ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌, ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ಎಲೆಕ್ಟ್ರಿಕ್ ವಾಹನ ಬಳಸುವವರಿಗೆ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಕಂಪನಿಯ ಪ್ರಮುಖ ಮಳಿಗೆಗಳಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಹೆಚ್‌ಪಿಸಿಎಲ್ ಸಹಯೋಗದೊಂದಿಗೆ ಮೆಜೆಂಟಾ ಗ್ರೂಪ್ ಇವಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಿದೆ. ಮೆಜೆಂಟಾ ಗ್ರೂಪ್ ಪರಿಸರ ಸ್ನೇಹಿ ವಾಹನಗಳ ಬಿಡಿಭಾಗಗಳನ್ನು ಪೂರೈಸುವ ಪ್ರಮುಖ ಕಂಪನಿಯಾಗಿದೆ. ಈ ಇವಿ ಚಾರ್ಜಿಂಗ್ ಕೇಂದ್ರವನ್ನು ಮಾರ್ಚ್ 4ರಂದು ಉದ್ಘಾಟಿಸಲಾಯಿತು.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಈ ಸಂದರ್ಭದಲ್ಲಿ ಕಂಪನಿಯ ಸಾಯಿ ಕುಮಾರ್ ಸೂರಿ ಹಾಗೂ ರಜನೀಶ್ ಮೆಹ್ತಾ ಹಾಜರಿದ್ದರು. ಮಾಹಿತಿಗಳ ಪ್ರಕಾರ, ಈ ಚಾರ್ಜಿಂಗ್ ಕೇಂದ್ರವು 122 ಕಿವ್ಯಾ ಹಾಗೂ 15 ಕಿವ್ಯಾನ ಎರಡು ವೇಗದ ಚಾರ್ಜರ್‌ಗಳನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಎಲೆಕ್ಟ್ರಿಕ್ ವಾಹನ ಬಳಕೆದಾರರು ತಮ್ಮ ಇವಿ ಚಾರ್ಜಿಂಗ್ ವಿಶೇಷಣಗಳ ಆಧಾರದ ಮೇಲೆ ಈ ಚಾರ್ಜರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿರುವ ಮೆಜೆಂಟಾದ ಹೊಸ ಚಾರ್ಜಿಂಗ್ ಕೇಂದ್ರವು ಪ್ಯಾನ್-ಇಂಡಿಯಾ ಇವಿ ಚಾರ್ಜ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುವ ಕಂಪನಿಯ ಧ್ಯೇಯದ ಭಾಗವಾಗಿದೆ.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಮೆಜೆಂಟಾ ಈಗಾಗಲೇ ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಡಿಸೆಂಬರ್ 2020ರ ವೇಳೆಗೆ ಕಂಪನಿಯು ಸ್ಥಾಪಿಸಿದ ಇವಿ ಚಾರ್ಜರ್'ಗಳ ಒಟ್ಟು ಸಾಮರ್ಥ್ಯ 3.5 ಮೆ.ವ್ಯಾಗಳಾಗಿದೆ. ಕಂಪನಿಯು ಭವಿಷ್ಯದಲ್ಲಿ ಈ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಗಳಿವೆ.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಮೆಜೆಂಟಾ ಮುಂಬರುವ ದಿನಗಳಲ್ಲಿ ದೇಶಾದ್ಯಂತ ಹೊಸ ಹೊಸ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ತೊಂದರೆಯಾಗದ ಚಾರ್ಜಿಂಗ್ ಅನುಭವವನ್ನು ನೀಡುವುದು ಮೆಜೆಂಟಾ ಕಂಪನಿಯ ಪ್ರಮುಖ ಗುರಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಮೆಜೆಂಟಾದ ಚಾರ್ಜ್ ಗ್ರಿಡ್ ಅಪ್ಲಿಕೇಶನ್‌ ಬಳಕೆಯಿಂದ ಇದು ಸಾಧ್ಯವಾಗಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಹತ್ತಿರದಲ್ಲಿರುವ ಚಾರ್ಜಿಂಗ್ ಕೇಂದ್ರಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಚಾರ್ಜಿಂಗ್ ಕೇಂದ್ರಗಳ ಸ್ಥಿತಿ ಹಾಗೂ ಲಭ್ಯತೆ ಎರಡನ್ನೂ ಮ್ಯಾಪ್'ನಲ್ಲಿ ಪ್ರದರ್ಶಿಸಲಾಗುತ್ತದೆ. ಮೆಜೆಂಟಾ ಚಾರ್ಜ್‌ಗ್ರಿಡ್ ಅಪ್ಲಿಕೇಶನ್ ಯುಪಿಐ, ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಸೇರಿದಂತೆ ಹಲವಾರು ಆನ್‌ಲೈನ್ ಪಾವತಿ ಆಯ್ಕೆಗಳನ್ನು ನೀಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವಾಗ ಬಳಕೆದಾರರು ವಿದ್ಯುತ್ ಬಳಕೆ ಹಾಗೂ ಚಾರ್ಜಿಂಗ್'ಗಾಗಿ ತಗಲುವ ಸಮಯವನ್ನು ಗಮನದಲ್ಲಿರಿಸಿಕೊಳ್ಳಬಹುದು. ಇದರ ಜೊತೆಗೆ ಕಂಪನಿಯು ಹಲವಾರು ಚಂದಾದಾರಿಕೆ ಯೋಜನೆಗಳನ್ನು ಸಹ ನೀಡುತ್ತದೆ.

ಎಕ್ಸ್‌ಪ್ರೆಸ್ ವೇನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರ ಆರಂಭಿಸಿದ ಮೆಜೆಂಟಾ

ಇದರಿಂದಾಗಿ ಬಳಕೆದಾರರು ತಮ್ಮ ನಿರ್ದಿಷ್ಟ ಅಗತ್ಯ ಹಾಗೂ ಆದ್ಯತೆಗಳಿಗೆ ಅನುಗುಣವಾಗಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತದಲ್ಲಿಎಲೆಕ್ಟ್ರಿಕ್ ವಾಹನಗಳ ಬಳಕೆ ಆರಂಭಿಕ ಹಂತದಲ್ಲಿದ್ದು, ಮೆಜೆಂಟಾದಂತಹ ಕಂಪನಿಗಳು ಅವುಗಳ ಬಳಕೆಯನ್ನು ಉತ್ತೇಜಿಸುತ್ತಿವೆ.

Most Read Articles

Kannada
English summary
Magenta opens new EV charging station in Mumbai Pune expressway. Read in Kannada.
Story first published: Friday, March 12, 2021, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X