ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಮಹೀಂದ್ರಾ ಕಂಪನಿಯು ನ್ಯೂ ಜನರೇಷನ್ ಥಾರ್ ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಥಾರ್ ಕಾರು ಮಾರಾಟದಲ್ಲಿ ಮತ್ತಷ್ಟು ಹೊಸ ಬದಲಾವಣೆಗೆ ಮುಂದಾಗಿರುವ ಮಹೀಂದ್ರಾ ಕಂಪನಿಯು ವಿನೂತನ ಎಂಜಿನ್ ಆಯ್ಕೆ ಹೊಂದಿರುವ ಥಾರ್ ಬೆಸ್ ವೆರಿಯೆಂಟ್ ಬಿಡುಗಡೆ ಮಾಡಲಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ನ್ಯೂ ಜನರೇಷನ್ ಥಾರ್ ಎಸ್‌ಯುವಿ ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಯೆಂತೆ ವಿವಿಧ ವೆರಿಯೆಂಟ್‌ಗಳ ಮಾರಾಟದಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ನವೀಕರಿಸಲಾದ ಮತ್ತೊಂದು ಎಂಟ್ರಿ ಲೆವಲ್ ಮಾದರಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಆರಂಭದಲ್ಲಿ ಬಿಡುಗಡೆ ಮಾಡಿದ್ದ ಎಂಟ್ರಿ ಲೆವಲ್ ಸ್ಥಗಿತದ ನಂತರ ಮತ್ತೊಂದು ಮಾದರಿಯನ್ನು ಪರಿಚಯಿಸುವ ಉದ್ದೇಶದಿಂದ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಮಾಹಿತಿಗಳ ಪ್ರಕಾರ, ಥಾರ್ ಆರಂಭಿಕ ಮಾದರಿಯು ಸಂಪೂರ್ಣ ಹೊಸ ಎಂಜಿನ್ ಆಯ್ಕೆಯೊಂದಿಗೆ ಅತಿ ಕಡಿಮೆ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದ್ದು, ತ್ರಿ ಸಿಲಿಂಡರ್ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಹೊಸ ವೆರಿಯೆಂಟ್ ಅನ್ನು ಆಫ್ ರೋಡ್‌ಗೆ ಬದಲಾಗಿ ಅರ್ಬನ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದ್ದು, 4x4 ಡ್ರೈವ್ ಸಿಸ್ಟಂ ಬದಲಾಗಿ 2 ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡುತ್ತಿದ್ದು, ಬೆಲೆ ಕಡಿತಗೊಳಿಸಲು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗುತ್ತಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಥಾರ್ ಮಾದರಿಗಳ ಮಾರಾಟವು ಯಾವುದೇ ಬದಲಾವಣೆಯಿಲ್ಲದೆ ಮಾರಾಟ ಮುಂದುವರಿಯಲಿದ್ದು, ಬಜೆಟ್ ಬೆಲೆಯಲ್ಲಿ ಆಫ್ ರೋಡ್ ಶೈಲಿಯ ಕಾರು ಖರೀದಿ ಬಯಸುವ ಗ್ರಾಹಕರಿಗಾಗಿ ಅತಿ ಕಡಿಮೆ ಫೀಚರ್ಸ್ ಹೊಂದಿರುವ ಬೆಸ್ ವೆರಿಯೆಂಟ್ ಅಭಿವೃದ್ದಿಗೊಳಿಸಲಾಗುತ್ತಿದೆ. ರೂ.8 ಲಕ್ಷ ಆರಂಭಿಕ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದರೂ ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಥಾರ್ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.12 ಲಕ್ಷದಿಂದ ಟಾಪ್ ಮಾದರಿಯು ರೂ. 14.17 ಲಕ್ಷ ಬೆಲೆ ಪಡೆದುಕೊಂಡಿದ್ದು, ಬೆಸ್ ವೆರಿಯೆಂಟ್ ಆಕರ್ಷಕ ಫೀಚರ್ಸ್‌ಗಳೊಂದಿಗೆ ಅರ್ಬನ್ ಕಾರು ಮಾದರಿಯಾಗಿ ಗುರುತಿಕೊಳ್ಳಲಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಇನ್ನು ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ವಿವಿಧ ವೆರಿಯೆಂಟ್‌ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಥಾರ್ ಹೊಸ ಬೆಸ್ ವೆರಿಯೆಂಟ್

ಮಹೀಂದ್ರಾ ಕಂಪನಿಯು ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ 1.5-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಆರಂಭಿಕ ಮಾದರಿಯು 2 ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಆರಂಭಿಕ ಕಾರು ಖರೀದಿದಾರರನ್ನು ಸೆಳೆಯಲಿದೆ.

More from DriveSpark

Article Published On: Tuesday, May 18, 2021, 18:32 [IST]
English summary
Mahindra Thar New Base Variant In The Works With New Engine. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+