ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಟ್ರಿಯೊ ಜೋರ್ ಎಲೆಕ್ಟ್ರಿಕ್ ಕಾರ್ಗೋದ 1,000 ಯುನಿಟ್'ಗಳನ್ನು ಮಾರಾಟ ಮಾಡಿರುವುದಾಗಿ ಇತ್ತೀಚೆಗೆ ಮಹೀಂದ್ರಾ ಎಲೆಕ್ಟ್ರಿಕ್ ವರದಿ ಮಾಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವನ್ನು ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಕೇವಲ 6 ತಿಂಗಳಲ್ಲಿ ಟ್ರಿಯೋ ಜೋರ್ ಈ ಸೆಗ್'ಮೆಂಟಿನಲ್ಲಿ 59%ನಷ್ಟು ಪಾಲನ್ನು ಹೊಂದಿದೆ. ಟ್ರಿಯೋ ಜೋರ್ ಎಲೆಕ್ಟ್ರಿಕ್ ಕಾರ್ಗೋವನ್ನು ಬಲಿಷ್ಠವಾದ ಪ್ಲಾಟ್ ಫಾರಂನಲ್ಲಿ ನಿರ್ಮಿಸಿರುವುದಾಗಿ ಕಂಪನಿ ತಿಳಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಟ್ರಿಯೋ ಎಲೆಕ್ಟ್ರಿಕ್ ಕಾರ್ಗೋ ವಾಹನವು ಡೀಸೆಲ್ ಸರಕು ವಾಹನಗಳು ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತದೆ. ಸರಿಸಾಟಿಯಿಲ್ಲದ ಸಾಮರ್ಥ್ಯದಿಂದಾಗಿ ಟ್ರಿಯೋ ಎಲೆಕ್ಟ್ರಿಕ್ ಕಾರ್ಗೋವನ್ನು ದೇಶಾದ್ಯಂತ ಕೊನೆಯ ಮೈಲಿ ವಿತರಣೆಗೆ ಬಳಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಟ್ರಿಯೋ ಎಲೆಕ್ಟ್ರಿಕ್ ಬಳಕೆಯು ಹೆಚ್ಚು ಪರಿಣಾಮಕಾರಿಯಾಗಿದ್ದು, ಸಾಮಾನ್ಯ ಡೀಸೆಲ್ ಸರಕು ವಾಹನಗಳಿಗಿಂತ ಸುರಕ್ಷಿತ ಹಾಗೂ ಹೆಚ್ಚು ಪರಿಸರ ಸ್ನೇಹಿಯಾಗಿದೆ. ಮಹೀಂದ್ರಾ ಟ್ರಿಯೊ ಜೋರ್ 12ನೇ ಅಪೊಲೊ ಸಿವಿ ಪ್ರಶಸ್ತಿಯನ್ನೂ ಪಡೆದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ನಾವೀನ್ಯತೆ, ಮಾರುಕಟ್ಟೆಯಲ್ಲಿನ ಪ್ರಸ್ತುತತೆ, ಬೆಲೆ ಅಥವಾ ಮಾಲೀಕತ್ವ ವೆಚ್ಚದಂತಹ ಮಾನದಂಡಗಳನ್ನು ಪೂರೈಸಿರುವುದರಿಂದ ಮಹೀಂದ್ರಾ ಟ್ರಿಯೊ ಜೋರ್ ಈ ಪ್ರಶಸ್ತಿಯನ್ನು ಪಡೆದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಮಹೀಂದ್ರಾ ಟ್ರಿಯೊ ಜೋರ್ ವಾಹನವನ್ನು ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮಹೀಂದ್ರಾ ಟ್ರಿಯೋ ವಾಹನಗಳನ್ನು ಇ ಕಾಮರ್ಸ್ ಕಂಪನಿಗಳು ವಿತರಣಾ ಸೇವೆಗಳನ್ನು ನೀಡಲು ಬಳಸುತ್ತವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ರಿಟೇಲ್ ಕಂಪನಿಗಳು ಟ್ರಿಯೋ ಜೋರ್ ಎಲೆಕ್ಟ್ರಿಕ್ ವಾಹನಗಳ ಮೂಲಕ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೇ ತಲುಪಿಸುತ್ತವೆ. ಮಹೀಂದ್ರಾ ಟ್ರಿಯೊ ಜೋರ್ ವಾಹನದ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.73 ಲಕ್ಷಗಳಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಈ ಟ್ರಿಯೊ ಜೋರ್ ವಾಹನವನ್ನು ಪಿಕಪ್, ಡೆಲಿವರಿ ಹಾಗೂ ಫ್ಲಾಟ್ ಬೆಡ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ವಾಹನದಲ್ಲಿ ಅಳವಡಿಸಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಮಹೀಂದ್ರಾ ಟ್ರಿಯೊ 125 ಕಿ.ಮೀಗಳವರೆಗೆ ಚಲಿಸುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಟ್ರಿಯೊ ಜೋರ್'ನಲ್ಲಿರುವ ಎಲೆಕ್ಟ್ರಿಕ್ ಮೋಟರ್ 42 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಿಯೋ ಜೋರ್ 550 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಟ್ರಿಯೊ ಜೋರ್ ವಿಭಿನ್ನ ಡ್ರೈವಿಂಗ್ ಮೋಡ್ ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಟ್ರಿಯೊ ಜೋರ್'ನಲ್ಲಿ ಅಡ್ವಾನ್ಶ್ದ್ ಟೆಕ್ನಾಲಜಿಯ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಈ ಬ್ಯಾಟರಿಯು 1.50 ಲಕ್ಷ ಕಿ.ಮೀಗಳವರೆಗೆ ಬಾಳಿಕೆ ಬರುತ್ತದೆ ಎಂದು ಹೇಳಿಕೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಈ ಬ್ಯಾಟರಿ ಮೆಂಟೆನೆನ್ಸ್ ಫ್ರೀ ಸವಾರಿಯನ್ನು ನೀಡುತ್ತದೆ. ಮಹೀಂದ್ರಾ ಟ್ರಿಯೊ ಜೋರ್ ವಾಹನವನ್ನು 15 ಆಂಪಿಯರ್ ಸಾಕೆಟ್‌ನೊಂದಿಗೆ ಚಾರ್ಜ್ ಮಾಡಬಹುದು. ಮಹೀಂದ್ರಾ ಟ್ರಿಯೋ ಜೋರ್ ಬಳಕೆಯಿಂದ ಪ್ರತಿ ವರ್ಷ ಡೀಸೆಲ್ ಬೆಲೆ ಮಾಡುವ ರೂ.60,000 ಹಣವನ್ನು ಉಳಿಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಟ್ರಿಯೋ ಜೋರ್ ಎಲೆಕ್ಟ್ರಿಕ್

ಮಹೀಂದ್ರಾ ಟ್ರಿಯೊ ಜೋರ್ ನಿರ್ವಹಣಾ ವೆಚ್ಚವೂ ಸಹ ತುಂಬಾ ಕಡಿಮೆಯಾಗಿದೆ. ಡೀಸೆಲ್ ಸರಕು ಸಾಗಣೆ ವಾಹನಕ್ಕೆ ಹೋಲಿಸಿದರೆ ಟ್ರಿಯೋ ಜೋರ್ ನಿರ್ವಹಣೆಗೆ ಪ್ರತಿ ಕಿ.ಮೀಗೆ ಕೇವಲ 40 ಪೈಸೆ ವೆಚ್ಚವಾಗುತ್ತದೆ.

Most Read Articles

Kannada
English summary
Mahindra Treo Zor electric cargo creates new milestone in sales. Read in Kannada.
Story first published: Monday, April 19, 2021, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X