ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಹೊಸ ಕಾರು ಮಾರಾಟದಲ್ಲಿ ಹಲವು ಬದಲಾವಣೆಗಳೊಂದಿಗೆ ಮುನ್ನುಗ್ಗುತ್ತಿರುವ Mahindra ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳಲ್ಲಿ ಬಿಡುಗಡೆಯಾಗಲಿರುವ ಜಾವೆಲಿನ್ ಕಾರು ಮಾದರಿಯು ಕುತೂಹಲ ಹುಟ್ಟುಹಾಕಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಹೌದು, ಟೊಕಿಯೊದಲ್ಲಿ ನಡೆದ 2020ರ ಒಲಂಪಿಕ್ಸ್‌ನಲ್ಲಿ ಭಾರತೀಯ ಕ್ರಿಡಾಪಟುಗಳು ಅಭೂತಪೂರ್ವ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಪದಕದೊಂದಿಗೆ ಹಲವು ದಾಖಲೆಗಳಿಗೆ ಕಾರಣರಾದರು. ಅದರಲ್ಲೂ ಜಾವಲಿನ್ ಎಸೆತ ವಿಭಾಗದಲ್ಲಿನ ನೀರಜ್ ಚೋಪ್ರಾ ಅವರ ಚಿನ್ನದ ಗೆಲುವಿಗೆ ಸಂಭ್ರಮವು ದೇಶದ ಕ್ರಿಡಾ ಕ್ಷೇತ್ರಕ್ಕೆ ಹೊಸ ಸ್ಪೂರ್ತಿ ತುಂಬಿದ್ದು, ಜಾವೆಲಿನ್ ಥ್ರೋ ವಿಭಾಗದಲ್ಲಿನ ಹೊಸ ದಾಖಲೆಯ ಸಂಭ್ರಮಕ್ಕಾಗಿ Mahindra ಕಂಪನಿಯು ಮಹತ್ವದ ಯೋಜನೆಯೊಂದನ್ನು ಪ್ರಕಟಿಸಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಜಾವೆಲಿನ್ ಥ್ರೋ ವಿಭಾಗದಲ್ಲಿನ ನೀರಜ್ ಚೋಪ್ರಾ ಅವರ ಅಭೂತಪೂರ್ವ ಗೆಲುವಿಗೆ ಅಭಿನಂದನೆಗಳನ್ನು ಸಲ್ಲಿಸಿ ವಿಶೇಷ ಉಡುಗೊರೆಯೊಂದನ್ನು ಪ್ರಕಟಿಸಿದ್ದ Mahinda ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಜಾವೆಲಿನ್ ಹೆಸರನ್ನು ತಮ್ಮ ಮುಂಬರುವ ವಾಹನಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಚಿನ್ನ ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನೀರಜ್ ಚೋಪ್ರಾ ಅವರಿಗೆ ಆನಂದ್ ಮಹೀಂದ್ರಾ ಅವರು ದುಬಾರಿ ಕಾರು ಮಾದರಿಯೊಂದನ್ನು ವಿಶೇಷ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದು, ಇದರ ಜೊತೆಯಲ್ಲಿ ಜಾವಲಿನ್ ಹೆಸರನ್ನು ಕಾರುಗಳಿಗೆ ಅಳವಡಿಸುವ ಯೋಜನೆಯ ಬಗೆಗೆ ಸುಳಿವು ನೀಡಿದ್ದಾರೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಹೊಸ ಜಾವಲಿನ್ ಹೆಸರನ್ನು ಕೇಂದ್ರ ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಹಕ್ಕು ಸ್ವಾಮ್ಯ ದಾಖಲಿಸಿರುವ Mahindra ಕಂಪನಿಯು ಮುಂಬರುವ ಹೊಸ ಕಾರಿನಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು, ಯಾವ ಕಾರು ಮಾದರಿಗಾಗಿ ಎಂಬುವುದನ್ನು ಸ್ಪಷ್ಟಪಡಿಸಿಲ್ಲ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಕೆಲವು ಮಾಹಿತಿಗಳ ಪ್ರಕಾರ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ XUV700 ಮಾದರಿಯಲ್ಲಿ 'Javelin' ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಬಹುದಾಗಿದೆ ಎನ್ನುವ ಮಾಹಿತಿಗಳಿದ್ದು, ನಿರಜ್ ಚೋಪ್ರಾ ಅವರಿಗೆ ಇದೀಗ XUV700 ಮಾದರಿಯನ್ನೇ ಉಡುಗೊರೆಯಾಗಿ ನೀಡಲಾಗುತ್ತಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

XUV700 ಮಾದರಿಯ 'Javelin' ಸ್ಪೆಷಲ್ ಎಡಿಷನ್ ಮಾದರಿಯನ್ನೇ ನೀರಜ್ ಚೋಪ್ರಾ ನೀಡಬಹುದಾಗಿದ್ದು, ಚಿತ್ರದ ಪದಕ ಸಂಭ್ರಮಕ್ಕಾಗಿ ಕಂಪನಿಯು ಕೆಲವು ಯುನಿಟ್‌ಗಳನ್ನು ಸಿಮಿತ ಅವಧಿಗಾಗಿ ಉತ್ಪಾದನೆ ಮಾಡುವಂತಹ ಸಾಧ್ಯತೆಗಳು ಕೂಡಾ ಇವೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಆದರೆ Javelin ಹೆಸರನ್ನು ಯಾವ ಕಾರು ಮಾದರಿಗಾಗಿ ಬಳಕೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಕಂಪನಿಯೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದ್ದು, Mahindra ಕಂಪನಿಯು ಮುಂಬರುವ 2025ರ ವೇಳೆಗೆ ಒಟ್ಟು ಒಂಬತ್ತು ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

Mahindra ಹೊಸ ಕಾರುಗಳ ಪೈಕಿ XUV700 ಎಸ್‌ಯುವಿ ಮಾದರಿಯು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಸೆಪ್ಟೆಂಬರ್ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಹೊಸ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಹೊಸ XUV700 ಕಾರು ಬೆಲೆ ವಿಚಾರವಾಗಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಹೊಸ ಎಸ್‌ಯುವಿ ಮಾದರಿಯ ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌ ಪಡೆದುಕೊಂಡಿದೆ. ಇದರಲ್ಲಿ ಎಂಎಕ್ಸ್ ಸೀರಿಸ್ ಮಾದರಿಗಳು 5 ಸೀಟರ್‌ನೊಂದಿಗೆ ಬಿಡುಗಡೆಯಾಗಲಿದ್ದರೆ ಆಂಡ್ರಿನೊಎಕ್ಸ್ ಸೀರಿಸ್‌ ಕಾರುಗಳು 7 ಸೀಟರ್ ಸೌಲಭ್ಯದೊಂದಿಗೆ ತುಸು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

Mahindra ಕಂಪನಿಯು ಎಂಎಕ್ಸ್ ಸೀರಿಸ್ ಹೊಂದಿರುವ ಎಕ್ಸ್‌ಯುವಿ700 ಮಾದರಿಯ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆಗೆ ನಿಗದಿಪಡಿಸಿದ್ದು, ಎಂಎಕ್ಸ್ ಸೀರಿಸ್ ಕಾರುಗಳನ್ನು ಮ್ಯಾನುವಲ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಮಾತ್ರ ಮಾರಾಟ ಮಾಡಲಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಆಂಡ್ರಿನೊಎಕ್ಸ್ ಸೀರಿಸ್‌ ಆವೃತ್ತಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 15 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿವೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಹೊಸ XUV700 ಮಾದರಿಯಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ನಿರಜ್ ಚೋಪ್ರಾ ಚಿನ್ನದ ಗೆಲುವಿನ ಸಂಭ್ರಮಕ್ಕಾಗಿ 'Javelin' ಹೆಸರಿನ ಕಾರು ಬಿಡುಗಡೆ ಮಾಡಲಿದೆ Mahindra

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

Most Read Articles

Kannada
English summary
Mahindra new trademark name javelin for upcoming car models in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X