XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಭಾರತೀಯ ಮೂಲದ Mahindra and Mahindra ಕಂಪನಿಯು ಇತ್ತೀಚೆಗೆ XUV 700 ಎಸ್‌ಯು‌ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎಸ್‌ಯು‌ವಿಗೆ ಭಾರತೀಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿಯೇ ಈ ಎಸ್‌ಯು‌ವಿಯು 50,000 ಯೂನಿಟ್‌ ಬುಕ್ಕಿಂಗ್ ಗಳನ್ನು ಪಡೆದಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

XUV 700 ಎಸ್‌ಯು‌ವಿಯನ್ನು XUV 500 ಮಾದರಿಯ ರೂಪಾಂತರವಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ಗಮನಾರ್ಹ. ಆದರೆ ಈ ಎರಡೂ ಮಾದರಿಗಳ ನಡುವೆ ಹಲವು ವ್ಯತ್ಯಾಸಗಳಿವೆ. ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಬಿಡಿಭಾಗಗಳ ಕಾರಣದಿಂದಾಗಿ ಈ ಎರಡು ಮಾದರಿಗಳು ವಿಭಿನ್ನವಾಗಿ ಕಾಣುತ್ತವೆ. XUV 700 ಎಸ್‌ಯು‌ವಿಯು ಸ್ಮಾರ್ಟ್ ಡೋರ್ ಹ್ಯಾಂಡಲ್‌, ಅಡೋಬ್ ಹಾಗೂ ಮುಂಭಾಗದಲ್ಲಿ ಹೈಟೆಕ್ ಹೆಡ್‌ಲೈಟ್‌ಗಳನ್ನು ಹೊಂದಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

Mahindra ಕಂಪನಿಯು XUV 700 ಎಸ್‌ಯು‌ವಿಯ ಮೂಲ ಮಾದರಿಯಾಗಿದ್ದ XUV 500 ಮಾದರಿಯ ಉತ್ಪಾದನೆಯನ್ನು ನಿಲ್ಲಿಸಿದೆ ಎಂಬ ಸುದ್ದಿ ಹೊರ ಬಿದ್ದಿದೆ. XUV 700 ಮಾದರಿಯು ಜನಪ್ರಿಯವಾಗಿರುವ ಹಿನ್ನೆಲಯಲ್ಲಿ ಕಂಪನಿಯು XUV 500 ಮಾದರಿಯ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಹೊಸ ಲುಕ್ ಹಾಗೂ ವಿಶೇಷ ಫೀಚರ್ ಗಳೊಂದಿಗೆ ಈ ಎಸ್‌ಯು‌ವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

XUV 500 ಎಸ್‌ಯು‌ವಿಯನ್ನು ಅದರ ಪ್ರತಿಸ್ಪರ್ಧಿಗಳಾದ Hyundai Creta, Kia Seltos, MG Hector, Tata Harrier ಎಸ್‌ಯು‌ವಿಗಳೊಂದಿಗೆ ಸ್ಪರ್ಧಿಸಲುಹೊಸ ಫೀಚರ್ ಗಳೊಂದಿಗೆ ನವೀಕರಿಸಿ ಮರು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. Mahindra ಕಂಪನಿಯು ಇತ್ತೀಚೆಗಷ್ಟೇ ಭಾರತದಲ್ಲಿ 9 ಹೊಸ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಈ ಎಲ್ಲಾ ಹೊಸ ವಾಹನಗಳು 2026 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇವುಗಳಲ್ಲಿ ಒಂದು XUV 500 ಎಸ್‌ಯು‌ವಿ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಅದರ ನಿರ್ಗಮನವನ್ನು ಖಚಿತಪಡಿಸಲು XUV 500 ಎಸ್‌ಯು‌ವಿಯ ಬಗೆಗಿನ ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಮಾರಾಟಗಾರರು ಈಗ ಈ ಎಸ್‌ಯು‌ವಿಯ ಬುಕ್ಕಿಂಗ್ ಗಳನ್ನು ನಿಲ್ಲಿಸಿದ್ದಾರೆ ಎಂದು ವರದಿಗಳಾಗಿವೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಈ ಸುದ್ದಿಯು XUV 500 ಪ್ರಿಯರಿಗೆ ನಿರಾಶೆಯನ್ನುಂಟು ಮಾಡಿದೆ. XUV 500 ಹೆಚ್ಚು ಭವ್ಯವಾದ ನೋಟವನ್ನು ಬಯಸುವ ಕಾರು ಪ್ರಿಯರಿಗೆ ಸೂಕ್ತವಾದ ವಾಹನವಾಗಿದೆ. ಶೀಘ್ರದಲ್ಲಿಯೇ ಈ ಎಸ್‌ಯು‌ವಿಯು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರಾಟಕ್ಕೆ ಬರಲಿದೆ ಎಂಬ ಸುದ್ದಿ ಸ್ವಲ್ಪ ಮಟ್ಟಿಗೆ ಸಂತಸವನ್ನುಂಟು ಮಾಡಿದೆ. Mahindra XUV 500 ಎಸ್‌ಯು‌ವಿಯು 2.2 ಲೀಟರ್ ಎಂ ಹಾಕ್ ಬಿಎಸ್ 6 ಡೀಸೆಲ್ ಎಂಜಿನ್‌ ಹೊಂದಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಈ ಎಂಜಿನ್ ಗರಿಷ್ಠ 153 ಬಿ‌ಹೆಚ್‌ಪಿ ಪವರ್ ಹಾಗೂ 360 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುಯಲ್ಗೇರ್‌ಬಾಕ್ಸ್ ಹಾಗೂ 6 ಸ್ಪೀಡ್ ಮ್ಯಾನುಯಲ್ ಟಾರ್ಕ್ ಕನ್ವರ್ಟರ್ ನೊಂದಿಗೆ ಲಭ್ಯವಿತ್ತು.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಮಹೀಂದ್ರಾ ಕಂಪನಿಯ ಇತರ ಸುದ್ದಿಗಳ ಬಗ್ಗೆ ನೋಡುವುದಾದರೆ, ಭಾರತದ ಅತಿ ದೊಡ್ಡ ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಸೇವಾ ಕಂಪನಿಯಾದ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ (Mahindra Logistics) ಇತ್ತೀಚಿಗಷ್ಟೇ ಮೆರು ಟ್ರಾವೆಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (MTSPL) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಈ ಸ್ವಾಧೀನದೊಂದಿಗೆ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ MTSPL ನಿಂದ ಮೇರು ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್, ವಿ ಲಿಂಕ್ ಫ್ಲೀಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ವಿ ಲಿಂಕ್ ಆಟೋಮೋಟಿವ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ 100% ನಷ್ಟು ಈಕ್ವಿಟಿ ಷೇರು ಬಂಡವಾಳವನ್ನು ಪಡೆದುಕೊಳ್ಳಲಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಮಹೀಂದ್ರಾ ಲಾಜಿಸ್ಟಿಕ್ಸ್ ಹೇಳುವಂತೆ ಮೆರು ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದರಿಂದ ಎಲೆಕ್ಟ್ರಿಕ್ ಮೊಬಿಲಿಟಿಯ ಮೇಲೆ ಗಮನಹರಿಸುವುದರ ಜೊತೆಗೆ ಅದರ ಚಲನಶೀಲತೆಯ ಸರಣಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಈಗಾಗಲೇ ತನ್ನ ಎಂಟರ್‌ಪ್ರೈಸ್ ಮೊಬಿಲಿಟಿ ಸರ್ವಿಸ್ (ಇಟಿಎಂಎಸ್) ಮೂಲಕ ಈ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಈ ವ್ಯವಹಾರವು ಅಲೈಟ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಅಂದ ಹಾಗೆ ಮೆರು ಕ್ಯಾಬ್ಸ್ ಅನ್ನು 2006 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಜನರು ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ವಿಧಾನವನ್ನು ಬದಲಿಸಿತು. ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ಎಸಿ ಕ್ಯಾಬ್ ಅನ್ನು ನೀಡುತ್ತದೆ. ಸದ್ಯಕ್ಕೆ ಮೆರು ವಿಮಾನ ನಿಲ್ದಾಣದ ರೈಡ್ ಹೆಲಿಂಗ್ ವಿಭಾಗದಲ್ಲಿ ಹೆಚ್ಚು ಭಾಗಿಯಾಗಿದೆ. ಕಂಪನಿಯು ದೇಶದಲ್ಲಿರುವ ಕಾರ್ಪೊರೇಟ್‌ ಕಂಪನಿಗಳಿಗೆ ಆನ್ ಕಾಲ್ ಹಾಗೂ ಎಂಪ್ಲಾಯಿ ಮೊಬಿಲಿಟಿ ಸೇವೆಗಳನ್ನು ಒದಗಿಸುತ್ತದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಇದರ ಜೊತೆಗೆ ಮೆರು ಕಂಪನಿಯು ತನ್ನ ಸರಣಿಯಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ. ಇನ್ನು ಮಹೀಂದ್ರ ಅಲೈಟ್ ಬಗ್ಗೆ ಹೇಳುವುದಾದರೆ, ಇದು ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ದೆಹಲಿಯಂತಹ ಪ್ರಮುಖ ಮಹಾನಗರಗಳಲ್ಲಿ ಲಭ್ಯವಿರುವ ಕ್ಯಾಬ್ ಸೇವೆಯಾಗಿದೆ. ಕಂಪನಿಯು ಬಿಸಿನೆಸ್ ಟು ಬಿಸಿನೆಸ್ ಗ್ರಾಹಕರಿಗೆ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

ಮಹೀಂದ್ರಾ ಅಲೈಟ್ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆನ್ ಡಿಮಾಂಡ್ ಡೋರ್ ಸ್ಟೆಪ್ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ. ಇದಕ್ಕಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅಲೈಟ್ ಕ್ಯಾಬ್‌ಗಳ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಂಪನಿಯ ಪ್ರಮುಖ ಸೇವೆಗಳಲ್ಲಿ ಏರ್‌ಪೋರ್ಟ್ ಕ್ಯಾಬ್‌ಗಳನ್ನು ಸಹ ಸೇರಿಸಲಾಗಿದೆ.

XUV 500 ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ Mahindra

2020 ರ ವೇಳೆಗೆ ಮಹೀಂದ್ರಾ ಅಲೈಟ್, ಮೆರು ಕ್ಯಾಬ್ಸ್‌ನಲ್ಲಿ 55% ನಷ್ಟು ಪಾಲನ್ನು ಹೊಂದಿತ್ತು. ಮಹೀಂದ್ರಾ ಅಲೈಟ್ ತನ್ನ ವಿಭಾಗದಲ್ಲಿ ಓಲಾ ಕ್ಯಾಬ್ಸ್ ಹಾಗೂ ಉಬರ್‌ ಕಂಪನಿಗಳಿಗೆ ಪೈಪೋಟಿ ನೀಡುತ್ತದೆ. Ola ಹಾಗೂ Uber ಕಂಪನಿಗಳು ಶೇರ್ ಮೊಬಿಲಿಟಿ ವಿಭಾಗದಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದರೂ ಅಲೈಟ್ ಬಿಸಿನೆಸ್ ಟು ಬಿಸಿನೆಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

Most Read Articles

Kannada
English summary
Mahindra company stops the production of xuv 500 suv details
Story first published: Saturday, November 13, 2021, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X