ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಕಳೆದ ವರ್ಷ ಬಿಡುಗಡೆಯಾದ ಹೊಸ ತಲೆಮಾರಿನ Mahindra Thar ಎಸ್‌ಯು‌ವಿ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿದೆ. ಹಲವರು ಈ ಎಸ್‌ಯು‌ವಿಯನ್ನು ಹಲವು ಎಸ್‌ಯು‌ವಿಗಳಿಗೆ ಸಮನೆಂದು ಪರಿಗಣಿಸಿದ್ದಾರೆ. Thar ಎಸ್‌ಯು‌ವಿಯನ್ನು ಬುಕ್ಕಿಂಗ್ ಮಾಡಿದ ನಂತರ ಅದರ ವಿತರಣೆಯನ್ನು ಪಡೆಯಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

Thar ಎಸ್‌ಯು‌ವಿಯು ಹೆಚ್ಚು ಬೇಡಿಕೆಯನ್ನು ಹೊಂದಿದ್ದರೂ ಕಡಿಮೆ ಮೈಲೇಜ್ ನೀಡುತ್ತದೆ ಎಂಬುದು ಗ್ರಾಹಕರ ದೂರು. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಗನಕ್ಕೇರಿರುವುದರಿಂದ ವಾಹನ ಸವಾರರು ಪರ್ಯಾಯ ಇಂಧನ ಆಯ್ಕೆಗಳತ್ತ ಮುಖ ಮಾಡಿದ್ದಾರೆ. ವಾಹನ ಸವಾರರು ಸಿ‌ಎನ್‌ಜಿ ಎಂಜಿನ್ ಹೊಂದಿರುವ ವಾಹನಗಳ ಬಳಕೆಗೆ ಮುಂದಾಗುತ್ತಿದ್ದಾರೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಹಲವು ಕಾರುಗಳು ಫ್ಯಾಕ್ಟರಿ ಫಿಟ್ಟೆಡ್ ಸಿ‌ಎನ್‌ಜಿ ಕಿಟ್‌ ಹೊಂದಿರುತ್ತವೆ. ಆದರೆ Thar ಎಸ್‌ಯುವಿ ಸಿ‌ಎನ್‌ಜಿ ಕಿಟ್ ಹೊಂದಿರುವುದನ್ನು ಯಾರೂ ನೋಡಿಲ್ಲ. ಆದರೆ ಸಿಎನ್‌ಜಿ ಡೀಲರ್‌ಯೊಬ್ಬರು ಸಿಎನ್‌ಜಿ ಕಿಟ್ ಮೂಲಕ Thar ಎಸ್‌ಯು‌ವಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪರಿಶೀಲಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಈ ವೀಡಿಯೊವನ್ನು ಗ್ರೀನ್ ಫ್ಯೂಲ್ಸ್ ಎಂಬ ಯೂಟ್ಯೂಬ್ ಚಾನೆಲ್ ಶೇರ್ ಮಾಡಿದೆ. Thar ಎಸ್‌ಯು‌ವಿಯ ಬೂಟ್ 12 ಕೆ.ಜಿ ಅಥವಾ 14 ಕೆ.ಜಿ ಸಿಲಿಂಡರ್‌ಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ವಿವರಿಸಲಾಗಿದೆ. Thar ಎಸ್‌ಯು‌ವಿಯ ಪೆಟ್ರೋಲ್ ಎಂಜಿನ್ ಡೈರೆಕ್ಟ್ ಇಂಜೆಕ್ಷನ್ ಬಳಸುವುದರಿಂದ, ಇದಕ್ಕೆ ವಿಶೇಷ ಸಿ‌ಎನ್‌ಜಿ ಕಿಟ್'ನ ಅಗತ್ಯವಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ಗಳನ್ನು ಬೆಂಬಲಿಸುವ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಿಟ್ ಥಾರ್ ಎಸ್‌ಯು‌ವಿಯು ಸಿಎನ್‌ಜಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಸಿಎನ್‌ಜಿ ಕಿಟ್ ಮೂಲಕ ಚಾಲನೆ ಮಾಡುವಾಗ ಥಾರ್ ಎಸ್‌ಯು‌ವಿಯು ಪ್ರತಿ ಕೆ.ಜಿ ಸಿ‌ಎನ್‌ಜಿಗೆ 20 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಅಂದರೆ ಪ್ರತಿ ಕಿ.ಮೀ.ಗೆ ಕೇವಲ ರೂ. 3 ರಿಂದ ರೂ. 3.15 ವೆಚ್ಚವಾಗುತ್ತದೆ. ಇತ್ತೀಚೆಗೆ ಬಿಡುಗಡೆಯಾದ XUV 700 ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿಯೂ ಸಿ‌ಎನ್‌ಜಿ ಕಿಟ್ ಅಳವಡಿಸಬಹುದು ಎಂದು ಈ ವೀಡಿಯೊದಲ್ಲಿ ಹೇಳಲಾಗಿದೆ. ಈಗ ಮಾರುಕಟ್ಟೆಯಲ್ಲಿರುವ Thar ಎಸ್‌ಯು‌ವಿಯನ್ನು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಪೆಟ್ರೋಲ್ ಮಾದರಿಯು 2.0 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಡೈರೆಕ್ಟ್ ಇಂಜೆಕ್ಷನ್ ಸಿಸ್ಟಂ ಹೊಂದಿದೆ. ಈ ಎಂಜಿನ್ ಗರಿಷ್ಠ 150 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟಾರ್ಕ್ ಉತ್ಪಾದನೆಯು ಆಯ್ಕೆ ಮಾಡದ ಗೇರ್ ಬಾಕ್ಸ್ ಅನ್ನು ಅವಲಂಬಿಸಿರುತ್ತದೆ. 6 ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಇನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2.2 ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 130 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಥಾರ್ ಎಸ್‌ಯು‌ವಿಯ ಡೀಸೆಲ್ ಎಂಜಿನ್‌ ಮಾದರಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸಹ ನೀಡುತ್ತದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಈ ಎರಡೂ ಎಂಜಿನ್‌ಗಳಲ್ಲಿ 4 × 4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹಾಗೂ ಕಡಿಮೆ ಶ್ರೇಣಿಯ ವರ್ಗಾವಣೆ ಕೇಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಸದ್ಯಕ್ಕೆ Mahindra Thar ಎಸ್‌ಯು‌ವಿಯ ಮೂರು ಡೋರ್ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಹೊಸ ಮಹೀಂದ್ರಾ ಥಾರ್ ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12.78 ಲಕ್ಷಗಳಿಂದ ರೂ. 15.08 ಲಕ್ಷಗಳಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಮಹೀಂದ್ರಾ ಕಂಪನಿಯು ಥಾರ್ ಎಸ್‌ಯುವಿಯ ಐದು ಡೋರ್ ಗಳ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಆವೃತ್ತಿಯು ಅದೇ ಬಾಕ್ಸ್ ವಿನ್ಯಾಸವನ್ನು ಹೊಂದಿರುವುದರ ಜೊತೆಗೆ ಉದ್ದವಾದ ವ್ಹೀಲ್‌ಬೇಸ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಮಾದರಿಯು ವಿಶಾಲವಾದ ಹಿಂಭಾಗದ ಬಾಗಿಲುಗಳನ್ನು ಹೊಂದಿರುವುದರಿಂದ ಹಿಂದಿನ ಪ್ರಯಾಣಿಕರು ಸುಲಭವಾಗಿ ಒಳಗೆ ಹೋಗಬಹುದು, ಹೊರಗೆ ಹೋಗಬಹುದು.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಮೂರು ಬಾಗಿಲಿನ ಥಾರ್‌ನ ಹಿಂಭಾಗದ ಪ್ರಯಾಣಿಕರು ಒಳಕ್ಕೆ ಹೋಗಲು ಹಾಗೂ ಹೊರಗೆ ಬರಲು ಮುಂಭಾಗದ ಆಸನಗಳನ್ನು ಮುಂದಕ್ಕೆ ಚಲಿಸಬೇಕಾಗುತ್ತದೆ. ವಯಸ್ಸಾದವರಿಗೆ ಇದರಿಂದ ಕಷ್ಟವಾಗುತ್ತದೆ. ಮಹೀಂದ್ರ ಥಾರ್‌ನ ಐದು ಡೋರ್ ಗಳ ಆವೃತ್ತಿಯು ಹಲವಾರು ನವೀಕರಣಗಳನ್ನು ಹೊಂದಿರಲಿದೆ ಎಂದು ಕಂಪನಿ ಸುಳಿವು ನೀಡಿದೆ.

ಡ್ರೈವಿಂಗ್ ಗುಣಮಟ್ಟವನ್ನು ಸುಧಾರಿಸಲು ಹಾಗೂ ಸಸ್ಪೆಂಷನ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲು ಮಹೀಂದ್ರ ಥಾರ್ ಎಸ್‌ಯು‌ವಿಯನ್ನು ನವೀಕರಿಸಲಾಗುತ್ತದೆ. ಈ ಹೊಸ ಆವೃತ್ತಿಯು 2023 ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಗಳಿವೆ. ಎಸ್‌ಯುವಿಗಳಿಗಾಗಿ ಮಹೀಂದ್ರಾ ಕಂಪನಿಯು ಪರಿಚಯಿಸಿರುವ ಹೊಸ ಲೋಗೋ ಥಾರ್‌ನ ಐದು ಡೋರ್ ಆವೃತ್ತಿಯಲ್ಲಿ ಇರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಆಫ್ಟರ್ ಮಾರ್ಕೆಟ್ ಸಿ‌ಎನ್‌ಜಿ ಕಿಟ್'ಗೆ ಬದಲಾದ Mahindra Thar ಎಸ್‌ಯು‌ವಿ

ಹೊಸ ಆವೃತ್ತಿಯು ಮಾರುಕಟ್ಟೆಯಲ್ಲಿರುವ ಥಾರ್ ಎಸ್‌ಯು‌ವಿಯಲ್ಲಿರುವಂತಹ ಪ್ಲಾಟ್‌ಫಾರಂ, ವಿನ್ಯಾಸ, ಫೀಚರ್ ಹಾಗೂ ಎಂಜಿನ್ ಸೆಟಪ್ ಅನ್ನು ಹೊಂದಿರಲಿದೆ. ಮಹೀಂದ್ರಾ ಕಂಪನಿಯ ಹೊಸ ಯೋಜನೆಯಡಿಯಲ್ಲಿ 2026 ರವರೆಗೆ ಹಲವು ಹೊಸ ಮಾದರಿಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
Mahindra thar converted to aftermarket cng kit video details
Story first published: Saturday, October 30, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X