ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಮಹೀಂದ್ರಾ(Mahindra) ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ, ಥಾರ್ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳ ಬಿಡುಗಡೆಗಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಹೊಸ ಯೋಜನೆ ಅಡಿ ಮೊದಲ ಕಾರು ಮಾದರಿಯಾಗಿ ಎಕ್ಸ್‌ಯುವಿ700 ಬಿಡುಗಡೆ ಮಾಡಿರುವ ಮಹೀಂದ್ರಾ ಕಂಪನಿಯು ಇದೀಗ ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಮತ್ತು ವಿವಿಧ ಕಾರು ಸರಣಿಯಲ್ಲಿ ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳಲ್ಲದೆ ಶೇ.75 ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರು ಮಾದರಿಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಇಎಕ್ಸ್‌ಯುವಿ300, ಇಕೆಯುವಿ100 ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯೊಂದರಲ್ಲೇ ಎಕ್ಸ್‌‌ಯುವಿ700 ನಂತರ ಎಕ್ಸ್‌ಯುವಿ900 ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಒಟ್ಟು ಐದು ಎಕ್ಸ್‌ಯುವಿ ಸರಣಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಎಕ್ಸ್‌ಯುವಿ ಸರಣಿಯಲ್ಲಿ ಈಗಾಗಲೇ ಎಕ್ಸ್‌ಯುವಿ300 ಮಾದರಿಯ ಮೂಲಕ ಗ್ರಾಹಕರ ಗಮನಸೆಳೆದಿರುವ ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ700 ಕಾರುಗಳ ಮಾರಾಟದಲ್ಲೂ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂದಿನ ಕಾರು ಮಾದರಿಯಾಗಿ ಎಕ್ಸ್‌ಯುವಿ700 ಕೂಪೆ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಎಕ್ಸ್‌ಯುವಿ900 ಕೂಪೆ ಎಸ್‌ಯುವಿ ಮಾದರಿಯು ಎಕ್ಸ್‌ಯುವಿ700 ಮಾದರಿಯಲ್ಲಿರುವ 2.2-ಲೀಟರ್ ಟರ್ಬೊ ಡೀಸೆಲ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಹೊಸ ವಿನ್ಯಾಸ ಹೊರತುಪಡಿಸಿ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅನ್ನು ಕೂಡಾ ಎಕ್ಸ್‌ಯುವಿ700 ಮಾದರಿಯೊಂದಿಗೆ ಹಂಚಿಕೊಳ್ಳಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಸದ್ಯ ಹೊಸ ಕಾರು ಮಾದರಿಯನ್ನು W620 ಹೆಸರಿನೊಂದಿಗೆ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ900 ನಂತರ ಹೊಸ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿದ್ದು, ಪೂರ್ಣ ಪ್ರಮಾಣದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಅಭಿವೃದ್ದಿಗೊಳಿಸುವ ಸಾಧ್ಯತೆಗಳಿವೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಬಿಡುಗಡೆಯಾಗಿರುವ ಹೊಸ ಎಕ್ಸ್‌ಯುವಿ900 ಕಾರಿನಲ್ಲಿ ಕಂಪನಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆಯ 2.0-ಲೀಟರ್ ಪೆಟ್ರೋಲ್ ಮತ್ತು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆಯ 2.2-ಲೀಟರ್ ಡೀಸೆಲ್ ಮಾದರಿಯನ್ನು ನೀಡಬಹುದಾಗಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಹಾಗೆಯೇ ಹೊಸ ಕಾರು ಸೂಪರ್ ಕಾರು ಮತ್ತು ರೇಸ್ ಕಾರುಗಳಲ್ಲಿ ಕಂಡುಬರುವ ವಿಶ್‌ಬೋನ್ ಸಸ್ಷೆಷನ್ ಹೊಂದಿದ್ದು, ಇದು ಪ್ರತಿ ಚಕ್ರದಲ್ಲೂ ಪ್ರತ್ಯೇಕ ನಿಯಂತ್ರಣದೊಂದಿಗೆ ರಸ್ತೆ ಗುಂಡಿಗಳಲ್ಲಿ ಸರಾಗವಾಗಿ ನುಗ್ಗುತ್ತದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್ಸ್‌ಗಳಿರಲಿದ್ದು, ಬೆಲೆ ಕೂಡಾ ಎಕ್ಸ್‌ಯುವಿ700 ಮಾದರಿಗಿಂತಲೂ ತುಸು ಹೆಚ್ಚಿರಲಿದೆ. ಹೊಸ ಕಾರು ಮುಂಬರುವ 2022ರ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿದ್ದು, ಎಕ್ಸ್‌ಯುವಿ900 ಬಿಡುಗಡೆಗೂ ಮುನ್ನ ನ್ಯೂ ಜನರೇಷನ್ ಸ್ಕಾರ್ಪಿಯೋ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಮಹೀಂದ್ರಾ ಕಂಪನಿಯು ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಎಕ್ಸ್‌ಯುವಿ100, ಎಕ್ಸ್‌‌ಯುವಿ400, ಎಕ್ಸ್‌ಯುವಿ900 ಕೂಪೆ ಸೇರಿ ಒಟ್ಟು ಐದು ಎಕ್ಸ್‌ಯುವಿ ಸರಣಿ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೈ ಎಂಡ್ ಮಾದರಿಯಾದ ಎಕ್ಸ್‌ಯುವಿ900 ಮಾದರಿಯು ಫಾರ್ಚೂನರ್ ಮಾದರಿಗೆ ಪೈಪೋಟಿ ನೀಡಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹಲವಾರು ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಇವಿ ವಾಹನ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ವಿಶ್‌ಬೋನ್ ಸಸ್ಷೆಷನ್ ಹೊಂದಿರಲಿದೆ ಮಹೀಂದ್ರಾ ನಿರ್ಮಾಣದ ಹೊಸ ಎಕ್ಸ್‌ಯುವಿ900 ಕೂಪೆ

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ.3 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದಂತಾಗಿದೆ.

Most Read Articles

Kannada
English summary
Mahindra planning to introduced wishbone suspension for upcoming xuv900
Story first published: Monday, November 15, 2021, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X