ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ದೇಶದಲ್ಲಿರುವ ವಾಹನ ತಯಾರಕ ಕಂಪನಿಗಳು ತಮ್ಮ ಫೆಬ್ರವರಿ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸುತ್ತಿವೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮಾರಾಟದಲ್ಲಿ ಕಳೆದ ತಿಂಗಳು ಸ್ವಲ್ಪ ಚೇತರಿಕೆ ಕಂಡು ಬಂದಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಮತ್ತೊಂದೆಡೆ ಕೃಷಿ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಭಾರತೀಯ ಮೂಲದ ಟ್ರಾಕ್ಟರ್ ತಯಾರಕ ಕಂಪನಿಯಾದ ಮಹೀಂದ್ರಾ ಟ್ರ್ಯಾಕ್ಟರ್ಸ್ ಸಹ ತನ್ನ ಫೆಬ್ರವರಿ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಈ ಅಂಕಿಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್'ಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಕೃಷಿ ಉಪಕರಣಗಳ ವಲಯವು ಮಾರಾಟದಲ್ಲಿ ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 24%ನಷ್ಟು ಏರಿಕೆಯನ್ನು ದಾಖಲಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಕಂಪನಿಯು 2021ರ ಫೆಬ್ರವರಿ ತಿಂಗಳಿನಲ್ಲಿ ಒಟ್ಟು 27,170 ಯುನಿಟ್ ಟ್ರ್ಯಾಕ್ಟರ್'ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. 2020ರ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು ಒಟ್ಟು 21,877 ಯುನಿಟ್ ಟ್ರಾಕ್ಟರ್'ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಈ ಬಗ್ಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್ಚೇಂಜ್'ಗೆ ಮಾಹಿತಿ ನೀಡಿದೆ. ಕಂಪನಿಯ ಮಾರಾಟದ ಬಗ್ಗೆ ಮಾಹಿತಿ ನೀಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಎಫ್‌ಇಎಸ್ ಅಧ್ಯಕ್ಷರಾದ ಹೇಮಂತ್ ಸಿಕ್ಕಾ, ಬೆಳೆಗಳನ್ನು ಸಮಯೋಚಿತವಾಗಿ ಬಿತ್ತನೆ ಮಾಡುವುದರಿಂದ, ಟ್ರಾಕ್ಟರುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಬೆಳೆ ಉತ್ಪಾದನೆ ಹಾಗೂ ಹೆಚ್ಚುತ್ತಿರುವ ಗ್ರಾಮೀಣ ಪ್ರದೇಶದ ಆರ್ಥಿಕತೆಯಿಂದಾಗಿ ಟ್ರ್ಯಾಕ್ಟರ್ ಉದ್ಯಮವು ಸಕಾರಾತ್ಮಕವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಕಂಪನಿಯು ಟ್ರಾಕ್ಟರುಗಳ ರಫ್ತಿನಲ್ಲೂ ಉತ್ತಮ ಸಾಧನೆ ಮಾಡಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕಳೆದ ತಿಂಗಳು ಒಟ್ಟು 976 ಟ್ರಾಕ್ಟರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು 43%ನಷ್ಟು ಹೆಚ್ಚಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

2021ರ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿ ಹಾಗೂ ರಫ್ತು ಮೂಲಕ ಒಟ್ಟಾರೆಯಾಗಿ 28,146 ಯುನಿಟ್‌ ಟ್ರ್ಯಾಕ್ಟರ್'ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಒಟ್ಟಾರೆಯಾಗಿ 22,561 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಕಂಪನಿಯ ಮಾರಾಟವು ಈ ವರ್ಷ 25%ನಷ್ಟು ಹೆಚ್ಚಾಗಿದೆ. ಮತ್ತೊಂದು ಟ್ರಾಕ್ಟರ್ ಕಂಪನಿಯಾದ ಎಸ್ಕೋರ್ಟ್ಸ್ ಲಿಮಿಟೆಡ್ ಕಂಪನಿಯು 10,690 ಯುನಿಟ್ ಟ್ರ್ಯಾಕ್ಟರ್'ಗಳನ್ನು ಮಾರಾಟ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಈ ಮೂಲಕ ಕಂಪನಿಯ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ 33%ನಷ್ಟು ಹೆಚ್ಚಾಗಿದೆ. ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು 41%ನಷ್ಟು ಏರಿಕೆಯನ್ನು ದಾಖಲಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಮಾರಾಟ

ಮಹೀಂದ್ರಾ ಕಂಪನಿಯು ಕಳೆದ ತಿಂಗಳು 15,391 ಯುನಿಟ್ ಪ್ಯಾಸೆಂಜರ್ ಕಾರುಗಳನ್ನು ಮಾರಾಟ ಮಾಡಿದೆ. 2020ರ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು 10,938 ಯುನಿಟ್ ಪ್ಯಾಸೆಂಜರ್ ಕಾರುಗಳನ್ನು ಮಾರಾಟ ಮಾಡಿತ್ತು.

Most Read Articles

Kannada
English summary
Mahindra tractor sales increases in February 2021. Read in Kannada.
Story first published: Tuesday, March 2, 2021, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X