ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ನಡುವೆ ಮಹೀಂದ್ರಾ ಈ ವರ್ಷದ ಅಂತ್ಯದ ಮೊದಲು ಹೊಸ ಬೊಲೆರೊ ನಿಯೋ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಬೊಲೆರೊ ನಿಯೋ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ. ಇದು ಹೊಸ ಥಾರ್‌ಗೆ ಆಧಾರವಾಗಿರುವಂತೆಯೇ ಇರುತ್ತದೆ. ಈ ಪ್ಲಾಟ್‌ಫಾರ್ಮ್ ಹೊಸ ಸ್ಕಾರ್ಪಿಯೋ ಎಸ್‌ಯುವಿಗೆ ಸಹ ಆಧಾರವಾಗಲಿದೆ. ಹೊಸ ಥಾರ್ ಬಾಕ್ಸಿ ಮತ್ತು ನೇರ ವಿನ್ಯಾಸವನ್ನು ಉಳಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ. ಇದು ಹೆಚ್ಚು ಆಧುನಿಕವಾಗಿ ಕಾಣುತ್ತದೆ ಮತ್ತು ಉತ್ತಮ ಸುಸಜ್ಜಿತ ಒಳಾಂಗಣವನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಬೊಲೆರೊ ಗ್ರಾಮಿಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ, ಅದರ ಒರಟಾದ ಪ್ರೊಫೈಲ್‌ಗೆ ಹೆಚ್ಚಿನ ಜನರ ಗಮನಸೆಳೆದಿದೆ. ಹೊಸ ಮಹೀಂದ್ರಾ ಬೊಲೆರೊ ನಿಯೋ ಮಾದರಿಯಲ್ಲಿಯು ಈ ಎಲ್ಲಾ ಗುಣಲಕ್ಷಣಗಳನ್ನು ಉಳಿಸಿಕೊಳ್ಳುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಇನ್ನು ಹೊಸ ಬೊಲೆರೊ ನಿಯೋ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಟಾಪ್-ಎಂಡ್ ರೂಪಾಂತರದಲ್ಲಿ ಎಲ್‌ಇಡಿ ಡಿಆರ್‌ಎಲ್, ಸ್ಕಿಡ್ ಪ್ಲೇಟ್, ಟರ್ನ್ ಇಂಡಿಕೇಟರ್‌ಗಳೊಂದಿಗೆ ಒಆರ್‌ವಿಎಂ ಮತ್ತು ಮುಂದಿನ ತಲೆಮಾರಿನ ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ನಿಂದ ಸ್ಫೂರ್ತಿ ಪಡೆದ ಹೊಸ ಫ್ರಂಟ್ ಗ್ರಿಲ್ ಅನ್ನು ಪಡೆಯುವ ಸಾಧ್ಯತೆಯಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಮಹೀಂದ್ರಾ ಬೊಲೆರೊ ನಿಯೋದಲ್ಲಿ ಹೊಸ ಬಗೆಯ ಸೀಟುಗಳ ಆಯ್ಕೆಗಳೊಂದಿಗೆ ನೀಡಲಾಗುವುದು. ಇನ್ನು ಈ ಮಾದರಿಯ ಇಂಟಿರಿಯರ್ ನಲ್ಲಿ ಹೊಸ ಅಪ್ದೇಟ್ ಗಳನ್ನು ನಡೆಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯ ಮಾದರಿಗೆ ಹೋಲಿಸಿದರೆ ಹೊಸ ಬದಲಾವಣೆಗಳನ್ನು ಪಡೆಯಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಈ ಮಹೀಂದ್ರಾ ಬೊಲೆರೊ ನಿಯೋದಲ್ಲಿ ಹೊಸ ಆಡಿಯೊ ಸಿಸ್ಟಂ, ಬ್ಲೂಟೂತ್ ಟೆಲಿಫೋನಿ, ಎಸಿ ಮತ್ತು ಇತರ ಫೀಚರ್ ಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುವ ನಿರೀಕ್ಷೆಯಿದೆ. ಟಾಪ್-ಎಂಡ್ ರೂಪಾಂತರವು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿಯು ಹೊಸ ಸುರಕ್ಷತೆ ಮತ್ತು ಕ್ರ್ಯಾಶ್ ಟೆಸ್ಟ್ ಗಳ ಮಾನದಂಡಗಳಿಗೆ ಅನುಗುಣವಾಗಿರುತ್ತದೆ, ಏಕೆಂದರೆ ಇದು ಜಿಎನ್‌ಸಿಎಪಿಯಲ್ಲಿ 4 ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಪಡೆದ ಹೊಸ ಥಾರ್ ಅನ್ನು ಆಧರಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಈ ಬೊಲೆರೊ ನಿಯೋ ಎಸ್‍ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಬೆಲ್ಟ್ ಅಲರ್ಟ್, ಸ್ಪೀಡ್ ಅಲರ್ಟ್ ಸಿಸ್ಟಂ, ವೆಹಿಕಲ್ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ಗಾಗಿ ಮ್ಯಾನುಯಲ್ ಓವರ್‌ರೈಡ್ ಸ್ಟ್ಯಾಂಡರ್ಡ್ ಆಗಿ ಬರಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಇನ್ನು ಈ ಬೊಲೆರೊ ನಿಯೋ ಎಸ್‍ಯುವಿಯಲ್ಲಿ ಹೊಸ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಇದೇ ಎಂಜಿನ್ ಅನ್ನು ಹೊಸ ಥಾರ್ ಎಸ್‍ಯುವಿಗೂ ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಮಹೀಂದ್ರಾ ಬೊಲೆರೊ ನಿಯೋ

ಈ ಎಂಜಿನ್ 130 ಬಿಹೆಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಬಹುದು. ಈ ಎಸ್‍ಯುವಿ ಸೌಕರ್ಯ ಮತ್ತು ಡ್ರೈವಿಬಿಲಿಟಿ ಹೆಚ್ಚಿಸುವುದಕ್ಕೆ ಇದರ ಸಸ್ಪೆಂಕ್ಷನ್ ಸಿಸ್ಟಂ ಸಹ ನವೀಕರಿಸಬಹುದು.

Most Read Articles

Kannada
English summary
New Mahindra Bolero Coming In The End Of 2021. Read In Kananda.
Story first published: Wednesday, January 27, 2021, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X