ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟಿನಲ್ಲಿ ಹೊಸ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಿನಿ ಟ್ರಕ್ ಅನ್ನು ಸುಪ್ರೋ ಪ್ರಾಫಿಟ್ ಟ್ರಕ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಹೊಸ ಮಿನಿ ಟ್ರಕ್ ವಾಹನವನ್ನು ಸುಪ್ರೊ ಪ್ರಾಫಿಟ್ ಮಿನಿ ಹಾಗೂ ಸುಪ್ರೊ ಪ್ರಾಫಿಟ್ ಮ್ಯಾಕ್ಸಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.ಮಿನಿ ಮಾದರಿಯ ಆರಂಭಿಕ ಬೆಲೆ ಮುಂಬೈ ಎಕ್ಸ್ ಶೋರೂಂ ದರದಂತೆ ರೂ.5.40 ಲಕ್ಷಗಳಾದರೆ, ಮ್ಯಾಕ್ಸಿ ಮಾದರಿಯ ಹೈ-ಎಂಡ್ ರೂಪಾಂತರದ ಬೆಲೆ ಮುಂಬೈ ಎಕ್ಸ್ ಶೋರೂಂ ದರದಂತೆ ರೂ.6.22 ಲಕ್ಷಗಳಾಗಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಹೊಸ ಕಮರ್ಷಿಯಲ್ ಯುಟಿಲಿಟಿ ವಾಹನವು ಸುಪ್ರೊ ಮಿನಿ ಟ್ರಕ್ ಅನ್ನು ಆಧರಿಸಿದೆ. ಸುಪ್ರೋ ಪ್ರಾಫಿಟ್ ಟ್ರಕ್ ಅನ್ನು ಹೆಚ್ಚು ಲೋಡಿಂಗ್, ಹೆಚ್ಚು ಮೈಲೇಜ್ ಹೆಚ್ಚಿನ ದಕ್ಷತೆ ಹಾಗೂ ವಿವಿಧ ಫೀಚರ್'ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯ ಪವರ್‌ಫುಲ್ ಡೈರೆಕ್ಟ್ ಇಂಜೆಕ್ಷನ್ ಬಿಎಸ್ 6 ಡೀಸೆಲ್ ಎಂಜಿನ್ ಅನ್ನು ಸುಪ್ರೋ ಪ್ರಾಫಿಟ್ ಮಿನಿ ಟ್ರಕ್‌ನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 3600 ಆರ್‌ಪಿ‌ಎಂನಲ್ಲಿ 19.4 ಕಿ.ವ್ಯಾ ವಿಸರ್ಜಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಸುಪ್ರೊ ಪ್ರಾಫಿಟ್ ಮ್ಯಾಕ್ಸಿಯಲ್ಲಿರುವ 4 ಸ್ಟ್ರೋಕ್, 2 ಸಿಲಿಂಡರ್ 909 ಸಿಸಿ ಎಂಜಿನ್ 26 ಬಿಹೆಚ್‌ಪಿ ಪವರ್ ಹಾಗೂ 55 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಈ ಎಂಜಿನ್ ಗರಿಷ್ಠ ಸಾಮರ್ಥ್ಯವನ್ನು 4 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನಲ್ಲಿರಿಸುತ್ತದೆ. ಈ ಟ್ರಕ್‌ನಲ್ಲಿ ಪವರ್ ಹಾಗೂ ಇಕೋ ಎಂಬ ಎರಡು ಮೋಡ್'ಗಳಿವೆ. ಈ ವಾಹನವು ಪ್ರತಿ ಲೀಟರ್‌ಗೆ 23.30 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಸುಪ್ರೋ ಪ್ರಾಫಿಟ್ ಟ್ರಕ್ ಮಿನಿಯನ್ನು ಸಿಎನ್‌ಜಿಯೊಂದಿಗೂ ಸಹ ಮಾರಾಟ ಮಾಡಲಾಗುತ್ತದೆ. ಈ ಹೊಸ ವಾಹನಕ್ಕೆ ಗ್ರಾಹಕರನ್ನು ಆಕರ್ಷಿಸಲು ಮಹೀಂದ್ರಾ ಕಂಪನಿಯು ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಕಂಪನಿಯು ಐದು ವರ್ಷಗಳ ಸಾಲ ಯೋಜನೆ ಹಾಗೂ 12.99% ಬಡ್ಡಿದರದೊಂದಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದೆ. ಇಎಂಐ ಯೋಜನೆಯಡಿ ವಾಹನ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ವಿಶೇಷ ಕೊಡುಗೆಯಾಗಿ 100%ನಷ್ಟು ಸಾಲ ನೀಡಲು ಕಂಪನಿ ಯೋಜಿಸಿದೆ.

ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಬಿಡುಗಡೆಗೊಳಿಸಿದ ಮಹೀಂದ್ರಾ

ಸುಪ್ರೋ ಪ್ರಾಫಿಟ್ ಟ್ರಕ್‌ನಲ್ಲಿ 13 ಇಂಚಿನ ಟಯರ್ ಅಳವಡಿಸಲಾಗಿದೆ. ಈ ಟಯರ್‌ ಜೋಡಿಸಿದ ನಂತರ ಟ್ರಕ್‌ನ ಎತ್ತರ 170 ಎಂಎಂಗಳಾಗುತ್ತದೆ. ಯಾವುದೇ ರೀತಿಯ ರಸ್ತೆಯಲ್ಲೂ ಸಾಗುವ ಸಾಮರ್ಥ್ಯವನ್ನು ಹೊಂದಿರುವ ಈ ಮಿನಿ ಟ್ರಕ್ 1050 ಕೆ.ಜಿವರೆಗಿನ ತೂಕವನ್ನು ಸಾಗಿಸಬಲ್ಲದು.

Most Read Articles

Kannada
English summary
Mahindra Supro Profit Truck range launched in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X