ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಮರಾಜೋ ಮಾದರಿಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಮಹೀಂದ್ರಾ ಮಾರಾಜೋ ಎಂಪಿವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.64 ಲಕ್ಷಗಳಾಗಿದೆ.

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಭಾರತೀಯ ಮಾರುಕಟ್ಟೆಯಲ್ಲಿ ಈ ಮಹೀಂದ್ರಾ ಮಾರಜೋ ಎಂಪಿವಿಯ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಮರಾಜೋ ಎಂಪಿವಿಯ 161 ಯುನಿಟ್‌ಗಳು ಮಾತ್ರ ಮಾರಾಟವಾಗಿವೆ. 2019ರ ಡಿಸೆಂಬರ್ ತಿಂಗಳಲ್ಲಿ ಮಾರಾಜೋ ಮಾದರಿಯ 1,292 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.88 ರಷ್ಟು ಕಡಿಮೆಯಾಗಿದೆ.

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮರಾಜೋ ಎಂಪಿವಿಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಹಾಗೂ 1750 ರಿಂದ 2500 ಆರ್‌ಪಿಎಂನಲ್ಲಿ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿ ಅನ್ನು ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಮಹೀಂದ್ರಾ ಕಂಪನಿಯು ಮರಾಜೋ ಎಂಪಿವಿಯ ಮಾರಾಟವನ್ನು ಹೆಚ್ಚಿಸಲು ಇದರ ಪೆಟ್ರೋಲ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಮಹೀಂದ್ರಾ ಮರಾಜೋ ಪೆಟ್ರೋಲ್ ವೆರಿಯೆಂಟ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಮಹೀಂದ್ರಾ ಮುಂಬರುವ ಬಿಎಸ್ 6 ಎಂಜಿನ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು. ಈ ಹೊಸ 1.5-ಲೀಟರ್ ‘ಜಿ 15' ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಮರಾಜೋ ಎಂಪಿವಿಯಲ್ಲಿ ಅಳವಡಿಸಬಹುದು.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಈ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 162 ಬಿಹೆಚ್‌ಪಿ ಪವರ್ ಮತ್ತು 280 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸುವ ಸಾಧ್ಯತೆಯಿದೆ.

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಇನ್ನು ಮುಂದಿಬರುವ ಮಹೀಂದ್ರಾ ಎಸ್‍ಯುವಿಗಳಲ್ಲಿ ಮತ್ತು ಎಂಪಿವಿಗಳು ಸೇರಿದಂತೆ ಹಲವು ಮಾದರಿಗಳಿಗೆ ಈ ಎಂಜಿನ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ಅನ್ನು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಸಾಂಗ್‌ಯಾಂಗ್ ಕೊರಂಡೊ ಎಸ್‌ಯುವಿಗೆ ನೀಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಹೊಸ ಮಹೀಂದ್ರಾ ಮರಾಜೋ ಎಂಪಿವಿಯಲ್ಲಿ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಅನ್ನು ಆಯ್ಕೆಯಾಗಿ ನೀಡಬಹುದು. ಹೊಸ ಥಾರ್ ಮಾದರಿಯಲ್ಲಿ ಇದೇ ಯುನಿಟ್ ನೀಡಲಾಗಿದೆ. ಇನ್ನು ಭಾರತದಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೇಡಿಕೆ ಹೆಚ್ಚಳದಿಂದಾಗಿ, ಮಹೀಂದ್ರಾ ಶೀಘ್ರದಲ್ಲೇ ಹೊಸ ಗೇರ್‌ಬಾಕ್ಸ್ ಅನ್ನು ಈ ಎಂಪಿವಿಯಲ್ಲಿ ಪರಿಚಯಿಸಬಹುದು.

ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡ ಮಹೀಂದ್ರಾ ಮಾರಾಜೋ

ಹೊಸ ಮಹೀಂದ್ರಾ ಮರಾಜೋ ಎಂಪಿವಿಯಲ್ಲಿ ಯುಎಸ್‌ಬಿ, ಎಯುಎಕ್ಸ್, ಬ್ಲೂಟೂತ್ ಕನೆಕ್ಟಿವಿಟಿ, ರೇರ್ ಡಿಫೋಗರ್, ಅಲಾಯ್ ವ್ಹೀಲ್, ಎಲೆಕ್ಟ್ರಿಕ್ ಅಡ್ಜಸ್ಟ್ ವಿಂಗ್ ಮಿರರ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟಬಲ್, ಮಿಡ್ -ರೋ ಸೇಂಟ್ ಆರ್ಮ್‌ರೆಸ್ಟ್, ಹಿಂಭಾಗದಲ್ಲಿ ವೈಪರ್, ವಾಷರ್ ಹಾಗೂ ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ಗಳನ್ನು ಹೊಂದಿರಲಿದೆ.

Most Read Articles

Kannada
English summary
Mahindra Marazzo Sales Down By 88% In December 2020. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X