ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಕಳೆದ ವಾರವಷ್ಟೇ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಮತ್ತೆ ಬೆಲೆ ಹೆಚ್ಚಳದ ಸುಳಿವು ನೀಡಿದ್ದು, ಹೊಸ ವರ್ಷದ ಆರಂಭದಲ್ಲೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

2020-21ರ ಹಣಕಾಸು ವರ್ಷದಲ್ಲಿನ ವಾಣಿಜ್ಯ ವ್ಯವಹಾರಗಳ ಪರಾಮರ್ಶೆ ಸಭೆಯಲ್ಲಿ ಹೊಸ ವಾಹನಗಳ ಬೆಲೆ ಹೆಚ್ಚಳ ಕುರಿತು ಚರ್ಚೆಗಳನ್ನು ನಡೆದಿದ್ದು, ಮತ್ತೆ ಬೆಲೆ ಹೆಚ್ಚಳವಾದರೆ ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಿದಂತಾಗುತ್ತದೆ. ಮಾಹಿತಿಗಳ ಪ್ರಕಾರ ಮಹೀಂದ್ರಾ ಕಂಪನಿಯು ಹೊಸ ವಾಹನಗಳ ಬೆಲೆಯನ್ನು ಮಾರ್ಚ್ ಆರಂಭದಲ್ಲಿ ಹೆಚ್ಚಳ ಮಾಡಬಹುದಾಗಿದ್ದು, ನ್ಯೂ ಜನರೇಷನ್ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಕಾರುಗಳ ಬಿಡುಗಡೆಗೂ ಬೆಲೆ ಹೆಚ್ಚಿಸುವ ನೀರಿಕ್ಷೆಯಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಪರಿಸ್ಕೃತ ದರಪಟ್ಟಿಯಲ್ಲಿ ಮಹೀಂದ್ರಾ ನಿರ್ಮಾಣದ ವಿವಿಧ ಕಾರುಗಳು ಈಗಾಗಲೇ ಶೇ.1.50 ರಿಂದ ಶೇ.2 ರಷ್ಟು ದರ ಹೆಚ್ಚಳ ಪಡೆದುಕೊಂಡಿದ್ದು, ವೆರಿಯೆಂಟ್‌ಗೆ ಅನುಗುಣವಾಗಿ ಕನಿಷ್ಠ ರೂ. 2 ಸಾವಿರದಿಂದ ಗರಿಷ್ಠ ರೂ. 50 ಸಾವಿರ ತನಕ ದರ ಹೆಚ್ಚಳ ಪಡೆದುಕೊಂಡಿವೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

2020ರ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಫೆಬ್ರುವರಿ 4ರಿಂದಲೇ ಹೊಸ ಕಾರುಗಳ ಬೆಲೆ ಏರಿಕೆಯಾಗುವಂತೆ ಹೊಸ ದರ ನಿಗದಿಪಡಿಸಿರುವ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಮತ್ತು ಅಲ್ಟುರಾಸ್ ಜಿ4 ಹೊರತುಪಡಿಸಿ ಇನ್ನುಳಿದ ಕಾರುಗಳ ಬೆಲೆ ಹೆಚ್ಚಳ ಮಾಡಲಾಗಿದ್ದು, ಕಳೆದ ತಿಂಗಳ ಹಿಂದಷ್ಟೇ ಹೊಸ ಥಾರ್ ಕಾರು ಬೆಲೆ ಹೆಚ್ಚಳ ಪಡೆದುಕೊಂಡಿತ್ತು. ಹೊಸ ದರ ಪಟ್ಟಿಯಲ್ಲಿ ಆರಂಭಿಕ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯು ಬೆಲೆ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5. 87 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.84 ಲಕ್ಷ ಬೆಲೆ ಪಡೆದುಕೊಂಡಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಬೆಲೆ ಹೆಚ್ಚಳದ ನಂತರ ಎಕ್ಸ್‌ಯುವಿ300 ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.55 ಲಕ್ಷ ಬೆಲೆ ಹೊಂದಿದ್ದಲ್ಲಿ ಬಲೆರೊ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.17 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.15 ಲಕ್ಷ ಬೆಲೆ ಪಡೆದುಕೊಂಡಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಮರಾಜೋ ಎಂಪಿವಿ ಕಾರು ಮಾದರಿಯು ಹೊಸ ದರಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.64 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.80 ಲಕ್ಷ ಬೆಲೆ ಹೊಂದಿದ್ದರೆ ಸ್ಕಾರ್ಪಿಯೋ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.68 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.53 ಲಕ್ಷ ಬೆಲೆ ಹೊಂದಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಎಕ್ಸ್‌ಯುವಿ500 ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.83 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.56 ಲಕ್ಷ ಬೆಲೆ ಹೊಂದಿದ್ದು, ವಿವಿಧ ವೆರಿಯೆಂಟ್ ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ.

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ದರಪಟ್ಟಿಯಲ್ಲಿ ಕೇವಲ ಎರಡು ಪೆಟ್ರೋಲ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಪೆಟ್ರೋಲ್ ವೆರಿಯೆಂಟ್ ಬೆಲೆಯನ್ನು ಈ ಹಿಂದಿನಂತೆಯೇ ಮುಂದುವರಿಸಿದ್ದು, ಡೀಸೆಲ್ ಎಂಜಿನ್‌ ವೆರಿಯೆಂಟ್‌ಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಮಾಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಶೀಘ್ರದಲ್ಲೇ ಮತ್ತೆ ಕಾರುಗಳ ಬೆಲೆ ಹೆಚ್ಚಳದ ಸುಳಿವು ನೀಡಿದ ಮಹೀಂದ್ರಾ

ಮುಂಬರುವ ಮಾರ್ಚ್ ಹೊತ್ತಿಗೆ ಎಲ್ಲಾ ವೆರಿಯೆಂಟ್‌ಗಳಲ್ಲೂ ಮತ್ತೆ ಬೆಲೆ ಹೆಚ್ಚಳ ಮಾಡುವ ನೀರಿಕ್ಷೆಗಳಿದ್ದು, ನಿರಂತವಾಗಿ ಹೆಚ್ಚುತ್ತಿರುವ ಬಿಡಿಭಾಗಗಳ ಬೆಲೆ ನಿರ್ವಹಣೆಗೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದಿದೆ.

Most Read Articles

Kannada
English summary
Mahindra Planning To Hike Car Prices Again, Here Is The Reason. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X