ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಭಾರತೀಯ ಮೂಲದ Mahindra and Mahindra ಕಂಪನಿಯು 15,973 ಯುನಿಟ್ ಪ್ಯಾಸೆಂಜರ್ ವಾಹನಗಳ ಮಾರಾಟದೊಂದಿಗೆ 2021ರ ಆಗಸ್ಟ್ ತಿಂಗಳ ಮಾರಾಟದಲ್ಲಿ 17% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 13,651 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಕಂಪನಿಯು 15,786 ಯುನಿಟ್ ಯುಟಿಲಿಟಿ ವೆಹಿಕಲ್ಸ್ (UV) ಗಳನ್ನು ಮಾರಾಟ ಮಾಡಿದೆ. ಈ ಸೆಗ್ ಮೆಂಟಿನ ಮಾರಾಟದಲ್ಲಿ ಕಂಪನಿಯು 18% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ 13,407 ಯುನಿಟ್‌ ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ತಿಂಗಳು ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ವ್ಯಾನ್ ಮಾರಾಟವು 23% ನಷ್ಟು ಕಡಿಮೆಯಾಗಿ 187 ಯುನಿಟ್‌ಗಳಿಗೆ ತಲುಪಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ತಿಂಗಳ ಮಾರಾಟದ ಆಧಾರದ ಬಗ್ಗೆ ಹೇಳುವುದಾದರೆ ಕಳೆದ ತಿಂಗಳ ಮಾರಾಟವು 24.10% ನಷ್ಟು ಕುಸಿತವನ್ನು ದಾಖಲಿಸಿದೆ. ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ 21,046 ಯುನಿಟ್‌ಗಳನ್ನು (ಯುಟಿಲಿಟಿ ವೆಹಿಕಲ್ ಹಾಗೂ ಕಾರು) ಮಾರಾಟ ಮಾಡಿತ್ತು.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

2021ರ ಏಪ್ರಿಲ್ 2021 ಹಾಗೂ 2021ರ ಆಗಸ್ಟ್ ಅವಧಿಯಲ್ಲಿ ಮಹೀಂದ್ರಾ ಕಂಪನಿಯು 80,221 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 36,618 ಯುನಿಟ್‌ಗಳನ್ನು ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರಾಟ ಪ್ರಮಾಣವು 119% ನಷ್ಟು ಹೆಚ್ಚಳವಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

Mahindra and Mahindra ಇತ್ತೀಚೆಗಷ್ಟೇ ತನ್ನ 5 ಸೀಟುಗಳ ಎಸ್‌ಯುವಿಯಾದ ಎಕ್ಸ್‌ಯುವಿ 700 ಅನ್ನು ಅನಾವರಣಗೊಳಿಸಿದೆ. ಈ ಎಸ್‌ಯುವಿಯ ಬೆಲೆದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ದರದಂತೆ ರೂ.11.99 ಲಕ್ಷಗಳಿಂದ ರೂ .14.99 ಲಕ್ಷಗಳಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕಂಪನಿಯು ಈ ಎಸ್‌ಯುವಿಯ ಬುಕ್ಕಿಂಗ್ ಗಳನ್ನು ಶೀಘ್ರದಲ್ಲೇ ಆರಂಭಿಸಲಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

Mahindra XUV 700 ಎಸ್‌ಯುವಿಯನ್ನು ಅತ್ಯಂತ ಶಕ್ತಿಶಾಲಿ ಎಂಜಿನ್ ಆಯ್ಕೆಯೊಂದಿಗೆ ಹಾಗೂ ಅತ್ಯಾಧುನಿಕ ಫೀಚರ್ ಗಳೊಂದಿಗೆ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. Mahindra XUV 700 ಭಾರತೀಯ ಎಸ್‌ಯುವಿ ಸೆಗ್ ಮೆಂಟಿನಲ್ಲಿ 0 - 60 ಕಿ.ಮೀ ವೇಗವನ್ನು ಕೇವಲ 5 ಸೆಕೆಂಡುಗಳಲ್ಲಿ ಅಕ್ಸಲರೇಟ್ ಮಾಡುವ ಮೊದಲ ಎಸ್‌ಯುವಿಯಾಗಿರಲಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

Mahindra XUV 700 ಎಸ್‌ಯುವಿಯನ್ನು MX ಹಾಗೂ AX ಎಂಬ ಎರಡು ಮಾದರಿಗಳಲ್ಲಿ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯುವಿಯು 5 ಹಾಗೂ 7 ಸೀಟುಗಳ ಎರಡೂ ಆಯ್ಕೆಗಳಲ್ಲಿ ಲಭ್ಯವಿರಲಿದೆ. XUV 700 ಎಸ್‌ಯುವಿಯ ಎರಡೂ ಮಾದರಿಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿವೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

Mahindra XUV 700 ಎಸ್‌ಯುವಿಯು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರ ಪೆಟ್ರೋಲ್ ಎಂಜಿನ್ 200 ಬಿ‌ಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಇನ್ನು ಡೀಸೆಲ್ ಎಂಜಿನ್ 185 ಬಿಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಹೊಸ ವಿನ್ಯಾಸದ ಜೊತೆಗೆ ಈ ಎಸ್‌ಯುವಿಯು ಆಧುನಿಕ ಫೀಚರ್ ಗಳನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಈ ಎಸ್‌ಯುವಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಆಟೋ ಹೋಲ್ಡ್, ಕೀ ಲೆಸ್ ಎಂಟ್ರಿ, ಪುಶ್ ಸ್ಟಾರ್ಟ್ / ಸ್ಟಾಪ್ ಬಟನ್'ಗಳನ್ನು ನೀಡಲಾಗಿದೆ. ಇದರ ಹೊರತಾಗಿ ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌, ಸ್ಮಾರ್ಟ್ ಡೋರ್ ಹ್ಯಾಂಡಲ್‌, ದೊಡ್ಡ ಪನೋರಾಮಿಕ್ ಸನ್ ರೂಫ್, ವೈಯಕ್ತಿಕ ಎಚ್ಚರಿಕೆ ಹಾಗೂ ಡ್ರೈವರ್ ಡ್ರೈನೆಸ್ ಅಲರ್ಟ್ ಸಿಸ್ಟಂಗಳನ್ನು ನೀಡಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಇತ್ತೀಚೆಗಷ್ಟೇ Mahindra ಕಂಪನಿಯು ತಮಿಳುನಾಡಿನ ಕಾಂಚೀಪುರಂನಲ್ಲಿ ವೆಹಿಕಲ್ ಟೆಸ್ಟ್ ಟ್ರ್ಯಾಕ್ ನಿರ್ಮಿಸಿದೆ. ಈ ಟ್ರ್ಯಾಕ್ ನಲ್ಲಿ ಕಂಪನಿಯು ತನ್ನ ಹೊಸ ಕಾರುಗಳನ್ನು ಪರೀಕ್ಷಿಸಲಿದೆ. ಸರಿಸುಮಾರು 2 ಚದರ ಕಿ.ಮೀಗಳಷ್ಟು ವಿಸ್ತಾರವಾದ ಈ ಎಸ್‌ಯುವಿ ಟೆಸ್ಟ್ ಟ್ರ್ಯಾಕ್ ನಲ್ಲಿ ಕಂಪನಿಯ ವಿವಿಧ ರೀತಿಯ ಪರೀಕ್ಷೆಯ ಅವಶ್ಯಕತೆಗಳನ್ನು ಪೂರೈಸಲು 20 ರೀತಿಯ ಬಹುಪಯೋಗಿ ಟ್ರ್ಯಾಕ್‌ಗಳನ್ನು ರಚಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಪ್ಯಾಸೆಂಜರ್ ವಾಹನ ಮಾರಾಟ

ಈ ಟೆಸ್ಟ್ ಟ್ರ್ಯಾಕ್ ಅನ್ನು ಕೇವಲ ವಾಹನಗಳ ಅಭಿವೃದ್ಧಿಗೆ ಮಾತ್ರವಲ್ಲದೆ ಆಟೋ ಮೊಬೈಲ್ ಫೆಸ್ಟ್ ಅಥವಾ ಇತರ ಕಾರ್ಯಕ್ರಮಗಳಿಗೂ ಬಳಸಬಹುದು ಎಂದು Mahindra ಕಂಪನಿಯು ತಿಳಿಸಿದೆ. ಕಂಪನಿಯು ಮುಂದಿನ ವರ್ಷದಿಂದ ಸಾಮಾನ್ಯ ಬಳಕೆಗಾಗಿ ಈ ಟೆಸ್ಟ್ ಟ್ರ್ಯಾಕ್ ಅನ್ನು ತೆರೆಯಲಿದೆ.

Most Read Articles

Kannada
English summary
Mahindra passenger vehicle sales increased in august 2021 details
Story first published: Thursday, September 2, 2021, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X