ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಶೀಘ್ರದಲ್ಲಿಯೇ ಹೊಸ ಬೊಲೆರೊ ನಿಯೋ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ ಈ ಎಸ್‌ಯುವಿಯನ್ನು ಕಂಪನಿಯ ಜನಪ್ರಿಯ ಎಸ್‌ಯುವಿಯಾದ ಟಿಯುವಿ 300 ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಈಗ ಈ ಹೊಸ ಎಸ್‌ಯುವಿಯನ್ನು ಭಾರತದಲ್ಲಿ ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಮಾಹಿತಿ ಬಹಿರಂಗವಾಗಿದೆ. ಕಾರ್ ವಾಲೆ ಇಂಗ್ಲಿಷ್ ವೆಬ್ ಸೈಟ್ ಪ್ರಕಾರ , ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯು ಈ ತಿಂಗಳ ಜುಲೈ 15ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಆದರೆ ಮಹೀಂದ್ರಾ ಕಂಪನಿಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಎಂಬುದು ಗಮನಾರ್ಹ. ಮಹೀಂದ್ರಾ ಕಂಪನಿಯು ಬೊಲೆರೊ ನಿಯೋ ಎಸ್‌ಯುವಿಗಳನ್ನುಶೋರೂಂಗಳಿಗೆ ಕಳುಹಿಸಿದೆ.

ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಹೊಸ ಬೊಲೆರೊ ನಿಯೋ ಎಸ್‌ಯುವಿಗಳು ಈಗಾಗಲೇ ಮಹೀಂದ್ರಾ ಶೋರೂಂಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಚಿತ್ರಗಳಲ್ಲಿರುವ ಹೊಸ ಬೊಲೆರೊ ನಿಯೋ ಎಸ್‌ಯುವಿಯು ಟಿಯುವಿ 300 ಕಾರಿನ ನವೀಕರಿಸಿದ ಆವೃತ್ತಿಯಂತೆ ಕಾಣುತ್ತದೆ.

ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಈಗ ಬಿಡುಗಡೆಯಾಗಿರುವ ಚಿತ್ರಗಳಲ್ಲಿರುವ ಹೊಸ ಬೊಲೆರೊ ನಿಯೋ ಹೊಸ ಅನಾಟಮಿಯನ್ನು ಹೊಂದಿರುವುದನ್ನು ಕಾಣಬಹುದು. ಈ ಚಿತ್ರಗಳಲ್ಲಿ ಬೊಲೆರೊ ನಿಯೋ ಎಸ್‌ಯುವಿಯು ಹೊಸ ಫ್ರಂಟ್ ಬಂಪರ್, ಮಾಡಿಫೈಗೊಳಿಸಿದ ಹೆಡ್‌ಲ್ಯಾಂಪ್‌, ಹಾರಿಜಾಂಟಲ್ ಆಗಿರುವ ಎಲ್‌ಇಡಿ ಡಿಆರ್‌ಎಲ್ ಲೈಟ್'ಗಳನ್ನು ಹೊಂದಿರುವುದನ್ನು ಕಾಣಬಹುದು.

ಇದರ ಜೊತೆಗೆ ವಿಶಾಲವಾದ ಏರ್ ಡ್ಯಾಂ, ಸರ್ಕ್ಯುಲರ್ ಫಾಗ್ ಲೈಟ್, ಕೆಳಭಾಗದ ಬಂಪರ್'ಗಳನ್ನು ಹೊಸದಾಗಿ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಅಳವಡಿಸಿರುವುದನ್ನು ಕಾಣಬಹುದು.

ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಎಂಹಾಕ್ 100 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 100 ಬಿಹೆಚ್‌ಪಿ ಪವರ್ ಹಾಗೂ 240 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಸ್‌ಯುವಿಯನ್ನು 5 ಸ್ಪೀಡ್ ಮ್ಯಾನುಯಲ್ ಹಾಗೂ ಎಎಂಡಿ ಎಂಬ ಎರಡು ಗೇರ್‌ಬಾಕ್ಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಸ್‌ಯುವಿಯಲ್ಲಿ ಎರಡು ಏರ್ ಬ್ಯಾಗ್‌, ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗುತ್ತದೆ.

ಬಹಿರಂಗವಾಯ್ತು ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ಬಿಡುಗಡೆ ಮಾಹಿತಿ

ಇವುಗಳ ಜೊತೆಗೆ ಹೊಸ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಹೆಚ್ಚುವರಿಯಾಗಿ ಅನಲಾಗ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಆರ್ಮ್ ರೆಸ್ಟ್, ಸ್ಮಾರ್ಟ್ಫೋನ್ ಕನೆಕ್ಟಿವಿಟಿಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Mahindra Bolero Neo launch information leaked through online. Read in Kannada.
Story first published: Thursday, July 8, 2021, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X