ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಭಾರತೀಯ ಮೂಲದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಬಹು ನಿರೀಕ್ಷಿತ ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಆಗಸ್ಟ್ 14 ರಂದು ಅನಾವರಣಗೊಳಿಸಿದೆ. ಇದರ ಜೊತೆಗೆ ಕಂಪನಿಯು ತನ್ನ ಹೊಸ ವಾಹನ ಪರೀಕ್ಷಾ ಟ್ರ್ಯಾಕ್ ಅನ್ನು ಸಹ ಆರಂಭಿಸಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಮಹೀಂದ್ರಾ ಕಂಪನಿಯು ತಮಿಳುನಾಡಿನ ಕಾಂಚೀಪುರಂನಲ್ಲಿ ಎಸ್‌ಯುವಿ ಟೆಸ್ಟ್ ಟ್ರ್ಯಾಕ್ ಅನ್ನು ನಿರ್ಮಿಸಿದೆ. ಕಂಪನಿಯು ಇನ್ನು ಮುಂದೆ ತನ್ನ ಹೊಸ ವಾಹನಗಳನ್ನು ಈ ಟೆಸ್ಟ್ ಟ್ರ್ಯಾಕ್ ನಲ್ಲಿ ಪರೀಕ್ಷಿಸಲಿದೆ. ಈ ಎಸ್‌ಯುವಿ ಟೆಸ್ಟ್ ಟ್ರ್ಯಾಕ್ ಸರಿ ಸುಮಾರು 2 ಚದರ ಕಿ.ಮೀ ಪ್ರದೇಶದಲ್ಲಿ ಹರಡಿದೆ. ಕಂಪನಿಯು ವಿವಿಧ ರೀತಿಯ ಪರೀಕ್ಷೆಯ ಅಗತ್ಯತೆಗಳನ್ನು ಪೂರೈಸಲು 20 ವಿಧದ ಬಹುಪಯೋಗಿ ಟ್ರ್ಯಾಕ್‌ಗಳನ್ನು ರಚಿಸಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಈ ಟೆಸ್ಟ್ ಟ್ರ್ಯಾಕ್ ಚೆನ್ನೈನಲ್ಲಿರುವ ಮಹೀಂದ್ರಾ ಕಂಪನಿಯ ಸಂಶೋಧನಾ ಕೇಂದ್ರದಿಂದ ಕೇವಲ 55 ಕಿ.ಮೀ ದೂರದಲ್ಲಿದೆ. ಈ ಟೆಸ್ಟ್ ಟ್ರ್ಯಾಕ್ ನಿಂದ ಮಹೀಂದ್ರಾ ಕಂಪನಿಯು ತನ್ನ ಹೊಸ ಕಾರುಗಳನ್ನು ಪರೀಕ್ಷಿಸಲು ಸಾಧ್ಯವಾಗಲಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಈ ಟೆಸ್ಟ್ ಟ್ರ್ಯಾಕ್ ಅನ್ನು ಕೇವಲ ವಾಹನಗಳ ಅಭಿವೃದ್ಧಿಗೆ ಮಾತ್ರವಲ್ಲದೆ ಆಟೋಮೊಬೈಲ್ ಫೆಸ್ಟ್ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೂ ಬಳಸಬಹುದು ಎಂದು ಮಹೀಂದ್ರಾ ಕಂಪನಿ ಹೇಳಿದೆ. ಕಂಪನಿಯು ಮುಂದಿನ ವರ್ಷದಿಂದ ಸಾಮಾನ್ಯ ಬಳಕೆಗಾಗಿ ಈ ಟೆಸ್ಟ್ ಟ್ರ್ಯಾಕ್ ಅನ್ನು ತೆರೆಯಲಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಮಹೀಂದ್ರಾ ಎಕ್ಸ್‌ಯು‌ವಿ 700 ಅನಾವರಣ

ಮಹೀಂದ್ರಾ ಕಂಪನಿಯು ಮೊನ್ನೆ ಆಗಸ್ಟ್ 14 ರಂದು ತನ್ನ ಬಹು ನಿರೀಕ್ಷಿತ ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಈ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಆಯ್ಕೆಯೊಂದಿಗೆ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಮಹೀಂದ್ರಾ ಎಕ್ಸ್‌ಯು‌ವಿ 700 ಭಾರತದ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುವ ಮೊದಲ ಎಸ್‌ಯುವಿಯಾಗಿದೆ. ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಎಂಎಕ್ಸ್ ಹಾಗೂ ಎಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಹಾಗೂ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಈ ಎಸ್‌ಯುವಿಯು 5 ಸೀಟರ್ ಹಾಗೂ 7 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಎಕ್ಸ್‌ಯು‌ವಿ 700 ಎಸ್‌ಯುವಿಯ ಎಂಎಕ್ಸ್ ಹಾಗೂ ಎಎಕ್ಸ್ ಮಾದರಿಗಳನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಎಂಎಕ್ಸ್ ಮಾದರಿಯಲ್ಲಿ ಎಂ ಸ್ಟಾಲಿಯನ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 200 ಬಿ‌ಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಡೀಸೆಲ್ ಮಾದರಿಯಲ್ಲಿ ಎಂಹಾಕ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 155 ಬಿಹೆಚ್‌ಪಿ ಪವರ್ ಹಾಗೂ 360 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಎಂಎಕ್ಸ್ ಬೇಸ್ ಮಾದರಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಸ್ಮಾರ್ಟ್ ಡೋರ್ ಹ್ಯಾಂಡಲ್‌, ಎಲ್‌ಇಡಿ ಟೇಲ್ ಲ್ಯಾಂಪ್‌, ಸ್ಟೀಯರಿಂಗ್ ಮೌಂಟೆಡ್ ಸ್ವಿಚ್‌, ಟರ್ನ್ ಇಂಡಿಕೇಟರ್‌ ಹೊಂದಿರುವ ಪವರ್ ಅಡ್ಜಸ್ಟಬಲ್ ಒಆರ್‌ವಿಎಂಗಳನ್ನು ಅಳವಡಿಸಲಾಗಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಇದರ ಜೊತೆಗೆ ಡೇ ನೈಟ್ ಐ‌ಆರ್‌ವಿ‌ಎಂ, ಆರ್ 17 ಸ್ಟೀಯರಿಂಗ್ ವ್ಹೀಲ್ ನಂತಹ ಫೀಚರ್ ಗಳನ್ನು ಸಹ ನೀಡಲಾಗಿದೆ. ಇನ್ನು ಎಎಕ್ಸ್ ಟಾಪ್ ಎಂಡ್ ಮಾದರಿಯಲ್ಲಿ ಅಡ್ವಾನ್ಡ್ ಡ್ರೈವರ್ ಅಸಿಸ್ಟ್ ಸಿಸ್ಟಂ, ಡ್ರೈವರ್ ಡ್ರಡ್ಗರಿ ಅಲರ್ಟ್, ಸ್ಮಾರ್ಟ್ ಕ್ಲೀನ್ ಜೋನ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಆರ್ 18 ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಲೆದರ್ ಸೀಟ್, ಲೆದರ್ ಸ್ಟೀಯರಿಂಗ್, ಗೇರ್ ಲಿವರ್, ಮೆಮೊರಿ ಫಂಕ್ಷನ್ ಹೊಂದಿರುವ 6 ವೇ ಪವರ್ ಸೀಟ್ ಏರ್‌ಬ್ಯಾಗ್‌ಗಳಂತಹ ಫೀಚರ್‌ಗಳನ್ನು ನೀಡಲಾಗುತ್ತದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಈ ಟಾಪ್ ಎಂಡ್ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಸಹ ನೀಡಲಾಗುತ್ತದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಹೊಸ ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಜೊತೆಗೆ ತನ್ನ ಸಮಾಜ ಮುಖಿ ಕಾರ್ಯಗಳಿಗಾಗಿಯೂ ಹೆಸರು ವಾಸಿಯಾಗಿದೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತಕ್ಕೆ ಅಥ್ಲೆಟಿಕ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ತಂದು ಕೊಟ್ಟ ನೀರಜ್ ಚೋಪ್ರಾರವರಿಗೆ ಮಹೀಂದ್ರಾ ಕಂಪನಿಯು ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದೆ. ಈ ಬಗ್ಗೆ ಸ್ವತಃ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರೇ ಮಾಹಿತಿ ನೀಡಿದ್ದಾರೆ.

ಎಸ್‌ಯುವಿಗಳ ಪರೀಕ್ಷೆಗಾಗಿ ಹೊಸ ಟೆಸ್ಟ್ ಟ್ರ್ಯಾಕ್ ಆರಂಭಿಸಿದ ಮಹೀಂದ್ರಾ ಕಂಪನಿ

ಆನಂದ್ ಮಹೀಂದ್ರಾರವರು ಭಾರತದ ಕ್ರೀಡಾ ಪಟುಗಳಿಗೆ ಉಡುಗೊರೆಗಳನ್ನು ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ವರ್ಷದ ಜನವರಿ ತಿಂಗಳಿನಲ್ಲಿಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದ ಯುವ ಕ್ರಿಕೆಟಿಗರಿಗೆ ಆನಂದ್ ಮಹೀಂದ್ರಾರವರು ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ಆ ಕ್ರಿಕೆಟಿಗರು ಭಾರತಕ್ಕೆ ವಾಪಸಾದ ನಂತರ ಅವರಿಗೆ ಥಾರ್ ಎಸ್‌ಯುವಿಯನ್ನು ವಿತರಿಸಲಾಗಿತ್ತು.

Most Read Articles

Kannada
English summary
Mahindra company starts suv testing track in tamilnadu details
Story first published: Monday, August 16, 2021, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X