ಬಹುನಿರೀಕ್ಷಿತ 2022ರ Mahindra Roxor ಆಫ್-ರೋಡರ್ ಬಿಡುಗಡೆ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ರೊಕ್ಸರ್ ಆಫ್-ರೋಡರ್ ಮಾದರಿಯನ್ನು ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಮಹೀಂದ್ರಾ ರೊಕ್ಸರ್ ಮಾದರಿಯು ಆಫ್-ರೋಡ್ ವಾಹನಗಳ ಅಭಿಮಾನಿಗಳನ್ನು ಸೆಳೆಯುವಂತಹ ವಿನ್ಯಾಸವನ್ನು ಹೊಂದಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಮಹೀಂದ್ರಾ ರೊಕ್ಸರ್ ಮಾದರಿಯ ಆರಂಭಿಕ ಬೆಲೆಯು USD 18,899 ಆಗಿದೆ, ಭಾರತದ ಕರೆನ್ಸಿ ಪ್ರಕಾರ ಅಂದಾಜು ರೂ.14.04 ಲಕ್ಷವಾಗಿದೆ. ಈ ಮಹೀಂದ್ರಾ ರೊಕ್ಸರ್ ಅನ್ನು ಅಮೆರಿಕಾದಲ್ಲಿ 2018ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿತ್ತು. ಈ ಆಫ್-ರೋಡರ್ ಅನ್ನು ಅದರ ಮೂಲ ಜೀಪ್ ಮಾದರಿಯ ವಿನ್ಯಾಸದಿಂದಾಗಿ ಎಫ್‌ಸಿಎ (ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್) ಕಂಪನಿಯು ದೂರು ನೀಡಿದ್ದರು. ಎಫ್‌ಸಿಎ ಕಂಪನಿಯ ಜೀಪ್ ವಾಹನದ ವಿನ್ಯಾಸವನ್ನು ಕಾಪಿ ಮಾಡಿ ಮಹೀಂದ್ರಾ ರೊಕ್ಸರ್ ಆಪ್ ರೋಡರ್ ಅನ್ನು ತಯಾರಿಸಲಾಗಿದೆ ಎಂದು ಎಫ್‌ಸಿಎ ದೂರು ನೀಡಿದ್ದರು. ಈ ಬಗ್ಗೆ ಅಂತರಾಷ್ಟ್ರೀಯ ವ್ಯಾಪಾರ ಆಯೋಗ(ಐಟಿಸಿ) ಪರಿಶೀಲಿಸಿದ ಬಳಿಕ ಜೀಪ್ ವಿನ್ಯಾಸವನ್ನು ಕಾಪಿ ಮಾಡಿ ನಿಯಮ ಉಲ್ಲಂಘನೆ ಮಾಡಿದೆ ಎಂದು ತೀರ್ಫು ನೀಡಿದರು. ಇದರಿಂದಾಗಿ ಮಹೀಂದ್ರಾ ರೊಕ್ಸರ್ ಅನ್ನು ಸ್ಥಗಿತಗೊಳಿಸಿದ್ದರು.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಆದರೂ ಮಹೀಂದ್ರಾ ಕಂಪನಿಯು ಹಿಂದೆ ಸರಿಯಲು ಸಿದ್ದರಾಗದೆ ಮುಂಭಾಗದ ವಿನ್ಯಾಸವನ್ನು ಬದಲಾಯಿಸಬೇಕಾಗಿತ್ತುಹೊಸ ವಿನ್ಯಾಸಕ್ಕಾಗಿ ಲಂಬವಾದ ಗ್ರಿಲ್ ಸ್ಲ್ಯಾಟ್‌ಗಳನ್ನು ತೆಗೆದುಹಾಕಲಾಗಿದೆ ಆದರೆ ಅದು ಅಂತ್ಯವಾಗಿರಲಿಲ್ಲ.ನಂತರ, ನವೀಕರಿಸಿದ ಮಾದರಿಯು ಜೀಪ್ ವಿನ್ಯಾಸಕ್ಕಿಂತ ಭಿನ್ನವಾಗಿದೆ ಎಂದು ಕಾನೂನುಬದ್ಧವಾಗಿ ಹೇಳುವ ಮೊದಲು ಯುನೈಟೆಡ್ ಸ್ಟೇಟ್ಸ್ ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ ಅಮೇರಿಕಾದಲ್ಲಿ ಮಹೀಂದ್ರಾ ರೊಕ್ಸರ್ ಮಾರಾಟವನ್ನು ತಡೆ ನೀಡಿದರು.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

2021ಕ್ಕೆ ಫಾಸ್ಟ್-ಫಾರ್ವರ್ಡ್ ಮಾಡಲಾಗುತ್ತಿದೆ, ಫೇಸ್‌ಲಿಫ್ಟ್ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ ಆದರೆ ಅದರ ಅಡಿಯಲ್ಲಿ ಬದಲಾಗದೆ ಉಳಿಯುತ್ತದೆ ಮತ್ತು ಇಲ್ಲಿ ನಾವು ಹಳೆಯ-ಜೆನ್ ಥಾರ್ ಆಧಾರಿತ ಆಫ್-ರೋಡರ್‌ನ ಎಲ್ಲಾ ಲೋ ಡೌನ್ ಅನ್ನು ನೀಡುತ್ತೇವೆ. ಕಾಸ್ಮೆಟಿಕ್ ಬದಲಾವಣೆಗಳ ಬಳಿಕ ಬಿಡುಗಡೆಗೊಳಿಸಲಾಗಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

2022ರ ಮಹೀಂದ್ರಾ ರೊಕ್ಸರ್ ಹೊಸ ಮುಂಭಾಗದ ಫಾಸಿಕವನ್ನು ಹೊಂದಿದ್ದು, ವಿಭಿನ್ನ ಬ್ಲ್ಯಾಕ್ ಗ್ರಿಲ್ ಬಾರ್, ಸುತ್ತಿನ ಆಕಾರದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಇದು ಹೆಚ್ಚು ಒಗ್ಗೂಡಿಸುವ ಕ್ಲಸ್ಟರ್, ಫ್ಲಾಟ್ ಬಾನೆಟ್ ರಚನೆ, ತೆರೆದ ಫೆಂಡರ್‌ಗಳು, ಗಟ್ಟಿಮುಟ್ಟಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಮಹೀಂದ್ರಾ ಬ್ಯಾಡ್ಜ್ ಅನ್ನು ಕೆಳಗೆ ನೀಡಲಾಗಿದೆ. ಮುಂಭಾಗದ ವಿಂಡ್‌ಶೀಲ್ಡ್, ಆಲ್-ವೆದರ್ ಟೈರ್‌ಗಳು, ವಿಂಚ್ ಮತ್ತು ಟೋವಿಂಗ್ ಸೌಲಭ್ಯಗಳನ್ನು ಹೊಂದಿವೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಜೀಪ್ ಹೇಳಿಕೊಂಡಂತೆ ಯಾವುದೂ ಒಂದೇ ರೀತಿ ಕಾಣದಂತೆ ಮಹೀಂದ್ರಾ ಖಚಿತಪಡಿಸಿಕೊಂಡಿರುವುದರಿಂದ ಮುಂಭಾಗದ ಫೆಂಡರ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ. ಎಂಟ್ರಿ ಲೆವೆಲ್ ಮಾದರಿಗಾಗಿ ಇದನ್ನು ತೆರೆದ ಕ್ಯಾಬ್ ಆಗಿ ಖರೀದಿಸಬಹುದು ಮತ್ತು ಆಲ್-ವೆದರ್ ಮಾದರಿಯು ಸುತ್ತುವರಿದ ಕ್ಯಾಬಿನ್‌ನೊಂದಿಗೆ ಬರುತ್ತದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಯಾವುದೇ ಕಾರ್ಯಕ್ಷಮತೆಯ ಬದಲಾವಣೆಗಳಿಲ್ಲದೆ, 2022ರ ಮಹೀಂದ್ರಾ ರೊಕ್ಸರ್ 2.5-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಬಳಸುವುದನ್ನು ಮುಂದುವರೆಸಿದೆ. ಈ ಎಂಜಿನ್ 62 ಬಿಹೆಚ್‌ಪಿ ಪವರ್ ಮತ್ತು 195 ಎನ್ಎಂ ಟಾರ್ಕ್ ಅನ್ನು ಉತ್ಪಾದನೆಯನ್ನು ಉತ್ಪಾದಿಸಲು ಸಾಕಷ್ಟು ಉತ್ತಮವಾಗಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಈ ರೊಕ್ಸರ್ ಆಪ್-ರೋಡರ್ ಮಾದರಿಯಲ್ಲಿ ಫೋರ್ ವ್ಹೀಲ್ ಡ್ರೈವ್ ಅನ್ನು ಒಳಗೊಂಡಿದೆ. ಥಾರ್ ರೀತಿಯಲ್ಲೇ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರಬಹುದು.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ರೊಕ್ಸರ್ ಮಿಚಿಗನ್‌ನ ಆಬರ್ನ್ ಹಿಲ್ಸ್‌ನಲ್ಲಿ ಮಹೀಂದ್ರಾ ಅಟೋಮೋಟಿವ್ ನಾರ್ತ್ ಅಮೇರಿಕಾ(ಎಂಎಎನ್ಎ) ಉತ್ಪಾದಿಸಬಹುದು. ಇದು ಅಮೆರಿಕಾದಲ್ಲಿ ಮಹೀಂದ್ರಾ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ರೊಕ್ಸರ್ ಅನ್ನು ಲ್ಯಾಡರ್-ಫ್ರೇಮ್-ಚಾಸಿಸ್ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ, ಇದು ಹಿಂದಿನ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿ ಆಧಾರವಾಗಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಸ್ಥಗಿತಗೊಂಡ ರೊಕ್ಸರ್ ಆಫ್-ರೋಡರ್ ನಲ್ಲಿ ಟ್ರಾನ್ಸ್‌ಫರ್ ಕೇಸ್, ಸುತ್ತಲೂ ಲೀಫ್-ಸ್ಪ್ರಿಂಗ್ ಸಸ್ಪೆಂಕ್ಷನ್ ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿತ್ತು. ಇನ್ನು ಮಹೀಂದ್ರಾ ಕಂಪನಿಯು ಕನನೂ ಹೋರಾಟ ನಡೆಸಿ ಸೋಲು ಕಂಡರು ಹಿಂದೆ ಸರಿಯಲ್ಲಿಲ್ಲ. ವಿನ್ಯಾಸದಲ್ಲಿ ಬದಲಾವಣೆಗಳೊಂದಿಗೆ ರೊಕ್ಸರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವಲ್ಲಿ ಮಹೀಂದ್ರಾ ಕಂಪನಿಯು ಯಶಸ್ವಿಯಾಗಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ನಡೆಸಿದ ಆಡಳಿತ ಮಂಡಳಿಯ ಸಭೆಯಲ್ಲಿ ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಹತ್ವದ ಮಾತುಕತೆ ನಡೆಸಿದೆ, ಮುಂದಿನ ಐದು ವರ್ಷಗಳಲ್ಲಿ ಒಟ್ಟು 13 ಕಾರುಗಳನ್ನು ಬಿಡುಗಡೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಇದರಲ್ಲಿ ಎಂಟು ಎಲೆಕ್ಟ್ರಿಕ್ ಕಾರುಗಳು ಮತ್ತು ಐದು ಸಾಮಾನ್ಯ ಕಾರು ಮಾದರಿಗಳ ಬಿಡುಗಡೆಯಾದರೆ, ಎಲೆಕ್ಟ್ರಿಕ್ ಕಾರುಗಳು 2022ರಿಂದ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

2022ರಿಂದ 2027ರ ತನಕ ಎಂಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮಹೀಂದ್ರಾ ಕಂಪನಿಯು ಆರಂಭಿಕವಾಗಿ ಇಕೆಯುವಿ100 ನಂತರ ಇಎಕ್ಸ್‌ಯುವಿ300 ಬಿಡುಗಡೆ ಮಾಡಬಹುದು, ತದನಂತರ ಮಾರುಕಟ್ಟೆಯಲ್ಲಿ ಇತರೆ ಕಾರುಗಳ ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಲಿದೆ. ಮಹೀಂದ್ರಾ ಕಂಪನಿಯು ಹೊಸದಾಗಿ ಡೀಸೆಲ್ ಕಾರುಗಳ ಅಭಿವೃದ್ದಿಯನ್ನು ಹಂತ-ಹಂತವಾಗಿ ಕಡಿತಗೊಳಿಸುತ್ತಿದೆ, ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ, ಯಾಕೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಂದೆ ಎಲೆಕ್ಟ್ರಿಕ್ ವಾಹನಗಳೇ ಪಾರುಪತ್ಯ ಸಾಧಿಸಲಿದೆ.

ಬಹುನಿರೀಕ್ಷಿತ 2022ರ Mahindra Roxor ಆಪ್-ರೋಡರ್ ಬಿಡುಗಡೆ

ಒಟ್ಟಿನಲ್ಲಿ ಮಹೀಂದ್ರಾ ಕಂಪನಿಯು ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಯಲ್ಲಿ ರೊಕ್ಸರ್ ಆಫ್-ರೋಡರ್ ಅನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಹೊಸ ಮಹೀಂದ್ರಾ ರೊಕ್ಸರ್ ಆಫ್-ರೋಡರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡ್ ಮಾದರಿಯಾಗಿ ಥಾರ್ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಬಗ್ಗೆ ಹೆಚ್ಚಿನ ಗಮನಹರಿಸುತ್ತ

Most Read Articles

Kannada
English summary
Mahindra launched new 2022 roxor design price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X