Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಭಾರತದ ಅತಿ ದೊಡ್ಡ ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಸೇವಾ ಕಂಪನಿಯಾದ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ (Mahindra Logistics), ಮೇರು ಟ್ರಾವೆಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (MTSPL) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಸ್ವಾಧೀನದೊಂದಿಗೆ, ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ MTSPL ನಿಂದ ಮೇರು ಮೊಬಿಲಿಟಿ ಟೆಕ್ ಪ್ರೈವೇಟ್ ಲಿಮಿಟೆಡ್, ವಿ ಲಿಂಕ್ ಫ್ಲೀಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ವಿ ಲಿಂಕ್ ಆಟೋಮೋಟಿವ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ 100% ನಷ್ಟು ಈಕ್ವಿಟಿ ಷೇರು ಬಂಡವಾಳವನ್ನು ಪಡೆದುಕೊಳ್ಳಲಿದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಮಹೀಂದ್ರಾ ಲಾಜಿಸ್ಟಿಕ್ಸ್ ಹೇಳುವಂತೆ ಮೆರು ಕಂಪನಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದರಿಂದ ಎಲೆಕ್ಟ್ರಿಕ್ ಮೊಬಿಲಿಟಿಯ ಮೇಲೆ ಗಮನಹರಿಸುವುದರ ಜೊತೆಗೆ ಅದರ ಚಲನಶೀಲತೆಯ ಸರಣಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಈಗಾಗಲೇ ತನ್ನ ಎಂಟರ್‌ಪ್ರೈಸ್ ಮೊಬಿಲಿಟಿ ಸರ್ವಿಸ್ (ಇಟಿಎಂಎಸ್) ಮೂಲಕ ಈ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಈ ವ್ಯವಹಾರವು ಅಲೈಟ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಮೆರು ಸ್ವಾಧೀನದ ಕುರಿತು ಪ್ರತಿಕ್ರಿಯೆ ನೀಡಿರುವ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಎಂಡಿ ಹಾಗೂ ಸಹ ಸಿಇಒ ರಾಮಪ್ರವೀಣ್ ಸ್ವಾಮಿನಾಥನ್ ರವರು, ಮೊಬಿಲಿಟಿಯಲ್ಲಿ ಮುಂಚೂಣಿಯಲ್ಲಿರುವ ಮೆರು ಕಂಪನಿಯನ್ನು ಮಹೀಂದ್ರಾ ಲಾಜಿಸ್ಟಿಕ್ಸ್ ಕುಟುಂಬಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮ ಮೊಬಿಲಿಟಿ ಪೋರ್ಟ್‌ಫೋಲಿಯೊ ವಿಸ್ತರಣೆಯಾಗುತ್ತಿದೆ. ಪೂರೈಕೆ, ತಂತ್ರಜ್ಞಾನ ನಿರ್ವಹಣೆ ಹಾಗೂ ಎಲೆಕ್ಟ್ರಿಕ್ ಚಲನಶೀಲತೆಯಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತೇವೆ ಎಂದು ಹೇಳಿದರು.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಮೆರು ಹಾಗೂ ಅಲೈಟ್‌ನ ಸಂಯೋಜಿತ ಸಾಮರ್ಥ್ಯಗಳು ನಮ್ಮ B2C ಹಾಗೂ ಎಂಟರ್‌ಪ್ರೈಸ್ ಗ್ರಾಹಕರಿಗೆ ಭದ್ರತೆ, ಗ್ರಾಹಕ ಸೇವೆ ಹಾಗೂ ಸ್ಥಿರತೆಯ ಭರವಸೆಯನ್ನು ನೀಡುವ ಮೂಲಕ ವಿಸ್ತೃತ ಪೋರ್ಟ್‌ಫೋಲಿಯೊ ಸೇವೆಗಳೊಂದಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ನಮಗೆ ನೆರವಾಗುತ್ತವೆ ಎಂದು ಅವರು ಹೇಳಿದರು.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಅಂದ ಹಾಗೆ ಮೆರು ಕ್ಯಾಬ್ಸ್ ಅನ್ನು 2006 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಜನರು ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ವಿಧಾನವನ್ನು ಬದಲಿಸಿತು. ಕಂಪನಿಯು ಗ್ರಾಹಕರ ಮನೆಬಾಗಿಲಿಗೆ ಎಸಿ ಕ್ಯಾಬ್ ಅನ್ನು ನೀಡುತ್ತದೆ. ಸದ್ಯಕ್ಕೆ ಮೆರು ವಿಮಾನ ನಿಲ್ದಾಣದ ರೈಡ್ ಹೆಲಿಂಗ್ ವಿಭಾಗದಲ್ಲಿ ಹೆಚ್ಚು ಭಾಗಿಯಾಗಿದೆ. ಕಂಪನಿಯು ದೇಶದಲ್ಲಿರುವ ಕಾರ್ಪೊರೇಟ್‌ ಕಂಪನಿಗಳಿಗೆ ಆನ್ ಕಾಲ್ ಹಾಗೂ ಎಂಪ್ಲಾಯಿ ಮೊಬಿಲಿಟಿ ಸೇವೆಗಳನ್ನು ಒದಗಿಸುತ್ತದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಇದರ ಜೊತೆಗೆ ಮೆರು ಕಂಪನಿಯು ತನ್ನ ಸರಣಿಯಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ. ಇನ್ನು ಮಹೀಂದ್ರ ಅಲೈಟ್ ಬಗ್ಗೆ ಹೇಳುವುದಾದರೆ, ಇದು ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ದೆಹಲಿಯಂತಹ ಪ್ರಮುಖ ಮಹಾನಗರಗಳಲ್ಲಿ ಲಭ್ಯವಿರುವ ಕ್ಯಾಬ್ ಸೇವೆಯಾಗಿದೆ. ಕಂಪನಿಯು ಬಿಸಿನೆಸ್ ಟು ಬಿಸಿನೆಸ್ ಗ್ರಾಹಕರಿಗೆ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಮಹೀಂದ್ರಾ ಅಲೈಟ್ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆನ್ ಡಿಮಾಂಡ್ ಡೋರ್ ಸ್ಟೆಪ್ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ. ಇದಕ್ಕಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅಲೈಟ್ ಕ್ಯಾಬ್‌ಗಳ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಂಪನಿಯ ಪ್ರಮುಖ ಸೇವೆಗಳಲ್ಲಿ ಏರ್‌ಪೋರ್ಟ್ ಕ್ಯಾಬ್‌ಗಳನ್ನು ಸಹ ಸೇರಿಸಲಾಗಿದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

2020 ರ ವೇಳೆಗೆ ಮಹೀಂದ್ರಾ ಅಲೈಟ್, ಮೆರು ಕ್ಯಾಬ್ಸ್‌ನಲ್ಲಿ 55% ನಷ್ಟು ಪಾಲನ್ನು ಹೊಂದಿತ್ತು. ಮಹೀಂದ್ರಾ ಅಲೈಟ್ ತನ್ನ ವಿಭಾಗದಲ್ಲಿ ಓಲಾ ಕ್ಯಾಬ್ಸ್ ಹಾಗೂ ಉಬರ್‌ ಕಂಪನಿಗಳಿಗೆ ಪೈಪೋಟಿ ನೀಡುತ್ತದೆ. Ola ಹಾಗೂ Uber ಕಂಪನಿಗಳು ಶೇರ್ ಮೊಬಿಲಿಟಿ ವಿಭಾಗದಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದರೂ ಅಲೈಟ್ ಬಿಸಿನೆಸ್ ಟು ಬಿಸಿನೆಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಬಹಿರಂಗಪಡಿಸಿದೆ. ಕಂಪನಿಯು 2027ರ ವೇಳೆಗೆ 16 ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಮಹೀಂದ್ರಾ ಕಂಪನಿಯ ಪ್ರಕಾರ, ಈ ಎಲೆಕ್ಟ್ರಿಕ್ ವಾಹನಗಳು ಎಲೆಕ್ಟ್ರಿಕ್ ಎಸ್‌ಯುವಿ ಹಾಗೂ ಲಘು ವಾಣಿಜ್ಯ ವಾಹನ ವಿಭಾಗಗಳಲ್ಲಿ ಇರುತ್ತವೆ. ಹೊಸದಾಗಿ ಘೋಷಿಸಲಾದ ಎಲೆಕ್ಟ್ರಿಕ್ ವಾಹನಗಳುಲ್ಲಿ ಎಂಟು ಬ್ಯಾಟರಿ ಚಾಲಿತ ಎಸ್‌ಯುವಿಗಳು ಸೇರಿವೆ ಎಂದು ಮಹೀಂದ್ರಾ ಕಂಪನಿ ಹೇಳಿದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 700 ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ. ಈ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದಿದೆ. ಹೊಸ ಎಕ್ಸ್‌ಯುವಿ 700 ಕಾರು ಬಿಡುಗಡೆಯಾದ ಮೊದಲ ದಿನವೇ 25 ಸಾವಿರ ಯನಿಟ್‌ ಬುಕ್ಕಿಂಗ್ ಪಡೆದಿತ್ತು. ಎರಡನೇ ದಿನವೂ ಈ ಕಾರು 25 ಸಾವಿರ ಯುನಿಟ್‌ಗಳ ಬುಕ್ಕಿಂಗ್ ಪಡೆದಿತ್ತು. ಈ ಮೂಲಕ ಎರಡು ದಿನಗಳಲ್ಲಿ ಎಕ್ಸ್‌ಯುವಿ 700 ಕಾರು 50 ಸಾವಿರ ಯುನಿಟ್‌ ಬುಕ್ಕಿಂಗ್ ಗಳನ್ನು ಪಡೆದಿತ್ತು. ಮಹೀಂದ್ರಾ ಕಂಪನಿಯು ಇದುವರೆಗೂ ಎಕ್ಸ್‌ಯುವಿ 700 ಕಾರಿಗಾಗಿ 70 ಸಾವಿರ ಯುನಿಟ್‌ ಬುಕ್ಕಿಂಗ್ ಗಳನ್ನು ಸ್ವಿಕರಿಸಿದೆ.

Meru Cabs ಕಂಪನಿ ಸ್ವಾಧೀನ ಪಡಿಸಿಕೊಂಡ Mahindra Logistics

ಎಕ್ಸ್‌ಯುವಿ 700 ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಆಕರ್ಷಕ ಬೆಲೆ ಹೊಂದಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಕಂಪನಿಯು ಇದುವರೆಗೂ ಎಕ್ಸ್‌ಯುವಿ 700 ಕಾರಿನ ಸುಮಾರು 1,300 ಯುನಿಟ್‌ಗಳನ್ನು ವಿತರಣೆ ಮಾಡಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಹೊಸ ಕಾರಿನ ವಿತರಣೆಯ ಆರಂಭವಾಗಿದ್ದು, ನವೆಂಬರ್ ತಿಂಗಳಿನಲ್ಲಿ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ವಿತರಣೆಯಾಗಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಂಪನಿಯು ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಿದೆ.

Most Read Articles

Kannada
English summary
Mahindra logistics limited acquires meru cabs company details
Story first published: Friday, November 12, 2021, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X