Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿತರಣೆಯನ್ನು ಸುಲಭವಾಗಿಸಲಿದೆ ಮಹೀಂದ್ರಾ ಲಾಜಿಸ್ಟಿಕ್ಸ್ ಕಂಪನಿಯ ಎಡೆಲ್ ಸೇವೆ
ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಂಎಲ್ಎಲ್) ತನ್ನ ಸರಕು ವಿತರಣಾ ಸೇವೆಯನ್ನು ಎಡೆಲ್ ಹೆಸರಿನಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ ಇಂಟಿಗ್ರೇಟೆಡ್ ಥರ್ಡ್ ಪಾರ್ಟಿ ಲಾಜಿಸ್ಟಿಕ್ ಸೇವೆಯನ್ನು ಒದಗಿಸುತ್ತದೆ.

ಎಡೆಲ್ ಅಡಿಯಲ್ಲಿ ಮಹೀಂದ್ರಾ ಇ-ಕಾಮರ್ಸ್, ವಿತರಣೆ ಹಾಗೂ ಗ್ರಾಹಕ ಸರಕುಗಳ ಸರಬರಾಜಿನಲ್ಲಿ ತೊಡಗಿದೆ. ಆರಂಭಿಕ ಹಂತದಲ್ಲಿ ಈ ಸೇವೆಯನ್ನು ಬೆಂಗಳೂರು, ನವದೆಹಲಿ, ಮುಂಬೈ, ಪುಣೆ, ಹೈದರಾಬಾದ್ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಆರಂಭಿಸಲಾಗುವುದು. ನಂತರ ಒಂದು ವರ್ಷದೊಳಗೆ 14 ಪ್ರಮುಖ ನಗರಗಳಲ್ಲಿ ಈ ಸೇವೆಯು ಲಭ್ಯವಾಗಲಿದೆ.

ಎಡೆಲ್ ಸೇವೆಯನ್ನು ನೀಡಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ಮಹೀಂದ್ರಾ ಲಾಜಿಸ್ಟಿಕ್ಸ್ ಹೇಳಿದೆ. ಈ ಎಲೆಕ್ಟ್ರಿಕ್ ವಾಹನಗಳ ವೆಚ್ಚವು ಇಂಧನ ವಾಹನಗಳಿಗಿಂತ ಕಡಿಮೆಯಾಗಿರಲಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪ್ಯಾಕೇಜ್ ಹಾಗೂ ಟ್ರಿಪ್ ಆಧಾರಿತ ಸೇವೆಗಳಂತಹ ಅನೇಕ ವಿತರಣಾ ಸೇವೆಗಳನ್ನು ಎಡೆಲ್ ಅಡಿಯಲ್ಲಿ ಒದಗಿಸಲಾಗುವುದು. ವರದಿಯ ಪ್ರಕಾರ ಎಡೆಲ್ ತನ್ನ ಗ್ರಾಹಕರಿಗೆ ಇ-ಕಾಮರ್ಸ್, ಔಷಧಿ, ಗ್ರಾಹಕ ವಸ್ತು, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲಿದೆ.

ವಿತರಣಾ ಸೇವೆಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ 3 ವ್ಯಾಟ್'ನ ಎಲೆಕ್ಟ್ರಿಕ್ ವಾಹನಗಳನ್ನು ಎಡೆಲ್ ವಿತರಣಾ ಸೇವೆಯು ಒಳಗೊಂಡಿರುತ್ತದೆ. ಈ ವಾಹನಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ಸಹ ನಿರ್ಮಿಸಲಾಗುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹೀಂದ್ರಾ ಲಾಜಿಸ್ಟಿಕ್ಸ್ ಎಡೆಲ್‌ಗಾಗಿ ಟೆಲಿಮ್ಯಾಟಿಕ್ಸ್ ಪ್ಲಾಟ್‌ಫಾರಂ ಅನ್ನು ಸಹ ನಿರ್ಮಿಸುತ್ತಿದೆ. ಈ ಪ್ಲಾಟ್ ಫಾರಂ ಗ್ರಾಹಕರ ಅನುಭವವನ್ನು ಪರಿಗಣಿಸಲಿದೆ. ತನ್ನ ಈ ಯೋಜನೆಯ ಮೊದಲ ಹಂತದಲ್ಲಿ ಮಹೀಂದ್ರಾ 1,000 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಎಡೆಲ್ ಸೇವೆಗಾಗಿ ಬಿಡುಗಡೆಗೊಳಿಸಲಿದೆ.

ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಕಮರ್ಷಿಯಲ್ ವಾಹನಗಳ ಸೆಗ್'ಮೆಂಟಿನಲ್ಲಿ ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಇತ್ತೀಚೆಗೆ ಮಹೀಂದ್ರಾ ತನ್ನ ಸಣ್ಣ ಎಲೆಕ್ಟ್ರಿಕ್ ಕಾರನ್ನು ಪರೀಕ್ಷಿಸಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ಕ್ವಾಡ್ರೈಸಿಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು 2020ರ ಡಿಸೆಂಬರ್ ತಿಂಗಳಿನಲ್ಲಿ ತಾನು ಮಾರಾಟ ಮಾಡಿದ ವಾಹನಗಳ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

ಮಹೀಂದ್ರಾ ಕಂಪನಿಯು 2020ರ ಡಿಸೆಂಬರ್‌ನಲ್ಲಿ ಒಟ್ಟು 35,187 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇವುಗಳಲ್ಲಿ ಪ್ರಯಾಣಿಕರ ವಾಹನ, ವಾಣಿಜ್ಯ ವಾಹನ ಹಾಗೂ ರಫ್ತು ಮಾಡಲಾದ ವಾಹನಗಳು ಸಹ ಸೇರಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಂಪನಿಯ ಒಟ್ಟಾರೆ ಮಾರಾಟವು 2019ರ ಡಿಸೆಂಬರ್ ತಿಂಗಳಿಗಿಂತ ಕಡಿಮೆಯಾಗಿದೆ. 2019ರ ಡಿಸೆಂಬರ್‌ನಲ್ಲಿ ಮಹೀಂದ್ರಾ ಕಂಪನಿಯು ಒಟ್ಟು 39,230 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಮಹೀಂದ್ರಾ ಕಂಪನಿಯು ಯುಟಿಲಿಟಿ ವಾಹನ ವಿಭಾಗದಲ್ಲಿ ಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ. ಅಂಕಿಅಂಶಗಳ ಪ್ರಕಾರ, ಮಹೀಂದ್ರಾ ಕಂಪನಿಯು ಕಳೆದ ತಿಂಗಳು 16,050 ಯುನಿಟ್ ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2019ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 5%ನಷ್ಟು ಹೆಚ್ಚಾಗಿದೆ. ಕಂಪನಿಯ ಕಮರ್ಷಿಯಲ್ ವಾಹನ ಹಾಗೂ ಕಾರು ವಿಭಾಗವು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ.