ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಕಾರುಗಳ ಹೊಸ ದರವು ಇಂದಿನಿಂದಲೇ ಅನ್ವಯವಾಗುವಂತೆ ಪರಿಸ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿರುವ ಮಹೀಂದ್ರಾ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳ ಮಾಡಿರುವುದಾಗಿ ಹೇಳಿಕೊಂಡಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1.50 ರಿಂದ ಶೇ.2 ರಷ್ಟು ದರ ಹೆಚ್ಚಳ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಮಹೀಂದ್ರಾ ವಿವಿಧ ಕಾರುಗಳು ಕನಿಷ್ಠ ರೂ. 2 ಸಾವಿರದಿಂದ ಗರಿಷ್ಠ ರೂ. 50 ಸಾವಿರ ತನಕ ದುಬಾರಿಯಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದರ ಹೆಚ್ಚಿಸಲಾಗಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

2020ರ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಫೆಬ್ರುವರಿ 4ರಿಂದಲೇ ಹೊಸ ಕಾರುಗಳ ಬೆಲೆ ಏರಿಕೆಯಾಗುವಂತೆ ಹೊಸ ದರ ನಿಗದಿಪಡಿಸಿರುವ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಮತ್ತು ಅಲ್ಟುರಾಸ್ ಜಿ4 ಹೊರತುಪಡಿಸಿ ಇನ್ನುಳಿದ ಕಾರುಗಳ ಬೆಲೆ ಹೆಚ್ಚಳ ಮಾಡಲಾಗಿದ್ದು, ಕಳೆದ ತಿಂಗಳ ಹಿಂದಷ್ಟೇ ಹೊಸ ಥಾರ್ ಈಗಾಗಲೇ ಹೆಚ್ಚಳ ಪಡೆದುಕೊಂಡಿತ್ತು.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್‌ನಲ್ಲಿ ಸದ್ಯ ಕೆಯುವಿ100 ನೆಕ್ಸ್ಟ್, ಎಕ್ಸ್‌ಯುವಿ300, ಬಲೆರೊ, ಮರಾಜೋ, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ಕಾರುಗಳನ್ನು ಮಾರಾಟ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಮಹೀಂದ್ರಾ ಕಾರುಗಳಲ್ಲಿ ಸದ್ಯ ನ್ಯೂ ಜನರೇಷನ್ ಥಾರ್, ಎಕ್ಸ್‌ಯುವಿ300, ಬಲೆರೊ ಮತ್ತು ಸ್ಕಾರ್ಪಿಯೋ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಬಿಡುಗಡೆಯ ಸಿದ್ದತೆಯಲ್ಲಿರುವ ಎಕ್ಸ್‌ಯುವಿ500 ನ್ಯೂ ಜನರೇಷನ್ ಆವೃತ್ತಿಯು ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಬಿಡುಗಡೆಗಾಗಿ ಸಿದ್ದವಾಗಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಇನ್ನು ಹೊಸ ದರ ಪಟ್ಟಿಯಲ್ಲಿ ಆರಂಭಿಕ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5. 87 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.84 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಹೊಸ ದರ ಪಟ್ಟಿಯಲ್ಲಿ ಬೆಲೆ ಹೆಚ್ಚಳದ ನಂತರ ಎಕ್ಸ್‌ಯುವಿ300 ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.55 ಲಕ್ಷ ಬೆಲೆ ಹೊಂದಿದ್ದಲ್ಲಿ ಬಲೆರೊ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.17 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.15 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಮರಾಜೋ ಎಂಪಿವಿ ಕಾರು ಮಾದರಿಯು ಹೊಸ ದರಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.64 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.80 ಲಕ್ಷ ಬೆಲೆ ಹೊಂದಿದ್ದರೆ ಸ್ಕಾರ್ಪಿಯೋ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.68 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.53 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಎಕ್ಸ್‌ಯುವಿ500 ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.83 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.56 ಲಕ್ಷ ಬೆಲೆ ಹೊಂದಿದ್ದು, ವಿವಿಧ ವೆರಿಯೆಂಟ್ ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಮಹೀಂದ್ರಾ ಪ್ರಮುಖ ಕಾರುಗಳ ಬೆಲೆ ಇದೀಗ ಮತ್ತಷ್ಟು ದುಬಾರಿ

ಮಹೀಂದ್ರಾ ಕಂಪನಿಯು ಹೊಸ ದರಪಟ್ಟಿಯಲ್ಲಿ ಕೇವಲ ಎರಡು ಪೆಟ್ರೋಲ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಪೆಟ್ರೋಲ್ ವೆರಿಯೆಂಟ್ ಬೆಲೆಯನ್ನು ಈ ಹಿಂದಿನಂತೆಯೇ ಮುಂದುವರಿಸಿದ್ದು, ಡೀಸೆಲ್ ಎಂಜಿನ್‌ ವೆರಿಯೆಂಟ್‌ಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಮಾಡಿದೆ.

Most Read Articles

Kannada
English summary
Mahindra Cars Price Hiked New Price List Of XUV500 XUV300 Scorpio Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X