ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಭಾರತೀಯ ಮೂಲದ ಕಾರು ತಯಾರಕ ಮಹೀಂದ್ರಾ ತನ್ನ ಬೊಲೆರೊ ಪವರ್ ಪ್ಲಸ್ ಹಾಗೂ ಸ್ಕಾರ್ಪಿಯೋಗಳಂತಹ ಎಸ್‌ಯುವಿಗಳ ವಾರಂಟಿಯನ್ನು 2 ವರ್ಷಗಳವರೆಗೆ ವಿಸ್ತರಿಸಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಬೊಲೆರೊ ಹಾಗೂ ಸ್ಕಾರ್ಪಿಯೋ ಎರಡೂ ಎಸ್‌ಯುವಿಗಳು ಮಹೀಂದ್ರಾ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿವೆ. ವಾರಂಟಿ ಅವಧಿಯನ್ನು ವಿಸ್ತರಿಸಿದ ನಂತರ ಗ್ರಾಹಕರು ಈಗ ಈ ಎರಡು ಎಸ್‌ಯುವಿಗಳ ಮೇಲೆ 7 ವರ್ಷಗಳ ಸ್ಟಾಂಡರ್ಡ್ ವಾರಂಟಿ ಪಡೆಯಲಿದ್ದಾರೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಹೊಸ ವಾರಂಟಿ ಯೋಜನೆಯ ವಿಶೇಷತೆ:

ಎಕ್ಸ್'ಟೆಂಡೆಡ್ ವಾರಂಟಿಯ ಅಡಿಯಲ್ಲಿ ಮಹೀಂದ್ರ ಬೊಲೆರೊ ಪವರ್ ಪ್ಲಸ್‌ ಎಸ್‌ಯುವಿಯ ಮೇಲೆ 7 ವರ್ಷ ಅಥವಾ 1.50 ಲಕ್ಷ ಕಿ.ಮೀಗಳ ವಾರಂಟಿ ನೀಡಲಾಗುತ್ತದೆ. ಇನ್ನು ಸ್ಕಾರ್ಪಿಯೋ ಎಸ್‌ಯುವಿ ಮೇಲೆ 7 ವರ್ಷ ಅಥವಾ 1.70 ಲಕ್ಷ ಕಿ.ಮೀಗಳ ವಾರಂಟಿ ನೀಡಲಾಗುತ್ತದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಕವರೇಜ್ ಅನುಮೋದನೆ, ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮಹೀಂದ್ರಾ ಕಂಪನಿಯು ವಾರಂಟಿ (ಶೀಲ್ಡ್) ಕಾರ್ಯಕ್ರಮವನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಎಂಜಿನ್ ಭಾಗಗಳು, ಟ್ರಾನ್ಸ್ ಮಿಷನ್ ಸಿಸ್ಟಂ, ಕೂಲಿಂಗ್ ಸಿಸ್ಟಂ, ಫ್ಯೂಯಲ್ ಸಿಸ್ಟಂ, ಸಸ್ಪೆಂಷನ್ ಸಿಸ್ಟಂ, ಮೆಕಾನಿಕಲ್ ಅಂಶಗಳಿಗೆ ಕವರೇಜ್ ಪಡೆಯುತ್ತಾರೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಹೆಚ್ಚು ರಿ ಸೇಲ್ ವ್ಯಾಲ್ಯು ಪಡೆಯಲು ಅನುಕೂಲ:

ಅನುಕೂಲಕರವಾದ ಮಾಲೀಕತ್ವ ವರ್ಗಾವಣೆ ಹಾಗೂ ಸುಲಭ ಇಎಂಐ ಸೌಲಭ್ಯಗಳ ಜೊತೆಗೆ ಎರಡೂ ಎಸ್‌ಯುವಿಗಳಿಗೆ ಹೆಚ್ಚಿನ ರಿ ಸೇಲ್ ಮೌಲ್ಯವನ್ನು ನೀಡುವುದಾಗಿ ಮಹೀಂದ್ರಾ ಕಂಪನಿ ಹೇಳಿಕೊಂಡಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ವಾರಂಟಿಯನ್ನು ವಿಸ್ತರಿಸುವ ಮೂಲಕ ಮುಂಬರುವ ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಮಹೀಂದ್ರಾ ಕಂಪನಿಯು ಯೋಜಿಸಿದೆ. ಮಹೀಂದ್ರಾ ಬೊಲೆರೊ ಪವರ್ ಪ್ಲಸ್ ಕಳೆದ ವರ್ಷ ಬಿಡುಗಡೆಯಾದ ಹಳೆಯ ಬೊಲೆರೊದ ಫೇಸ್ ಲಿಫ್ಟ್ ಆವೃತ್ತಿಯಾಗಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಬೊಲೆರೊ ಪವರ್ ಪ್ಲಸ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 7.61 ಲಕ್ಷಗಳಿಂದ ರೂ. 9.08 ಲಕ್ಷಗಳಾಗಿದೆ. ಬೊಲೆರೋ ಪವರ್ ಪ್ಲಸ್ ಎಸ್‌ಯುವಿಯನ್ನು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದರ ಎಂಜಿನ್ 70 ಬಿಹೆಚ್‌ಪಿ ಪವರ್ ಹಾಗೂ 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮಹೀಂದ್ರ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ 2.2 ಲೀಟರ್ 4 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಈ ಎಂಜಿನ್ 140 ಬಿಹೆಚ್‌ಪಿ ಪವರ್ ಹಾಗೂ 319 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಕಾರ್ಪಿಯೋ ಎಸ್‌ಯುವಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ. ಸ್ಕಾರ್ಪಿಯೋ ಎಸ್‌ಯುವಿಯು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಈ ಸಿಸ್ಟಂ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇಯನ್ನು ಹೊಂದಿದೆ. ಇದರ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಸಿ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಪವರ್ ಸ್ಟೀಯರಿಂಗ್ ಹಾಗೂ 12 ವೋಲ್ಟ್ ಚಾರ್ಜಿಂಗ್ ಸಾಕೆಟ್ ಗಳನ್ನು ನೀಡಲಾಗಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಸುರಕ್ಷತೆಗಾಗಿ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಎರಡು ಏರ್‌ಬ್ಯಾಗ್‌, ಎಬಿಎಸ್, ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್'ಗಳನ್ನು ನೀಡಲಾಗಿದೆ. ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12.59 ಲಕ್ಷಗಳಿಂದ ರೂ. 17.39 ಲಕ್ಷಗಳಾಗಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕಳೆದ ತಿಂಗಳು ಬೊಲೆರೊ ಎಸ್‌ಯುವಿಯ ಹೊಸ ಮಾದರಿಯಾದ ನಿಯೋವನ್ನು ಬಿಡುಗಡೆಗೊಳಿಸಿತ್ತು. ಕಂಪನಿಯು ಈಗ ಹೊಸ ತಲೆಮಾರಿನ ಸ್ಕಾರ್ಪಿಯೋವನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ.

ಬೊಲೆರೊ, ಸ್ಕಾರ್ಪಿಯೋ ಎಸ್‌ಯುವಿಗಳ ವಾರಂಟಿ ಅವಧಿ ಹೆಚ್ಚಿಸಿದ ಮಹೀಂದ್ರಾ

ಹೊಸ ತಲೆಮಾರಿನ ಸ್ಕಾರ್ಪಿಯೋವನ್ನು 2022 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಹೊಸ ತಲೆಮಾರಿನ ಸ್ಕಾರ್ಪಿಯೋ ಹಳೆಯ ಮಾದರಿಗಿಂತ ದೊಡ್ಡ ಗಾತ್ರವನ್ನು ಹೊಂದಿರಲಿದೆ. ಜೊತೆಗೆ ಹೊಸ ಮಾದರಿಯಲ್ಲಿ ಸನ್ ರೂಫ್ ಅನ್ನು ಸಹ ನೀಡಲಾಗುವುದು.

Most Read Articles

Kannada
English summary
Mahindra extends warranty of bolero power plus and scorpio suvs details
Story first published: Thursday, August 5, 2021, 10:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X