಾ ಚಾಲಕರ ಒಕ್ಕೂಟವುಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದು, ಈ ನಿರ್ಧಾರವನ್ನು ಅಪ್ರಾಯೋಗಿಕವೆಂದು ಹೇಳಿದೆ.

Most Read Articles

Kannada
English summary
Madhya Pradesh makes new regulations for auto rickshaws. Read in Kannada.
Story first published: Wednesday, April 7, 2021, 20:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X