ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಎಸ್‌ಯುವಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ಭವಿಷ್ಯದ ಕಾರು ಮಾದರಿಗಳಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಬಹುದಿನಗಳ ನಂತರ ಬ್ರಾಂಡ್ ಪ್ರತಿನಿಧಿಸುವ ಲೋಗೋ ವಿನ್ಯಾಸದಲ್ಲಿ ಹೊಸತನ ಪರಿಚಯಿಸಲು ಮುಂದಾಗಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಭಾರತೀಯ ಆಟೋ ಉದ್ಯಮ ಕಾರು ಉತ್ಪಾದನಾ ಕಂಪನಿಯು ಅಂತರಾಷ್ಟ್ರೀಯ ಗುಣಮಟ್ಟಕ್ಕಾಗಿ ವಾಹನ ಉತ್ಪಾದನೆ ನಿರಂತರವಾಗಿ ಬದಲಾವಣೆ ಪರಿಚಯಿಸುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಕಳೆದ ಐದು ವರ್ಷಗಳಲ್ಲಿ ಕಾರು ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿದೆ. ಶೀಘ್ರದಲ್ಲೇ ಕಂಪನಿಯು ಎಕ್ಸ್‌ಯುವಿ ಸರಣಿ ಕಾರುಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಹೊಸ ಸರಣಿಗಳ ಬಿಡುಗಡೆಗೂ ಮುನ್ನ ಮರು ವಿನ್ಯಾಸಗೊಳಿಸಲಾದ ಹೊಸ ಲೋಗೋ ಅನಾವರಣಗೊಳಿಸಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಆಧುನಿಕ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳ್ಳುತ್ತಿರುವ ಹೊಸ ಕಾರು ಮಾದರಿಗಳಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸ ನೀಡುವ ಉದ್ದೇಶದಿಂದ ಲೋಗೋ ಬದಲಾವಣೆಗೊಳಿಸಲಾಗುತ್ತಿದ್ದು, ಹೊಸ ಲೋಗೋ ಮಹೀಂದ್ರಾ ಡಿಸೈನ್ ಸ್ಟುಡಿಯೋದಲ್ಲಿ ವಿನ್ಯಾಸಗೊಂಡಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಹೊಸ ವಾಹನಗಳಲ್ಲಿ ಮಹತ್ವದ ಬದಲಾವಣೆಗಾಗಿ ಆಧುನಿಕ ಕಾರು ವಿನ್ಯಾಸ ಅಭಿವೃದ್ದಿಗೊಳಿಸುವ ಪ್ರತ್ಯೇಕವಾದ ತಂಡವನ್ನು ಹೊಂದಿರುವ ಮಹೀಂದ್ರಾ ಹಲವಾರು ಅಂತರಾಷ್ಟ್ರೀಯ ಕಾರು ಉತ್ಪಾದನಾ ಕಂಪನಿಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಹೊಸ ಲೋಗೋ ಅಭಿವೃದ್ದಿಪಡಿಸಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಹೊಸ ಲೋಗೋ ಅನಾವರಣದ ವಿಡಿಯೋ ಮೂಲಕ 70 ವರ್ಷಗಳ ಆಟೋ ಉತ್ಪಾದನಾ ವಲಯದ ಅನುಭವ ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಹೊಸ ಲೋಗೋದಲ್ಲಿ ಎರಡು ವಿಭಾಗಗಳ ಮೂಲಕ ಕಂಪನಿಯು ವಿಕಸನಗೊಂಡ ಬಂದ ಹಾದಿಯನ್ನು ನೆನಪಿಸಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಗಟ್ಟಿಯಾದ ಕಲ್ಲು ಪ್ರಕೃತಿಯ ವಿಸ್ಮಯಗಳಾದ ಮಳೆ, ಗಾಳಿಗೆ ಹೇಗೆ ವಿಕಸನಗೊಂಡ ವಿವಿಧ ರೂಪಗಳನ್ನು ತಳಿದುಕೊಳ್ಳುತ್ತವೆಯೋ ಹಾಗೆಯೇ ಆಟೋ ಉತ್ಪಾದನಾ ವಲಯ ಅನುಭವಗಳೊಂದಿಗೆ ಬ್ರಾಂಡ್ ಲೋಗೋ ಹೊಸ ರೂಪ ಪಡೆದುಕೊಂಡಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಗ್ರೇ ಮತ್ತು ರೆಡ್ ಆಕ್ಸೆಂಟ್ ಹೊಂದಿರುವ ಮಹೀಂದ್ರಾ ಲೋಗೋ ವಿವಿಧ ಕಾರು ಮಾದರಿಗಳಿಗೆ ಅನುಸಾರವಾಗಿ ವಿವಿಧ ಬಣ್ಣಗಳನ್ನು ಪಡೆದುಕೊಳ್ಳಲಿದ್ದು, ಬಹುನೀರಿಕ್ಷಿತ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿ ಹೊಸ ಲೋಗೋ ಮೊದಲ ಹಂತವಾಗಿ ಅಳವಡಿಕೆಯಾಗಲಿದೆ.

ಮಹೀಂದ್ರಾ ಕಂಪನಿಯು ಸದ್ಯಕ್ಕೆ ಪ್ರಯಾಣಿಕರ ಕಾರು ಮಾದರಿಗಳಾಗಿ ಮಾತ್ರ ಹೊಸ ಲೋಗೋ ಬಳಕೆ ಮಾಡಲಿದ್ದು, ವಾಣಿಜ್ಯ ವಾಹನಗಳು ಮತ್ತು ಕೃಷಿ ಸಂಬಂಧಿತ ಅಗ್ರೋ ಟೆಕ್ ವಾಹನಗಳಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೋಗೋ ವಿನ್ಯಾಸವನ್ನೇ ಮುಂದುವರಿಸಲಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಮರುವಿನ್ಯಾಸಗೊಳಿಸಲಾಗುತ್ತಿರುವ ಲೋಗೋವನ್ನು ಹೊಸ ಕಾರುಗಳಲ್ಲಿ ಅಳವಡಿಕೆ ಮಾಡುವುದರ ಜೊತೆ ಕಾರು ಮಾರಾಟ ಮಳಿಗೆಗಳಲ್ಲೂ ಕೂಡಾ ಹೊಸ ಲೋಗೋ ಅಳವಡಿಸಲಿದ್ದು, 2022ರ ವೇಳೆಗೆ ಮಹೀಂದ್ರಾದ ಎಲ್ಲಾ ಅಧಿಕೃತ ಮಾರಾಟ ಮಳಿಗೆಗಳು ಮತ್ತು ಸರ್ವಿಸ್ ಸೆಂಟರ್‌ಗಳು ಹೊಸ ಲೋಗೋದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿವೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ದೇಶಾದ್ಯಂತ 823 ನಗರಗಳಲ್ಲಿ 1300 ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಹೊಸ ಲೋಗೋ ಮೂಲಕ ಕಾರು ಮಾರಾಟವನ್ನು ವಿಸ್ತರಿಸುವ ಮತ್ತು ಗ್ರಾಹಕರ ಬೇಡಿಕೆಗಳನ್ನು ಸಮರ್ಥವಾಗಿ ಪೂರೈಸುವ ಬೃಹತ್ ಯೋಜನೆ ಹೊಂದಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಹೊಸ ಕಾರುಗಳ ಪೈಕಿ ಎಕ್ಸ್‌ಯುವಿ700 ಮಾದರಿಯು ಮಹೀಂದ್ರಾ ಕಂಪನಿಯ ಎಸ್‌ಯುವಿ ಸರಣಿಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಇದೇ ತಿಂಗಳು 15ರಂದು ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಅನಾವರಣಗೊಳ್ಳುವ ನೀರಿಕ್ಷೆಯಿದ್ದು, ಅನಾವರಣಗೊಂಡ ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿರಲಿದೆ. ಎಕ್ಸ್‌ಯುವಿ500 ಕಾರಿನ ನ್ಯೂ ಜನರೇಷನ್ ಮಾದರಿಯಾಗಿರುವ ಎಕ್ಸ್‌ಯುವಿ700 ಮಾದರಿಯು ಅತಿಹೆಚ್ಚು ವ್ಹೀಲ್ ಬೆಸ್‌ನೊಂದಿಗೆ 7 ಸೀಟರ್ ಮತ್ತು 6 ಸೀಟರ್ ಮಾದರಿಯಲ್ಲಿ ಮಾರಾಟಗೊಳ್ಳಲಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾರಾಟವನ್ನು ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಕೆಲದಿನಗಳ ನಂತರ ಎಕ್ಸ್‌ಯುವಿ500 ಮಾದರಿಯನ್ನು 5 ಸೀಟರ್ ಮಾದರಿಯಾಗಿ ಮರುಬಿಡುಗಡೆ ಮಾಡಲಿದೆ. ಸದ್ಯ ಎಕ್ಸ್‌ಯುವಿ500 ಮಾದರಿಯಲ್ಲೂ 7 ಸೀಟರ್ ಲಭ್ಯವಿದ್ದರೂ ಅದು ವಯಸ್ಕ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅನುಕೂರವಾಗಿಲ್ಲ. ಹೀಗಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳ್ಳುತ್ತಿರುವ ಎಕ್ಸ್‌ಯುವಿ700 ಹೆಚ್ಚಿನ ಮಟ್ಟದ ವ್ಹೀಲ್ ಬೆಸ್‌ನೊಂದಿಗೆ ಫುಲ್ ಸೈಜ್ ಎಸ್‌ಯುವಿಯಾಗಿ ಮಾರಾಟಗೊಳ್ಳಲಿದೆ.

ಐಷಾರಾಮಿ ವಿನ್ಯಾಸದ ಹೊಸ ಲೋಗೋ ಅನಾವರಣಗೊಳಿಸಿದ ಮಹೀಂದ್ರಾ

ಹಾಗೆಯೇ ಮರುಬಿಡುಗಡೆಯಾಗಲಿರುವ ಎಕ್ಸ್‌ಯುವಿ500 ಮಾದರಿಯು 5 ಸೀಟರ್ ಆಸನ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಎಕ್ಸ್‌ಯುವಿ700 ಮಾದರಿಯು 2.0-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

Most Read Articles

Kannada
English summary
Mahindra new logo revealed for suvs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X