ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಸ್ಕಾರ್ಪಿಯೋ, ಮಹೀಂದ್ರಾ ಕಂಪನಿಯ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ಭಾರತದಲ್ಲಿ ಸುಮಾರು 20 ವರ್ಷಗಳಿಂದ ಮಾರಾಟವಾಗುತ್ತಿದೆ. ಈಗಲೂ ಸಹ ಈ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿದೆ.

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಕಾಲಕಾಲಕ್ಕೆ ಹಲವಾರು ಬದಲಾವಣೆಗಳನ್ನು ಮಾಡಿದೆ. ಈಗ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋದ ಹೊಸ ಎಸ್ 3 ಪ್ಲಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಇತ್ತೀಚೆಗೆ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾದರಿಯ ಬಗೆಗಿನ ಮಾಹಿತಿಯನ್ನು ಅಪ್ ಡೇಟ್ ಮಾಡಿದೆ.

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಸದ್ಯಕ್ಕೆ ಸ್ಕಾರ್ಪಿಯೋ ಎಸ್‌ಯುವಿಯನ್ನು ಎಸ್ 5, ಎಸ್ 7, ಎಸ್ 9 ಹಾಗೂ ಎಸ್ 11 ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಎಸ್ 3 ಪ್ಲಸ್ ಮಾದರಿಯು ಎಸ್ 5 ಮಾದರಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಬೇಸ್ ಮಾದರಿಯಾಗಿರುವ ಕಾರಣಕ್ಕೆ ಈ ಮಾದರಿಯು ಕಡಿಮೆ ಫೀಚರ್'ಗಳನ್ನು ಹೊಂದುವ ಸಾಧ್ಯತೆಗಳಿವೆ. ಈ ಮಾದರಿಯು ಸೆಂಟ್ರಲ್ ಲಾಕಿಂಗ್, ಔಟ್ ಡೋರ್ ಲಾಕ್, ಸೈಡ್ ಹಾಗೂ ರೇರ್ ಫುಟ್ ಸ್ಟೆಪ್, ಬಾಟಲ್ ಅಂಡ್ ಕಪ್ ಹೋಲ್ಡರ್, ಸೆಂಟ್ರಲ್ ಲ್ಯಾಂಪ್, ರೇರ್ ಡಿಮಿಸ್ಟರ್, ಒನ್ ಟಚ್ ಲೇನ್ ಇಂಡಿಕೇಟರ್ ಮುಂತಾದ ಫೀಚರ್'ಗಳನ್ನು ಹೊಂದಿರುವುದಿಲ್ಲ.

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಆದರೆ ಈ ಮಾದರಿಯು ಎಬಿಎಸ್-ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್, ಮೈಕ್ರೋ-ಹೈಬ್ರಿಡ್ ಟೆಕ್ನಾಲಜಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ಫೀಚರ್'ಗಳನ್ನು ಹೊಂದಿರಲಿದೆ. ಇದರ ಜೊತೆಗೆ ಸ್ಕಾರ್ಪಿಯೋ ಎಸ್ 3 ಪ್ಲಸ್‌ ಮಾದರಿಯಲ್ಲಿ ಟಿಲ್ಟ್ ಸ್ಟೀಯರಿಂಗ್, ಮ್ಯಾನುಯಲ್ ಒಆರ್‌ವಿಎಂ, ಫ್ರಂಟ್ ಚಾರ್ಜಿಂಗ್ ಪೋರ್ಟ್, ಪವರ್ ಸ್ಟೀಯರಿಂಗ್, ಪವರ್ ವಿಂಡೋಸ್, ಸಿಲ್ವರ್ ಸ್ಟೀಲ್ ರಿಮ್, ಎಲ್ಇಡಿ ಟೇಲ್ ಲ್ಯಾಂಪ್‌ಗಳಂತಹ ಫೀಚರ್'ಗಳನ್ನು ನೀಡಲಾಗುವುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಎಸ್ 3 ಪ್ಲಸ್ ಮಾದರಿಯು 7, 8 ಹಾಗೂ 9 ಸೀಟುಗಳ ಆಯ್ಕೆಯನ್ನು ಪಡೆಯಬಹುದು. ವಿನ್ಯಾಸದ ಬಗ್ಗೆ ಹೇಳುವುದಾದರೆ ಎಸ್ 3 ಪ್ಲಸ್‌ ಮಾದರಿಯ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಮಾದರಿಯ ವಿನ್ಯಾಸವನ್ನು ಹೋಲುತ್ತದೆ. ಈ ಮಾದರಿಯು 2.2 ಲೀಟರ್ ಎಮ್‌ಹಾಕ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 280 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಈ ಬೇಸ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ. ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.68 ಲಕ್ಷಗಳಿಂದ ರೂ.16.53 ಲಕ್ಷಗಳಾಗಿದೆ. ಎಸ್ 3 ಪ್ಲಸ್ ಮಾದರಿಯ ಬೆಲೆ ಈಗಿರುವ ಎಲ್ಲಾ ಮಾದರಿಗಳಿಗಿಂತ ಕಡಿಮೆ ಇರಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಎಕ್ಸ್‌ಯುವಿ 500, ಎಕ್ಸ್‌ಯುವಿ 300 ಹಾಗೂ ಕೆಯುವಿ 100 ಎಲೆಕ್ಟ್ರಿಕ್ ಮಾದರಿಗಳನ್ನು ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಹೊಸ ವರ್ಷದಲ್ಲಿ ಕಾರು ಬೆಲೆಗಳ ಹೆಚ್ಚಿಸಿದ ನಂತರ ಕಂಪನಿಯು ಮುಂದಿನ ಹಣಕಾಸು ವರ್ಷದಲ್ಲಿ (2021-22) ಮತ್ತೊಮ್ಮೆ ಬೆಲೆಗಳನ್ನು ಹೆಚ್ಚಿಸಲಿದೆ.

ಸ್ಕಾರ್ಪಿಯೋ ಎಸ್‌ಯುವಿಯ ಎಸ್ 3 ಪ್ಲಸ್ ಮಾದರಿ ಬಿಡುಗಡೆಗೆ ಸಜ್ಜಾದ ಮಹೀಂದ್ರಾ

ಬೆಲೆ ಹೆಚ್ಚಿಸುವ ಮೊದಲು ಕಂಪನಿಯು ತನ್ನ ಕಾರುಗಳ ಮೇಲೆ ರೂ.24,050ಗಳಿಂದ ರೂ.3.06 ಲಕ್ಷಗಳವರೆಗೆ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿಯನ್ನು ನಗದು ಕೊಡುಗೆ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಹಾಗೂ ಇತರ ಕೊಡುಗೆಗಳ ರೂಪದಲ್ಲಿ ನೀಡಲಾಗುವುದು. ಈ ಕೊಡುಗೆಗಳು ಫೆಬ್ರವರಿ 28ರವರೆಗೆ ಮಾತ್ರ ಲಭ್ಯವಿರಲಿವೆ. ಈ ಕೊಡುಗೆಗಳು ಡೀಲರ್'ಗಳ ಅನ್ವಯ ಬದಲಾಗಬಹುದು.

Most Read Articles

Kannada
English summary
Mahindra updates Scorpio S3 plus variant details on website. Read in Kannada.
Story first published: Thursday, February 11, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X