ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಮಹೀಂದ್ರಾ(Mahindra) ಕಂಪನಿಯ ತನ್ನ ಹೊಚ್ಚ ಹೊಸ ಎಕ್ಸ್‌ಯುವಿ700(XUV700) ಎಸ್‌ಯುವಿ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಹೊಸ ಕಾರು ಮಾದರಿಯಾಗಿ ಕಂಪನಿಯು ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಅಭಿವೃದ್ದಿಪಡಿಸಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯನ್ನು ಆಧರಿಸಿ ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಂಡಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದೆ. ಹೊಸ ಎಸ್‌ಯುವಿ ಮಾದರಿಯು ಪ್ರಮುಖ ಎರಡು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎರಡು ಮಾದರಿಗಳಲ್ಲಿ ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಕಾರಿನ ಆರಂಭಿಕವಾಗಿ ಎಂಎಕ್ಸ್ ಸೀರಿಸ್ ಮತ್ತು ಟಾಪ್ ಎಂಡ್‌ನಲ್ಲಿ ಆಂಡ್ರಿನೊಎಕ್ಸ್ ಸೀರಿಸ್‌ ಒಳಗೊಂಡಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 5 ಸೀಟರ್‌ ಮತ್ತು 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಆಂಡ್ರಿನೊಎಕ್ಸ್ ಸೀರಿಸ್‌ ಕಾರುಗಳು ಆರಂಭಿಕ ಮಾದರಿಗಿಂತಲೂ ತುಸು ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಂಡಿರಲಿವೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ವೆರಿಯೆಂಟ್ ನಂತರ AX3, AX5 ಮತ್ತು AX7 ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಎಕ್ಸ್ ಸೀರಿಸ್ ಮಾದರಿಗಳು ಕಂಪನಿಯ 64 ಫೀಚರ್ಸ್ ಒಳಗೊಂಡ ಆ್ಯಂಡಿನೊಎಕ್ಸ್ ಕಾರ್ ಕನೆಕ್ಟ್ ಟೆಕ್ನಾಲಜಿ ಹೊಂದಿರಲಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ಹೊಸ ಕಾರ್ ಕೆನೆಕ್ಟ್ ಸೌಲಭ್ಯದಲ್ಲಿ ವ್ಯಯಕ್ತಿಕರಣಗೊಳಿಸಿದ ಸುರಕ್ಷಾ ಸೌಲಭ್ಯಗಳು ಸಹ ಲಭ್ಯವಿದ್ದು, ವಾರ್ಷಿಕವಾಗಿ ಇಂತಿಷ್ಟು ಶುಲ್ಕ ಪಾವತಿ ಚಂದಾದಾರಿಕೆ ಪಡೆದುಕೊಳ್ಳಕೊಳ್ಳಬೇಕಾಗುತ್ತದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಕಾರ್ ಕನೆಕ್ಟ್ ಮೂಲಕ ರಿಮೋಟ್ ಫೀಚರ್ಸ್ ಕಂಟ್ರೋಲ್, ಸ್ಮಾರ್ಟ್ ಫೀಚರ್ಸ್‌ಗಳು, ವಾಹನ ಮಾಹಿತಿ ಎಚ್ಚರಿಕೆಗಳು, ಸ್ಥಳ ಆಧಾರಿತ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಯಾವುದೇ ಬಟನ್ ಬಳಕೆ ಮಾಡದೆಯೇ ಧ್ವನಿ ಸಂಜ್ಞೆಯ ಮೂಲಕವೇ ಕ್ಯಾಬಿನ್ ಫೀಚರ್ಸ್‌ಗಳನ್ನು ನಿಯಂತ್ರಣ ಮಾಡಬಹುದು.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಕಾರಿನ ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಇದು 5 ಸೀಟರ್ ಮಾದರಿಯನ್ನು ಮಾತ್ರ ಮಾಡಲಿದ್ದು, ಎಎಕ್ಸ್ ಸೀರಿಸ್‌ಗಳಲ್ಲಿ 5 ಸೀಟರ್ ಮತ್ತು 7 ಸೀಟರ್ ಸೌಲಭ್ಯ ನೀಡಿದೆ. ಒಂದು ವೇಳೆ 5 ಸೀಟರ್ ಮಾದರಿಯಲ್ಲಿ 7 ಸೀಟರ್ ಸೌಲಭ್ಯ ಬಯಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 60 ಸಾವಿರ ಪಾವತಿಸಬೇಕಾಗುತ್ತದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಹೊಸ ಎಕ್ಸ್‌ಯುವಿ700 ಮಾದರಿಯ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಬ್ರಾಂಡ್ ನ್ಯೂ ಲೋಗೋ ನೀಡುತ್ತಿರುವುದು ಮಹತ್ವದ ಬದಲಾವಣೆಯಾಗಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಟಾಪ್ ಎಂಡ್ ಮಾದರಿಗಳಲ್ಲಿರುವ ಎಎಕ್ಸ್3 ವೆರಿಯೆಂಟ್‌ನಲ್ಲಿ ಕಂಪನಿಯು ಐದು ಆಸನ ಸೌಲಭ್ಯವನ್ನು ಮಾತ್ರ ನೀಡಿದ್ದು, ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರಲಿದೆಯೆಂತೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯ ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಬಹುದಾಗಿದೆ.

ಹೊಸ XUV700 ಕಾರಿನ ಆಂಡ್ರಿನೊಎಕ್ಸ್ ಕಾರ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದ Mahindra

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಲಿದೆಯೆಂತೆ.

Most Read Articles

Kannada
English summary
Mahindra introduce adrenox app on google play store for xuv700 suv
Story first published: Monday, October 4, 2021, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X