ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು (Mahindra and Mahindra) ನವೆಂಬರ್ ತಿಂಗಳ ಉತ್ಪಾದನಾ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು 18,261 ಯುನಿಟ್ ವಾಹನಗಳನ್ನು ಉತ್ಪಾದಿಸಿದೆ. ಈ ಪ್ರಮಾಣವು ಈ ವರ್ಷದ ಅಕ್ಟೋಬರ್ ತಿಂಗಳಿಗಿಂತ 19,286 ಯುನಿಟ್‌ಗಳಷ್ಟು ಅಂದರೆ 5.3% ನಷ್ಟು ಕಡಿಮೆಯಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಕಂಪನಿಯ ಎಸ್‌ಯು‌ವಿ ಉತ್ಪಾದನೆ ಹೆಚ್ಚಿದ್ದರೂ, ಚಿಪ್ ಕೊರತೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಮಹೀಂದ್ರಾ ಕಂಪನಿಯು 32,000 ಯುನಿಟ್‌ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ. ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಚಿಪ್‌ಗಳಿಗೆ ಕೊರತೆ ಎದುರಾಗಿದೆ. ಇದು ಮಹೀಂದ್ರಾ ಕಂಪನಿಯ ಮೇಲೂ ಪರಿಣಾಮ ಬೀರಿದೆ. ಇದರಿಂದ ಕಂಪನಿಯ ಉತ್ಪಾದನೆಯು ನಿರಂತರವಾಗಿ ಕಡಿಮೆಯಾಗುತ್ತಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಕಂಪನಿಯ ತ್ರೈಮಾಸಿಕ ಹಾಗೂ ಎಲ್‌ಸಿವಿ ವಿಭಾಗದ ಉತ್ಪಾದನೆಯ ಬಗ್ಗೆ ಹೇಳುವುದಾದರೆ, ನವೆಂಬರ್‌ನಲ್ಲಿ ಕಂಪನಿಯ ಉತ್ಪಾದನೆಯಲ್ಲಿ 89.6% ನಷ್ಟು ಇಳಿಕೆಯಾಗಿದೆ. ಉತ್ಪಾದನೆ ಪ್ರಮಾಣವು ಕಳೆದ ವರ್ಷ ನವೆಂಬರ್‌ನಲ್ಲಿ 4,046 ಯುನಿಟ್‌ಗಳಿದ್ದರೆ ಕಳೆದ ತಿಂಗಳು ಕೇವಲ 420 ಯುನಿಟ್‌ಗಳಾಗಿತ್ತು. ಕಂಪನಿಯ ಸಿವಿ ವಿಭಾಗದ ಉತ್ಪಾದನೆ 21.4% ನಷ್ಟು ಕಡಿಮೆಯಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಕಳೆದ ತಿಂಗಳು ಮಹೀಂದ್ರಾ ಕಂಪನಿಯು 15,742 ಯೂನಿಟ್ ವಾಹನಗಳನ್ನು ಉತ್ಪಾದಿಸಿದೆ. ಇದರಲ್ಲಿ ಟ್ರಿಯೊ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಉತ್ಪಾದನೆ ಪ್ರಮಾಣ 1,317 ಯುನಿಟ್‌ಗಳಾಗಿದೆ. ಈ ವಾಹನಗಳ ಉತ್ಪಾದನಾ ಪ್ರಮಾಣವು 62.7% ನಷ್ಟು ಹೆಚ್ಚಾಗಿದೆ. ಕಂಪನಿಯು ಅನೇಕ ರಾಜ್ಯಗಳಲ್ಲಿ ತನ್ನ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದೆ. ಈ ವಾಹನಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಈ ಹಿನ್ನೆಲೆಯಲ್ಲಿ ಈ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಚಿಪ್ ಕೊರತೆಯು ಈ ವಾಹನಗಳ ಉತ್ಪಾದನೆ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಮಹೀಂದ್ರಾ ಕಂಪನಿಯು ಕಳೆದ ತಿಂಗಳು 19,458 ಯುನಿಟ್‌ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ನವೆಂಬರ್‌ನಲ್ಲಿ ಈ ವಾಹನಗಳ ಮಾರಾಟದಲ್ಲಿ 7% ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು ಒಟ್ಟು 18,212 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿತ್ತು. ಇದೇ ವೇಳೆ ಕಂಪನಿಯ ಪ್ರಯಾಣಿಕ ವಾಹನ ಹಾಗೂ ವಾಣಿಜ್ಯ ವಾಹನಗಳ ಮಾರಾಟವನ್ನು ಗಮನಿಸಿದರೆ, ಕಂಪನಿಯು ನವೆಂಬರ್ ತಿಂಗಳಿನಲ್ಲಿ ಒಟ್ಟು 40,102 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಪ್ರಯಾಣಿಕ ವಾಹನ ವಿಭಾಗದಲ್ಲಿ, ಕಾರು ಹಾಗೂ ವ್ಯಾನ್ ವಿಭಾಗವು ವರ್ಷದ ಮಾರಾಟದಲ್ಲಿ 69% ನಷ್ಟು ಕುಸಿತವನ್ನು ದಾಖಲಿಸಿದೆ. ಕಂಪನಿಗೆ ಬಂದಿರುವ ಮಾಹಿತಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಕಳೆದ ತಿಂಗಳು 19,384 ಯುನಿಟ್ ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಕಂಪನಿಯು ಒಟ್ಟು 17,971 ಯುನಿಟ್ ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಈ ವಿಭಾಗದ ಮಾರಾಟದಲ್ಲಿ 8% ನಷ್ಟು ಬೆಳವಣಿಗೆ ಕಂಡು ಬಂದಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಕಂಪನಿಯು ಮಾತ್ರವಲ್ಲದೇ ಪ್ರಪಂಚದಾದ್ಯಂತದ ಹಲವು ಕಂಪನಿಗಳು ಚಿಪ್ ಕೊರತೆಯಿಂದ ಹೆಣಗಾಡುತ್ತಿವೆ, ಡಿಸೆಂಬರ್ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಲಾಗಿತ್ತು. ಆದರೆ ಈಗ ಕರೋನಾ ಹೊಸ ರೂಪಾಂತರಿ ಮತ್ತೆ ವಿಳಂಬಗೊಳಿಸಿದೆ. ಇದನ್ನು ತಪ್ಪಿಸಲು ಹಲವು ವಾಹನ ತಯಾರಕ ಕಂಪನಿಗಳು ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ತೆರೆಯಲು ಮುಂದಾಗುತ್ತಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಅಂಡ್ ಮಹೀಂದ್ರಾ ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಹಲವಾರು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದೆ. ಕಂಪನಿಯು ದೇಶದಲ್ಲಿ, ವಾಹನ ಉದ್ಯಮದಲ್ಲಿ ಮಾತ್ರವಲ್ಲದೇ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಭಾರತದಲ್ಲಿ ವಾಹನ ಉದ್ಯಮದಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಕಂಪನಿಯ XUV 300, XUV 500, Thar ಹಾಗೂ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಯಾದ XUV 700 ಸೇರಿದಂತೆ ಹಲವು ಕಾರುಗಳು ಭಾರತದಲ್ಲಿಜನಪ್ರಿಯತೆಯನ್ನು ಪಡೆದಿವೆ. ಮಹೀಂದ್ರಾ ಎಂದಾಕ್ಷಣ ಜನರಿಗೆ ಕಾರುಗಳ ಬಗ್ಗೆ ನೆನಪಾಗುತ್ತಾದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದ ಕೆಲವು ಪ್ರಮುಖ ಸಂಗತಿಗಳನ್ನು ನೋಡುವುದಾದರೆ...

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಕಂಪನಿಯನ್ನು ಮೊದಲು ಲೋಹದ ವ್ಯಾಪಾರ ಕಂಪನಿಯಾಗಿ ಆರಂಭಿಸಲಾಯಿತು. ಮಹೀಂದ್ರಾ ಗ್ರೂಪ್ ಈ ಉದ್ಯಮವನ್ನು 1945 ರಲ್ಲಿ ಆರಂಭಿಸಿತು. ಮಹೀಂದ್ರಾ ಸಹೋದರರು ಹಾಗೂ ಗುಲಾಮ್ ಮೊಹಮ್ಮದ್ ಅವರ ಸಹಯೋಗದಲ್ಲಿ ಕಂಪನಿಯನ್ನು ಆರಂಭಿಸಲಾಯಿತು. ಕಂಪನಿಯ ಮೂಲ ಹೆಸರು ಮಹೀಂದ್ರಾ ಅಂಡ್ ಮೊಹಮ್ಮದ್ ಎಂದಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

1948 ರಲ್ಲಿ ಮೊಹಮ್ಮದ್ ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿಯಾದರು. ಇದರಿಂದ ಮಹೀಂದ್ರಾ ಸಹೋದರರು ಮಾತ್ರ ಈ ಕಂಪನಿಯನ್ನು ಮುನ್ನೆಡುಸುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಕಂಪನಿಯನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಈ ಬದಲಾವಣೆಗಳ ನಂತರ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಅತಿ ದೊಡ್ಡ ಐತಿಹಾಸಿಕ ದಾಖಲೆಯನ್ನು ಮಾಡಿತು. ಕಂಪನಿಯು ವಾಹನ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಂಪನಿಯು 1954 ರಲ್ಲಿ ತನ್ನ ವಾಹನ ಉದ್ಯಮವನ್ನು ಆರಂಭಿಸಿತು. ಕಂಪನಿಯು ವಿಲ್ಲಿಸ್ ಓವರ್‌ಲ್ಯಾಂಡ್ ಕಾರ್ಪೊರೇಶನ್ ನೊಂದಿಗೆ ವಿಲೀನವಾಗುವ ಮೂಲಕ ಜೀಪ್ ಮಾದರಿಯ ವಾಹನವನ್ನು ಅಭಿವೃದ್ಧಿಪಡಿಸಿತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಮಹೀಂದ್ರಾ ಕಾಮನ್ ರೈಲ್ ಡೀಸೆಲ್ ಎಂಜಿನ್ ಅಥವಾ CRDe ಎಂದು ಕರೆಯಲ್ಪಡುವ ಮೋಟಾರ್ ಅನ್ನು ಭಾರತದಲ್ಲಿ ಮೊದಲು ಪರಿಚಯಿಸಿದ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಎಂಜಿನ್ ಅನ್ನು ದೇಶದಲ್ಲಿ ಮೊದಲ ಬಾರಿಗೆ 2005 ರಲ್ಲಿ ಪರಿಚಯಿಸಲಾಯಿತು. ಈ ಎಂಜಿನ್ ಅನ್ನು ಸ್ಕಾರ್ಪಿಯೋ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಸ್ಕಾರ್ಪಿಯೊ ಕಾರ್ ಅನ್ನು ಭಾರತದಲ್ಲಿ ಜನಪ್ರಿಯ ವಾಹನವನ್ನಾಗಿ ಮಾಡಲು ಈ ಎಂಜಿನ್ ನೆರವಾಗಿದೆ. ಮಹೀಂದ್ರಾ ಕಂಪನಿಯು ತನ್ನ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಹೊಸತನವನ್ನು ನೀಡಲು ಹಿಂಜರಿಯುವುದಿಲ್ಲ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Mahindra ವಾಹನ ಉತ್ಪಾದನೆ

ಕಂಪನಿಯು 2010 ರಲ್ಲಿ ರೇವಾ ಎಲೆಕ್ಟ್ರಿಕ್‌ನಲ್ಲಿ 55% ನಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಇದರ ನಂತರ ಕಂಪನಿಯು ಭಾರತದಲ್ಲಿ ಅತಿ ಚಿಕ್ಕ ರೇವಾ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. ನಂತರದ ದಿನಗಳಲ್ಲಿ ಕಂಪನಿಯು ರೇವಾ ಎಲೆಕ್ಟ್ರಿಕ್‌ನಲ್ಲಿ ಸಂಪೂರ್ಣ ಅಂದರೆ 100% ನಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಮಹೀಂದ್ರಾ ಎಲೆಕ್ಟ್ರಿಕ್ ಎಂದು ಬದಲಾಯಿಸಲಾಯಿತು.

Most Read Articles

Kannada
English summary
Mahindra vehicle production declines in november 2021 details
Story first published: Tuesday, December 14, 2021, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X