ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

2019ರಲ್ಲಿ ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸುರಕ್ಷತೆಗಾಗಿ 5-ಸ್ಟಾರ್ ರೇಟಿಂಗ್ ಪಡೆದಿತ್ತು. ಈಗ ಎಕ್ಸ್‌ಯುವಿ 300 ಮತ್ತೊಮ್ಮೆ ಕ್ರ್ಯಾಶ್ ಟೆಸ್ಟ್‌ನಲ್ಲಿ ಇದೇ ರೀತಿಯ ಸಾಧನೆ ಮಾಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಆದರೆ ಈ ಬಾರಿ ಈ ಎಸ್‌ಯುವಿಯು ಆಫ್ರಿಕಾದಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿರುವುದು ವಿಶೇಷ. ಗ್ಲೋಬಲ್ ಎನ್‌ಸಿಎಪಿ ಪ್ರಕಾರ ಮಹೀಂದ್ರಾ ಎಕ್ಸ್‌ಯುವಿ 300 ಆಫ್ರಿಕಾದ ನಾನ್ ಪ್ರಾಫಿಟ್ ಆರ್ಗನೈಜೇಷನ್'ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮೊದಲ ಕಾರು. ಈ ಎಸ್‌ಯುವಿಯನ್ನು ಗ್ಲೋಬಲ್ ಎನ್‌ಸಿಎಪಿ ಆಫ್ರಿಕಾದಲ್ಲಿನ ತನ್ನ ಸುರಕ್ಷಿತ ಕಾರುಗಳ ಅಭಿಯಾನದ ಅಂಗವಾಗಿ ಪರೀಕ್ಷಿಸಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಗ್ಲೋಬಲ್ ಎನ್‌ಸಿಎಪಿ ಭಾರತ ಹಾಗೂ ಆಫ್ರಿಕಾ ಮಾರುಕಟ್ಟೆಗಳಿಗೆ ಒಂದೇ ರೀತಿಯ ಮೌಲ್ಯಮಾಪನದ ನಿಯಮಗಳನ್ನು ಹೊಂದಿದೆ. ಆಫ್ರಿಕಾದಲ್ಲಿರುವ ಎಕ್ಸ್‌ಯುವಿ 300 ಭಾರತದಲ್ಲಿ ಮಾರಾಟವಾದ ಮಾದರಿಗಿಂತ ಭಿನ್ನವಾಗಿಲ್ಲ. ಈ ಕಾರನ್ನು ಭಾರತದಿಂದಲೇ ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಬಗ್ಗೆ ಹೇಳುವುದಾದರೆ, ಎಕ್ಸ್‌ಯುವಿ 300 ಕ್ರಾಶ್ ಟೆಸ್ಟ್‌ನಲ್ಲಿ ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರ ಕುತ್ತಿಗೆಗೆ ಹೆಚ್ಚಿನ ರಕ್ಷಣೆ ನೀಡಿದೆ. ಚಾಲಕನ ಎದೆಯ ಜೊತೆಗೆ ಪ್ರಯಾಣಿಕರ ಎದೆಗೂ ಹೆಚ್ಚಿನ ರಕ್ಷಣೆ ಸಿಗುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಈ ಎಸ್‌ಯುವಿಯು ಮಕ್ಕಳ ಸುರಕ್ಷತೆಗಾಗಿ ನಾಲ್ಕು-ಸ್ಟಾರ್ ರೇಟಿಂಗ್ ಪಡೆದಿದೆ. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಬಳಸಿದ ಮಾದರಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಹಾಗೂ ಫ್ರಂಟ್ ಸೀಟ್‌ಬೆಲ್ಟ್ ರಿಮ್ಯಾಂಡರ್'ನಂತಹ ಫೀಚರ್'ಗಳನ್ನು ಹೊಂದಿತ್ತು ಎಂಬುದು ಗಮನಾರ್ಹ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಮಹೀಂದ್ರಾ ಎಕ್ಸ್‌ಯುವಿ 300 ಎಸ್‌ಯುವಿಯು ಮೊಣಕಾಲು ಏರ್‌ಬ್ಯಾಗ್, ಡ್ಯುಯಲ್ ಫ್ರಂಟ್, ಸೈಡ್ ಹಾಗೂ ಕರ್ಟನ್ ಏರ್‌ಬ್ಯಾಗ್, ಎಲ್ಲಾ ವ್ಹೀಲ್'ಗಳಲ್ಲಿ ಡಿಸ್ಕ್ ಬ್ರೇಕ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌, ಹೀಟೆಡ್ ಒಆರ್‌ವಿಎಂಗಳನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಆಟೋ ಡಿಮ್ ಐಆರ್‌ವಿಎಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಇಬಿಡಿ ಹೊಂದಿರುವ ಎಬಿಎಸ್‌, ಫ್ರಂಟ್ ಹಾಗೂ ರೇರ್ ಫಾಗ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಮಹೀಂದ್ರಾ ಎಕ್ಸ್‌ಯುವಿ 300 ಹೊರತುಪಡಿಸಿ, ಟಾಟಾ ಮೋಟಾರ್ಸ್ ಕಂಪನಿಯ ಎರಡು ಕಾರುಗಳು 5 ಸ್ಟಾರ್ ರೇಟಿಂಗ್ ಹಾಗೂ ಎರಡು ಕಾರುಗಳು 4 ಸ್ಟಾರ್ ರೇಟಿಂಗ್ ಪಡೆದಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಹೀಂದ್ರಾ ಎಕ್ಸ್‌ಯುವಿ 300 ಎಸ್‌ಯುವಿಯನ್ನು 1.5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಹಾಗೂ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ. ಡೀಸೆಲ್ ಎಂಜಿನ್ 121 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಮತ್ತೊಮ್ಮೆ 5 ಸ್ಟಾರ್ ರೇಟಿಂಗ್ ಪಡೆದ ಎಕ್ಸ್‌ಯುವಿ 300

ಇನ್ನು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 110 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಕಂಪನಿಯು ತನ್ನ 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ರಿಟ್ಯೂನ್ ಮಾಡಿ ತನ್ನ ಹೊಸ ಸ್ಪೋರ್ಟ್ಸ್ ಮಾದರಿಯಲ್ಲಿ ಬಳಸಲಿದೆ ಎಂದು ತಿಳಿದು ಬಂದಿದೆ.

Most Read Articles

Kannada
English summary
Mahindra XUV 300 gets 5 star rating for safety again. Read in Kannada.
Story first published: Thursday, January 28, 2021, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X