ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯಾದ ಮೆಜೆಂಟಾ ಗ್ರೂಪ್ ಇಂದು ತನ್ನ ಅತಿದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರವನ್ನು ಮಹಾರಾಷ್ಟ್ರದ ನವೀ ಮುಂಬಯಿನಲ್ಲಿ ಉದ್ಘಾಟಿಸಿದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಕೇಂದ್ರವು ಭಾರತದ ಅತಿದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸೌಲಭ್ಯವನ್ನು ಮಹಾರಾಷ್ಟ್ರ ರಾಜ್ಯದ ಕೈಗಾರಿಕೆ ಹಾಗೂ ಗಣಿಗಾರಿಕೆ ಸಚಿವರಾದ ಸುಭಾಷ್ ದೇಸಾಯಿರವರು ಉದ್ಘಾಟಿಸಿದರು.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಚಾರ್ಜಿಂಗ್ ಕೇಂದ್ರದ ಜೊತೆಗೆ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನ ಚಾರ್ಜರ್ ಅಭಿವೃದ್ಧಿ ಹಾಗೂ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಈ ಘಟಕವು ಪ್ರತಿ ತಿಂಗಳು ಸುಮಾರು 4,000 ಎಸಿ ಚಾರ್ಜರ್‌ಗಳನ್ನು ಉತ್ಪಾದಿಸುತ್ತದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಚಾರ್ಜಿಂಗ್ ಕೇಂದ್ರದಲ್ಲಿ ಒಟ್ಟು 21 ಇವಿ ಚಾರ್ಜರ್‌ಗಳಿದ್ದು, ಅವುಗಳಲ್ಲಿ 4 ಡಿಸಿ ಫಾಸ್ಟ್ ಚಾರ್ಜರ್‌ಗಳು 15 ರಿಂದ 50 ಕಿವ್ಯಾ ಸಾಮರ್ಥ್ಯ ಹೊಂದಿದ್ದರೆ, ಉಳಿದ 17 ಯುನಿಟ್‌ಗಳು 3.5 ರಿಂದ 7.5 ಕಿವ್ಯಾ ಸಾಮರ್ಥ್ಯದ ಎಸಿ ಚಾರ್ಜರ್‌ಗಳಾಗಿವೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಚಾರ್ಜಿಂಗ್ ಕೇಂದ್ರವು ದಿನದ 24 ಗಂಟೆಯು ಸಾರ್ವಜನಿಕರಿಗೆ ತೆರೆದಿರುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ಮೂರು ಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಈ ಚಾರ್ಜಿಂಗ್ ಕೇಂದ್ರದಲ್ಲಿ ಚಾರ್ಜ್ ಮಾಡಬಹುದು.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ವಾಹನಗಳ ಬ್ಯಾಟರಿಯ ಆಧಾರದ ಮೇಲೆ ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಸುಮಾರು 45 ನಿಮಿಷಗಳಲ್ಲಿ 0 - 100% ನಷ್ಟು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಮೆಜೆಂಟಾ ಕಂಪನಿ ಹೇಳಿದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಎಸಿ ಸ್ಲೋ ಚಾರ್ಜರ್ ಬಳಸುವ ಗ್ರಾಹಕರು ತಮ್ಮ ವಾಹನಗಳನ್ನು ರಾತ್ರಿ ವೇಳೆ ಚಾರ್ಜ್ ಮಾಡಲು, ವಾಹನಗಳನ್ನು ವಿಶೇಷ ಪಾರ್ಕಿಂಗ್ ಜೋನ್'ಗಳಲ್ಲಿ ಬಿಡಬಹುದು. ಎಲೆಕ್ಟ್ರಿಕ್ ವಾಹನ ಮಾಲೀಕರು ಚಾರ್ಜ್‌ಗ್ರಿಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಚಾರ್ಜರ್‌ಗಳನ್ನು ಆಕ್ಸೆಸ್ ಮಾಡಬಹುದು.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಚಾರ್ಜರ್'ಗಳು ಆನ್‌ಲೈನ್ ರಿಮೋಟ್ ಮಾನಿಟರಿಂಗ್ ಸಿಸ್ಟಂ ಹೊಂದಿದ್ದು, ಆಟೋಮ್ಯಾಟಿಕ್ ಪೇಮೆಂಟ್ ಗೇಟ್‌ವೇಯನ್ನು ಹೊಂದಿವೆ. ಗ್ರಾಹಕರು ಆನ್‌ಲೈನ್ ಮೂಲಕವೂ ಚಾರ್ಜಿಂಗ್ ಬಿಲ್'ಗಳನ್ನು ಪಾವತಿಸಬಹುದು.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಚಾರ್ಜಿಂಗ್ ಗ್ರಿಡ್ ರೂಫ್ ಮೇಲೆ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸಲಾಗಿದೆ. ಈ ಗ್ರಿಡ್'ನಲ್ಲಿ ಬ್ಯಾಕಪ್ ಡೀಸೆಲ್ ಜನರೇಟರ್ ಅನ್ನು ಸಹ ಸ್ಥಾಪಿಸಲಾಗಿದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಜನರೇಟರ್ ಚಾರ್ಜಿಂಗ್ ಸ್ಟೇಷನ್'ಗೆ ಸುಮಾರು 40 ಕಿವ್ಯಾ ವಿದ್ಯುತ್ ನೀಡುತ್ತದೆ. ಮಹಾರಾಷ್ಟ್ರ ಸರ್ಕಾರದ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಪ್ರಕಾರ, 2025ರ ವೇಳೆಗೆ ರಾಜ್ಯದಲ್ಲಿ 1,46,000 ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿ ಹೊಂದಲಾಗಿದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿದ ಮೆಜೆಂಟಾ ಗ್ರೂಪ್

ಈ ಪ್ರಮಾಣವು 2025ರಲ್ಲಿ ಮಹಾರಾಷ್ಟ್ರದಲ್ಲಿ ನೋಂದಾಯಿಸಲ್ಪಡುವ ಒಟ್ಟು ವಾಹನಗಳ 10% ನಷ್ಟಾಗುತ್ತದೆ. ಈ ಗುರಿಯನ್ನು ಮುಟ್ಟಲು ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದೆ.

ಗಮನಿಸಿ: ಮೊದಲ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Magenta Group inaugurates India's largest EV charging station. Read in Kannada.
Story first published: Wednesday, July 14, 2021, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X