ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ನಿನ್ನೆ ತನ್ನ ಗುತ್ತಿಗೆ ಹಾಗೂ ಚಂದಾದಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಕ್ವಿಕ್ಲಿಜ್ (Quiklyz) ಪ್ಲಾಟ್ ಫಾರಂ ಅನ್ನು ಅಧಿಕೃತವಾಗಿ ಆರಂಭಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್, ಮಹೀಂದ್ರಾ ಗ್ರೂಪ್‌ನ ಒಂದು ಭಾಗವಾಗಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಇದು ಭಾರತದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳ ಮೇಲೆ ಗಮನಹರಿಸುತ್ತಿರುವ ಕಂಪನಿಯು 7 ಮಿಲಿಯನ್ ಅಂದರೆ 70 ಲಕ್ಷ ಗ್ರಾಹಕರನ್ನು ಹೊಂದಿದ್ದು, 11 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಮಹೀಂದ್ರಾ ಕ್ವಿಕ್ಲಿಜ್ ಬಗ್ಗೆ ಹೇಳುವುದಾದರೆ, ಈ ಪ್ಲಾಟ್‌ಫಾರಂ ಮೂಲಕ ಕಂಪನಿಯು ತನ್ನ ಗ್ರಾಹಕರಿಗೆ ವಾಹನ ಗುತ್ತಿಗೆ ಹಾಗೂ ಚಂದಾದಾರಿಕೆ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ವಾಹನ ಖರೀದಿಗೆ ಅನುಕೂಲವಾಗುವಂತೆ ಉತ್ತಮ ಆಯ್ಕೆಗಳನ್ನು ಒದಗಿಸುವುದು ಈ ಸೇವೆಯನ್ನು ಆರಂಭಿಸಿರುವುದರ ಪ್ರಮುಖ ಗುರಿಯಾಗಿದೆ. ಮಹೀಂದ್ರಾ ಕ್ವಿಕ್ಲಿಜ್ ಅಡಿಯಲ್ಲಿ ವಿವಿಧ ರೀತಿಯ ವಾಹನಗಳಿಗೆ ಗುತ್ತಿಗೆ ಹಾಗೂ ಹಣಕಾಸು ಸೇವೆಗಳನ್ನು ಒದಗಿಸಲಾಗುತ್ತದೆ. ಈ ಪ್ರಯೋಜನಗಳು ಕ್ವಿಕ್ಲಿಜ್ ಅಡಿಯಲ್ಲಿ ಲಭ್ಯವಿರಲಿವೆ. ಕ್ವಿಕ್ಲಿಜ್‌ನಿಂದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ವಿಶೇಷ ಸೌಲಭ್ಯವನ್ನು ನೀಡಲಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಇದರ ಅಡಿಯಲ್ಲಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್ ಮೂಲಕ ಅಂದರೆ ಯಾವುದೇ ಶುಲ್ಕ ಪಾವತಿಸದೇ ಹೊಸ ವಾಹನ ಖರೀದಿಸಬಹುದು. ಈ ಪ್ಲಾಟ್‌ಫಾರಂನಲ್ಲಿ ವಾಹನವನ್ನು ಖರೀದಿಸುವುದು ಸುಲಭವಾಗಲಿದೆ. ಇದರಡಿಯಲ್ಲಿ ಗ್ರಾಹಕರು ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಂತರ ಕಂಪನಿಯು ಎಲ್ಲಾ ನಿರ್ವಹಣೆ ಹಾಗೂ ಸೇವಾ ವೆಚ್ಚವನ್ನು ಭರಿಸುತ್ತದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಇದರ ಜೊತೆಗೆ ಗ್ರಾಹಕರಿಗೆ ವಾಹನವನ್ನು ಹಿಂದಿರುಗಿಸಲು, ಚಂದಾದಾರಿಕೆ ಅವಧಿಯನ್ನು ವಿಸ್ತರಿಸಲು, ವಾಹನವನ್ನು ಖರೀದಿಸಲು ಅಥವಾ ವಾಹನವನ್ನು ಬದಲಾಯಿಸುವ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ಉತ್ತಮ ಮರು ಮಾರಾಟ ಮೌಲ್ಯವನ್ನು ನೀಡುವುದಾಗಿಯೂ ಕಂಪನಿ ಭರವಸೆ ನೀಡಿದೆ. ಕ್ವಿಕ್ಲಿಜ್ ಕಾರು ಬಳಕೆದಾರತ್ವದ ಮೊದಲ ಡಿಜಿಟಲ್ ಪ್ಲಾಟ್‌ಫಾರಂ ಆಗಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಇದರ ಮೂಲಕ ಗ್ರಾಹಕರು ಕಾರು ಮಾಲೀಕತ್ವದ ತೊಂದರೆಗಳಿಲ್ಲದೆ ಹೊಸ ಕಾರ್ ಅನ್ನು ಬಳಸಬಹುದು. ಕ್ವಿಕ್ಲಿಜ್ ಪ್ಲಾಟ್ ಫಾರಂ ನೋಂದಣಿ, ವಿಮೆ, ನಿಗದಿತ ನಿರ್ವಹಣೆ, ರಸ್ತೆ ಬದಿ ನೆರವು (ರೋಡ್ ಸೈಡ್ ಅಸಿಸ್ಟೆನ್ಸ್) ಇತ್ಯಾದಿಗಳನ್ನು ನೋಡಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಕ್ವಿಕ್ಲಿಜ್ ಸೇವೆಗಳನ್ನು ಬೆಂಗಳೂರು, ಚೆನ್ನೈ, ದೆಹಲಿ, ಗುರುಗ್ರಾಮ, ಹೈದರಾಬಾದ್, ಮುಂಬೈ, ನೋಯ್ಡಾ, ಪುಣೆಯಂತಹ ಮೆಟ್ರೋ ನಗರಗಳಲ್ಲಿ ಆರಂಭಿಸಲಾಗುವುದು.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಮುಂದಿನ ದಿನಗಳಲ್ಲಿ ಈ ಪ್ಲಾಟ್ ಫಾರಂ ಅನ್ನು ಸಣ್ಣ ಪಟ್ಟಣ ಹಾಗೂ ಹಳ್ಳಿಗಳನ್ನು ಒಳಗೊಂಡಂತೆ ಭಾರತದಾದ್ಯಂತ ವಿಸ್ತರಿಸಲಾಗುವುದು, ಒಂದು ವರ್ಷದೊಳಗೆ 30 ಸ್ಥಳಗಳಲ್ಲಿ ಈ ಪ್ಲಾಟ್ ಫಾರಂ ಅನ್ನು ಆರಂಭಿಸಲಾಗುವುದು. ಕ್ವಿಕ್ಲಿಜ್ ಹಲವಾರು ಆಟೋಮೋಟಿವ್ OEMಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಗುತ್ತಿಗೆ ಹಾಗೂ ಚಂದಾದಾರಿಕೆಯಲ್ಲಿ ಅವರೊಂದಿಗೆ ಪಾಲುದಾರಿಕೆ ಮಾಡಿ ಕೊಳ್ಳಲಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಕಾರ್ಪೊರೇಟ್ (B2B) ಹಾಗೂ ರಿಟೇಲ್ (B2C) ಗ್ರಾಹಕರಿಗೆ ಕ್ವಿಕ್ಲಿಜ್ ಲಭ್ಯವಿರಲಿದೆ. B2B ವಿಭಾಗದ ಅಡಿಯಲ್ಲಿ, ಕಂಪನಿಯು ಕಾರ್ಪೊರೇಟ್‌ಗಳು ಹಾಗೂ ಫ್ಲೀಟ್ ಆಪರೇಟರ್‌ಗಳಿಗೆ ಸೇವೆ ನೀಡುವ ಗುರಿಯನ್ನು ಹೊಂದಿದೆ. ಆದರೆ B2C ವಿಭಾಗದಲ್ಲಿ ಇದು ರಿಟೇಲ್ ವಲಯದ ಗ್ರಾಹಕರನ್ನು ಗುರಿಯಾಗಿಸಿ ಕೊಂಡಿದೆ. ಇದು ವಾಹನ ಮಾದರಿ, ರೂಪಾಂತರ ಹಾಗೂ ಬಣ್ಣಗಳ ವಿಷಯದಲ್ಲಿ ವ್ಯಾಪಕ ಸರಣಿಯ ಆಯ್ಕೆಯೊಂದಿಗೆ ಎಲ್ಲಾ ಪ್ರಮುಖ ಆಟೋ OEMಗಳ ವಾಹನಗಳನ್ನು ಒಳಗೊಂಡಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಕ್ವಿಕ್ಲಿಜ್ ಶುರು ಮಾಡಿದ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರಾ ಫೈನಾನ್ಸ್‌ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಅಯ್ಯರ್, ಕಾರು ಗುತ್ತಿಗೆ ಹಾಗೂ ಚಂದಾದಾರಿಕೆಯು ಭಾರತದಲ್ಲಿ ಲಾಭದಾಯಕ ಹಾಗೂ ವೇಗವಾಗಿ ಬೆಳೆಯುತ್ತಿರುವ ವ್ಯವಹಾರವಾಗಿದೆ. ನಾವು 3 ಅವಧಿಯಲ್ಲಿ ರೂ. 10,000 ಕೋಟಿಗಳ ವ್ಯವಹಾರವನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ನಾವು ಎಲೆಕ್ಟ್ರಿಕ್ ವಾಹನಗಳನ್ನು ಸಹ ಗುತ್ತಿಗೆಯಡಿ ತರಲು ನೋಡುತ್ತಿದ್ದೇವೆ. ಭಾರತೀಯ ರಿಟೇಲ್ ಗ್ರಾಹಕರಿಗೆ ಲೀಸಿಂಗ್ ಹೊಸ ಪರಿಕಲ್ಪನೆಯಾಗಿದೆ. ಯುವ ಗ್ರಾಹಕರು ಹಾಗೂ ಹೊಸ ಯುಗದ ಕಾರ್ಪೊರೇಟ್‌ಗಳಿಗೆ ನೆರವಾಗಲು ಮಹೀಂದ್ರಾ ಫೈನಾನ್ಸ್ ಈ ಮಾಡ್ಯೂಲ್‌ನಲ್ಲಿ ಮುಂಚೂಣಿಯಲ್ಲಿರಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಎಸ್‌ಯುವಿಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆಯನ್ನು ಹೊಂದಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ 700, ಎಕ್ಸ್‌ಯುವಿ 300, ಬೊಲೆರೊ, ಸ್ಕಾರ್ಪಿಯೋ, ಥಾರ್ ಗಳಂತಹ ಎಸ್‌ಯುವಿಗಳನ್ನು ಮಾರಾಟಮಾಡುವ ಮೂಲಕ ಈ ಸೆಗ್ ಮೆಂಟಿನಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಈ ಸೆಗ್ ಮೆಂಟಿನಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ.

ಹೊಸ ಕಾರು ಬಳಕೆಯನ್ನು ಸುಲಭವಾಗಿಸುತ್ತದೆ Mahindra ಕಂಪನಿಯ ಈ ಪ್ಲಾಟ್‌ಫಾರಂ

ಮಹೀಂದ್ರಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಒಟ್ಟು 13 ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಇತ್ತೀಚಿಗೆ ನಡೆದ ಕಂಪನಿಯ ಆಡಳಿತೆ ಮಂಡಳಿಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರನ್ವಯ ಎಂಟು ಎಲೆಕ್ಟ್ರಿಕ್ ಹಾಗೂ ಐದು ಸಾಮಾನ್ಯ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು. ಕಂಪನಿಯ ಎಲೆಕ್ಟ್ರಿಕ್ ಕಾರುಗಳು 2022ರಿಂದ ಹಂತ ಹಂತವಾಗಿ ಬಿಡುಗಡೆಯಾಗಲಿವೆ.

Most Read Articles

Kannada
English summary
Mahindra quiklyz platform makes vehicle lease and subscription easier details
Story first published: Thursday, November 18, 2021, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X