ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ದೇಶಾದ್ಯಂತ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ಸರ್ವಿಸ್ ಕ್ಯಾಂಪ್‌ನಲ್ಲಿ ಗ್ರಾಹಕರಿಗೆ ಹಲವಾರು ಆಫರ್‌‌ಗಳನ್ನು ಘೋಷಿಸಿರುವ ಮಹೀಂದ್ರಾ ಕಂಪನಿಯು ಒಂದೇ ಸೂರಿನಡಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ದೇಶಾದ್ಯಂತ ಹರಡಿಕೊಂಡಿರುವ ಮಹೀಂದ್ರಾ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಲಾಗಿದ್ದು, ಈ ತಿಂಗಳು 8ರಿಂದ 18ರ ತನಕ ಸರ್ವಿಸ್ ಕ್ಯಾಂಪ್ ಸೇವೆಗಳು ಲಭ್ಯವಿರಲಿವೆ. ಮಹೀಂದ್ರಾ ಕಾರು ಮಾಲೀಕರು ವಾರಂಟಿ ಅವಧಿಯ ಸೇವೆಗಳನ್ನು ಹೊರತುಪಡಿಸಿ ಹೆಚ್ಚುವರಿ ಸೇವೆಗಳಿಗಾಗಿ ಸರ್ವಿಸ್ ಕ್ಯಾಂಪ್‌ನಲ್ಲಿ ಭಾಗಿಯಾಗಬಹುದಾಗಿದ್ದು, ಒಟ್ಟು 75 ಉಚಿತ ಚೆಕ್ ಪಾಯಿಂಟ್‌ಗಳೊಂದಿಗೆ ಒಂದೇ ಸೂರಿನಡಿ ನುರಿತ ಉದ್ಯೋಗಿಗಳ ತಂಡದೊಂದಿಗೆ ಹೊಸ ಸರ್ವಿಸ್ ಆರಂಭಿಸಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಉಚಿತ ಚೆಕ್ ಪಾಯಿಂಟ್‌ಗಳೊಂದಿಗೆ ತಾಂತ್ರಿಕ ಅಂಶಗಳ ಸೇವೆಯು ಅವಶ್ಯವಿದ್ದಲ್ಲಿ ಶೇ. 5ರ ವಿನಾಯ್ತಿಯೊಂದಿಗೆ ಬಿಡಿಭಾಗಗಳು ಲಭ್ಯವಾಗಲಿದ್ದರೆ ಶೇ.10ರಷ್ಟು ಲೆಬರ್ ಚಾರ್ಚ್‌ಗಳ ಮೇಲೆ ವಿನಾಯ್ತಿ ಮತ್ತು ಶೇ.25ರಷ್ಟು ಮ್ಯಾಕ್ಸಿ ಕೇರ್ ಸೇವೆಗಳ ಮೇಲೆ ವಿನಾಯ್ತಿ ದೊರೆಯಲಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಸರ್ವಿಸ್ ಕ್ಯಾಂಪ್‌ನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ವಾರಂಟಿ ಸೇವೆಗಳನ್ನು ಹೊರತುಪಡಿಸಿ ಸಾಮಾನ್ಯ ಸೇವೆಗಳು ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ಸುಮಾರು 600 ಸರ್ವಿಸ್ ಸೆಂಟರ್‌ಗಳಲ್ಲಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಲಾಗಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಗ್ರಾಹಕರು ಬೊಲೆರೊ, ಸ್ಕಾರ್ಪಿಯೋ, ಎಕ್ಸ್‌ಯುವಿ500, ಮರಾಜೋ, ಅಲ್ಟುರಾಸ್ ಜಿ4, ಎಕ್ಸ್‌ಯುವಿ300, ಟಿಯುವಿ300, ಕೆಯುವಿ100, ಥಾರ್, ಜೈಲೊ, ನೊವೊಸ್ಪೋರ್ಟ್, ಕ್ವಾನ್ಟೊ, ವೆರಿಟೋ , ವೆರಿಟೋ ವೈಬ್, ಲೊಗಾನ್ ಮತ್ತು ರೆಕ್ಸಾನ್ಟಾ ಕಾರುಗಳಿಗೆ ಮೆಗಾ ಸರ್ವಿಸ್ ಕ್ಯಾಂಪ್‌ನಲ್ಲಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ವಿವಿಧ ತಾಂತ್ರಿಕ ಸಮಸ್ಯೆಗಳಿಗೆ ಆಕರ್ಷಕ ಬೆಲೆಯೊಂದಿಗೆ ಬಿಡಿಭಾಗಗಳ ಸೇವೆ ಮತ್ತು ಲೆಬರ್ ಚಾರ್ಜ್‌ಗಳ ಮೇಲೆ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಮೆಗಾ ಸರ್ವಿಸ್ ಕ್ಯಾಂಪ್‌ನಲ್ಲಿ ಸೇವೆಗಳನ್ನು ಪಡೆದುಕೊಳ್ಳುವ ಇಚ್ಚೆಯಿರುವ ಗ್ರಾಹಕರು ನಿಮ್ಮ ಹತ್ತಿರದ ಸರ್ವಿಸ್ ಕ್ಯಾಂಪ್‌ಗಳನ್ನು ಗುರುತಿ ಆನ್‌ಲೈನ್ ಮೂಲಕವೇ ಸೇವಾ ಅವಧಿಯನ್ನು ನಿಗದಿಪಡಿಸಬಹುದಾಗಿದ್ದು, ಅಗತ್ಯವಿರುವ ಗ್ರಾಹಕರಿಗೆ ಪಿಕ್ಅಪ್ ಮತ್ತು ಡ್ರಾಪ್ ಸೇವೆಗಳು ಸಹ ಲಭ್ಯವಾಗುತ್ತವೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಒಟ್ಟಿನಲ್ಲಿ 10 ದಿನಗಳ ಕಾಲ ನಡೆಯುತ್ತಿರುವ ಮೆಗಾ ಸರ್ವಿಸ್ ಕ್ಯಾಂಪ್‌ನಲ್ಲಿ ಸಾವಿರಾರು ಗ್ರಾಹಕರು ಭಾಗಿಯಾಗುವ ಸಾಧ್ಯತೆಗಳಿದ್ದು, ಸರ್ವಿಸ್ ಕ್ಯಾಂಪ್‌ನಲ್ಲಿ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಕಂಪನಿಯು ಗ್ರಾಹಕರಿಗೆ ಗರಿಷ್ಠ ಸುರಕ್ಷತೆಗಳೊಂದಿಗೆ ಗ್ರಾಹಕರ ಸೇವೆಗಳನ್ನು ನೀಡುವ ಭರವಸೆ ನೀಡಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಇನ್ನು ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿದಾರರನ್ನು ಸೆಳೆಯಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದ ಮಹೀಂದ್ರಾ ಕಂಪನಿಯು ಫೆಬ್ರುವರಿ ಅವಧಿಗೂ ವಿಸ್ತರಿಸಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಕನಿಷ್ಠ ರೂ. 24 ಸಾವಿರದಿಂದ ಗರಿಷ್ಠ ರೂ. 3.06 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಕೋವಿಡ್ ಪರಿಣಾಮ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಮಹೀಂದ್ರಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಆಫರ್‌ಗಳ ಮೂಲಕ ಕಾರು ಮಾರಾಟದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ.

MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಪ್ಯಾಸೆಂಜರ್ ಕಾರು ಮಾದರಿಗಳಿಗಾಗಿ ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಹೀಗಾಗಿ ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದ ಕಂಪನಿಯು ಹೊಸ ಆಫರ್‌ಗಳನ್ನು ಫೆಬ್ರುವರಿ ಅವಧಿಗೂ ಮುಂದುವರಿಸಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

Most Read Articles

Kannada
English summary
Mahindra Announced Free Nation-Wide Mega Service Camp. Read in Kannada.
Story first published: Tuesday, February 9, 2021, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X