ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಹಲವು ಹೊಸ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿಯು ಮುಂದಿನ 5 ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಅಕ್ಟೋಬರ್‌ ತಿಂಗಳಿನಲ್ಲಿ ಎಕ್ಸ್‌ಯುವಿ 700 ಬಿಡುಗಡೆಗೊಳಿಸಲಿದೆ. ನಂತರ ಹೊಸ ಸ್ಕಾರ್ಪಿಯೋ, ಇಕುವಿ 100, ಎಕ್ಸ್‌ಯುವಿ 300, ಹೊಸ ತಲೆಮಾರಿನ ಎಕ್ಸ್‌ಯುವಿ 500, ಎಕ್ಸ್‌ಯುವಿ 900 ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಪ್ರಾಬಲ್ಯ ಸಾಧಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ಸೆಗ್ ಮೆಂಟಿನಲ್ಲಿ ಮತ್ತಷ್ಟುಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಕಂಪನಿಯು ಇನ್ನು ಮುಂದೆ ಎಸ್‌ಯುವಿ ಮಾದರಿಗಳತ್ತ ಮಾತ್ರ ಗಮನ ಹರಿಸುವುದಾಗಿ ತಿಳಿಸಿದೆ. ಕಂಪನಿಯ ಹೊಸ ಮಾದರಿಗಳ ಬೆಲೆ ರೂ.10 ಲಕ್ಷಗಳಿಂದ ರೂ.20 ಲಕ್ಷಗಳ ನಡುವೆ ಇರಲಿದೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಎಸ್‌ಯುವಿ ಹಾಗೂ ಟ್ರಾಕ್ಟರುಗಳೆರಡರಲ್ಲೂ ರೂ.9000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಹೆಚ್ಚುವರಿಯಾಗಿ ರೂ.3,000 ಕೋಟಿ ಹೂಡಿಕೆ ಮಾಡಲಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಆಮ್ಸ್ಟಾಲಿನ್ ಪೆಟ್ರೋಲ್ ಹಾಗೂ ಅಮ್ಹಾಕ್ ಡೀಸೆಲ್ ಎಂಜಿನ್'ಗಳನ್ನು ಬಳಸುತ್ತಿದೆ. ಎಂಜಿನ್'ಗಳು ಹೊಸ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿರಲಿವೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ 700 ಕಂಪನಿಯ ಹೊಸ ಮಾದರಿಯಾಗಲಿದ್ದು, ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳಿಸಲಾಗುವುದು. ಮಹೀಂದ್ರಾ ಎಕ್ಸ್‌ಯುವಿ 700 ಅನ್ನು ಕಂಪನಿಯ ಡಬ್ಲ್ಯು 601 ಮೊನೊಕೊಕ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುವುದು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಈ ವಾಹನವು ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 500ಗಿಂತ ಉದ್ದ ಹಾಗೂ ಅಗಲವಾಗಿರಲಿದೆ. ಕಂಪನಿಯು ಹೊಸ ಎಕ್ಸ್‌ಯುವಿ 700 ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಇದರಲ್ಲಿ ಮೊದಲನೆಯದು 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಆಗಿದ್ದರೆ, ಎರಡನೆಯದು 2.0-ಲೀಟರ್ ಆಮ್ಸ್ಟೇಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿರಬಹುದು. ಹೈ ಎಂಡ್ ಮಾದರಿಗಳನ್ನು ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಈ ಎಂಜಿನ್'ಗಳನ್ನು ಥಾರ್ ಎಸ್‌ಯುವಿಯಿಂದ ಪಡೆದು ಕೊಳ್ಳಬಹುದು. ಆದರೆ ಪವರ್ ಅಂಕಿ ಅಂಶಗಳಲ್ಲಿ ಬದಲಾವಣೆಯಾಗಲಿದೆ. ಇದೇ ವೇಳೆ ಕಂಪನಿಯು ತನ್ನ ಎಕ್ಸ್‌ಯುವಿ 500 ಅನ್ನು 2024ರಲ್ಲಿ ಮತ್ತೊಮ್ಮೆ ಬಿಡುಗಡೆಗೊಳಿಸಲಿದೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಆದರೆ ಹೊಸದಾಗಿ ಬಿಡುಗಡೆಯಾಗುವ ಎಕ್ಸ್‌ಯು‌ವಿ 500 ಅನ್ನು ಕ್ರೆಟಾ ಹಾಗೂ ಸೆಲ್ಟೋಸ್‌ ಎಸ್‌ಯುವಿಗಳಿಗೆ ಪೈಪೋಟಿಯಾಗಿ ನೀಡಲಾಗುವುದು. ಮಾಹಿತಿಗಳ ಪ್ರಕಾರ ಈ ವಾಹನವನ್ನು 5 ಸೀಟುಗಳ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ಬಿಡುಗಡೆಗೊಳಿಸಲಾಗುವುದು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಈ ವಾಹನಕ್ಕೆ ಎಸ್ 301 ಎಂಬ ಕೋಡ್ ನೇಮ್ ಬಳಸಲಾಗುತ್ತದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ 500ಯು ಮಹೀಂದ್ರಾ ಎಕ್ಸ್‌ಯುವಿ 300 ಹಾಗೂ ಎಕ್ಸ್‌ಯುವಿ 700ಗಳ ನಡುವೆ ಇರಲಿದೆ ಎಂದು ಹೇಳಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಎಸ್ 301 ವಾಹನವನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಫೋರ್ಡ್ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಬೇಕಾಗಿತ್ತು. ಆದರೆ ಮಹೀಂದ್ರಾ ಕಂಪನಿಯು ಫೋರ್ಡ್ ಜೊತೆಗಿನ ಜಂಟಿ ಉದ್ಯಮವನ್ನು ಕೊನೆಗೊಳಿಸಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಮುಂದಿನ ಐದು ವರ್ಷಗಳಲ್ಲಿ 12 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಈಗ ಕಂಪನಿಯು ಸ್ವಂತವಾಗಿ ವಾಹನಗಳನ್ನು ಅಭಿವೃದ್ಧಿಪಡಿಸಲಿದೆ. ಮಹೀಂದ್ರಾ ಕಂಪನಿಯು ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 300 ಪ್ಲಾಟ್‌ಫಾರಂ ವಿಸ್ತೃತ ಆವೃತ್ತಿಯನ್ನು ಹೊಸ ಎಕ್ಸ್‌ಯುವಿ 500ಗಾಗಿ ಬಳಸಲಿದೆ ಎಂದು ಹೇಳಲಾಗಿದೆ.

ಮೂಲ: ಆಟೋಕಾರ್ ಇಂಡಿಯಾ

Most Read Articles

Kannada
English summary
Mahindra and Mahindra company to launch 12 SUVs in next five years. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X