ತಾಂತ್ರಿಕ ದೋಷ: XUV300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಮುಂಚೂಣಿ ಸಾಧಿಸುತ್ತಿರುವ Mahindra XUV300 ಮಾದರಿಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕಂಪನಿಯು ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿರುವ ಬಗೆಗೆ ಮಾಹಿತಿ ಲಭ್ಯವಾಗಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಎಕ್ಸ್‌ಯುವಿ300 ಮಾದರಿಯ ಡೀಸೆಲ್ ಆವೃತ್ತಿಗಳಲ್ಲಿ ತಾಂತ್ರಿಕ ದೋಷ ಪತ್ತೆ ಹಿನ್ನಲೆಯಲ್ಲಿ ಗ್ರಾಹಕರಲ್ಲಿ ತಾಂತ್ರಿಕ ದೋಷ ಸರಿಪಡಿಸಿಕೊಳ್ಳುವಂತೆ ಸಂದೇಶ ರವಾನಿಸುತ್ತಿದ್ದು, ತಾಂತ್ರಿಕ ದೋಷ ಕಂಡುಬಂದಿರುವ ಬಗೆಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಆದರೆ ತಾಂತ್ರಿಕ ದೋಷವನ್ನು ಸರಿಪಡಿಸಿಕೊಳ್ಳುವಂತೆ ಗ್ರಾಹಕರಿಗೆ ಮನವಿ ಮಾಡಿದ್ದು, ಡೀಸೆಲ್ ಎಂಜಿನ್‌ನಲ್ಲಿರುವ ಇಂಟರ್‌ಕೂಲರ್ ಹೊಸ್(intercooler hose) ಬದಲಾಯಿಸುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಇಂಟರ್‌ಕೂಲರ್ ಹೊಸ್ ಕೊಳವೆಯಿಂದಾಗುತ್ತಿರುವ ತಾಂತ್ರಿಕ ದೋಷದಿಂದ ಕಾರು ಚಾಲನೆಗೆ ಯಾವುದೇ ಗಂಭೀರ ತೊಂದರೆಯಿಲ್ಲದಿದ್ದರೂ ಎಂಜಿನ್ ಕಾರ್ಯಕ್ಷಮತೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಗ್ರಾಹಕರ ದೂರುಗಳ ಆಧಾರದ ಮೇಲೆ ಕಂಪನಿಯು ತಾಂತ್ರಿಕ ದೋಷವನ್ನು ಪತ್ತೆ ಮಾಡಿ ಸಮಸ್ಯೆಗೆ ಪರಿಹಾರ ನೀಡುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಆದರೆ ಎಕ್ಸ್‌ಯುವಿ300 ಮಾದರಿಯನ್ನು ಹಿಂಪಡೆಯುತ್ತಿರುವ ಬಗೆಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲವಾದರೂ ತಾಂತ್ರಿಕ ದೋಷವನ್ನು ಸರಿಪಡಿಸಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಸಮಸ್ಯೆಗೆ ಪರಿಹಾರ ನೀಡುತ್ತಿರುವ ಬಗೆಗೆ ಗ್ರಾಹಕರ ಮೆಚ್ಚುಗೆ ಕಾರಣವಾಗಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಇನ್ನು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಕಾರು ಮಾದರಿಯೆಂಬ ಹೆಗ್ಗಳಿಕೆ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಕಳೆದ ಕೆಲ ತಿಂಗಳಿನಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

2020-21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬುಕಿಂಗ್ ಪ್ರಮಾಣವು ಶೇಕಡಾ 90ರಷ್ಟು ಹೆಚ್ಚಾಗಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 6 ಸಾವಿರ ಯುನಿಟ್‌‌ಗೆ ಬುಕ್ಕಿಂಗ್ ದಾಖಲಾಗಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಹೆಚ್ಚು ಸುರಕ್ಷಾ ಫೀಚರ್ಸ್ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಪ್ರತಿ ಹೊಸ ಕಾರು ಮಾದರಿಗಳಿಗೂ ಪ್ರಯಾಣಿಕರ ಸುರಕ್ಷಾ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಎಕ್ಸ್‌ಯುವಿ300 ಪಡೆದುಕೊಳ್ಳುತ್ತಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಈ ಮೊದಲು ಟಾಟಾ ನೆಕ್ಸಾನ್ ನಂತರ ಎಕ್ಸ್‌ಯುವಿ300 ಕೂಡಾ ಗರಿಷ್ಠ ರೇಟಿಂಗ್ ಪಡೆದುಕೊಳ್ಳುವ ಮೂಲಕ ಗರಿಷ್ಠ ಸುರಕ್ಷತಾ ಕಾರು ಮಾದರಿಯಾಗಿ ಗ್ರಾಹಕರ ಗಮನಸೆಳೆಯುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

#SAFERCARSFORINDIA ಅಭಿಯಾನದಡಿ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗೆ ಗರಿಷ್ಠ ರೇಟಿಂಗ್ ನೀಡಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಎಕ್ಸ್‌ಯುವಿ300 ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟಾಪ್ ಎಂಡ್ ಮಾದರಿಯಲ್ಲಿ 7 ಏರ್‌ಬ್ಯಾಗ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಹೊಂದಿದ್ದು, ಹಲವಾರು ಸೆಗ್ಮೆಂಟ್ ಫಸ್ಟ್ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಎಕ್ಸ್‌ಯುವಿ 300 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಕಂಪನಿಯು ಶೀಘ್ರದಲ್ಲೇ ಎಕ್ಸ್‌ಯುವಿ300 ಮಾದರಿಯ ಟರ್ಬೊ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್(XUV300 Sportz) ಆವೃತ್ತಿಯು ಇದೀಗ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕೋವಿಡ್ ಪರಿಣಾಮ ಬಿಡುಗಡೆ ಮುಂದೂಡಿಕೆಯಾಗುತ್ತಾ ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಹೊಸದಾಗಿ ಅಭಿವೃದ್ದಿಗೊಳಿಸಲಾದ 1.2-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್‌ ಜೋಡಣೆ ಹೊಂದಿದ್ದು, ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ತಾಂತ್ರಿಕ ದೋಷ: XUV 300 ಡೀಸೆಲ್ ಮಾದರಿಯನ್ನು ಹಿಂಪಡೆಯುತ್ತಿದೆ Mahindra ಕಂಪನಿ

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಹೊಸ ಎಂಜಿನ್ ಅನ್ನು ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ದಸರಾ ವೇಳೆಗೆ ಬಿಡುಗಡೆಯಾಗಬಹುದಾಗಿದೆ. ಹೊಸ ಎಂಜಿನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಲಿದೆ.

Most Read Articles

Kannada
English summary
Mahindra recalled xuv300 diesel variants details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X