ಮಾರ್ಚ್ ತಿಂಗಳಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿ ಮಾರಾಟದಲ್ಲಿ ಶೇ.6600ರಷ್ಟು ಹೆಚ್ಚಳ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಜನಪ್ರಿಯ ಎಕ್ಸ್‌ಯುವಿ500 ಎಸ್‍ಯುವಿಯನ್ನು 2011ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಈ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯು ಬಿಡುಗಡೆಯಾದಗಿನಿಂದ ಇಲ್ಲಿಯವರೆಗೆ ಯಾವುದೇ ಪ್ರಮುಖ ನವೀಕರಣಗಳನ್ನು ಪಡೆದುಕೊಂಡಿಲ್ಲ.

ಇದೀಗ ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಕಂಪನಿಯು ತನ್ನ ಹೊಚ್ಚ ಹೊಸ ಮಧ್ಯಮ ಗಾತ್ರದ ಎಕ್ಸ್‌ಯುವಿ700 ಎಂಬ ಹೊಸ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಆದರೆ ಎಕ್ಸ್‌ಯುವಿ700 ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ ಬಳಿಕ ಎಕ್ಸ್‌ಯುವಿ500 ಮಾದರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಅದೇನೇ ಇದ್ದರೂ, ಮಹೀಂದ್ರಾ ಎಕ್ಸ್‌ಯುವಿ500 ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

2021ರ ಮಾರ್ಚ್ ತಿಂಗಳಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯು 603 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷ ಇದೇ ತಿಂಗಳಲ್ಲಿ ಕೇವಲ 9 ಯುನಿಟ್‌ಗಳು ಮಾತ್ರ ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6600ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆದರೆ 2021ರ ಫೆಬ್ರವರಿ ತಿಂಗಳಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯು 829 ಯುನಿಟ್‌ಗಳನ್ನು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.27 ರಷ್ಟು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತಿರುವ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯ ಕಾರಿನ ಆರಂಭಿಕ ಬೆಲೆ ರೂ.15.13 ಲಕ್ಷಗಳದರೆ, ಟಾಪ್-ವೆರಿಯೆಂಟ್ ಮಾದರಿಯ ಬೆಲೆಯು ರೂ.19.56 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೊರೂಂ ಪ್ರಕಾರವಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 158 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ. ಇನ್ನು ಇದರೊಂದಿಗೆ ಫ್ರಂಟ್-ವೀಲ್-ಡ್ರೈವ್ ಕಾನ್ಫಿಗರೇಶನ್ ಅನ್ನು ಈ ಎಸ್‍ಯುವಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಈ ಮಹೀಂದ್ರಾ ಎಕ್ಸ್‌ಯುವಿ500 ಎಸ್‍ಯುವಿಯಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಕ್ವಿಲ್ಟೆಡ್ ಟ್ಯಾನ್ ಲೆದರ್ ಸೀಟುಗಳು, 6-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಲೆದರ್ ಡ್ಯಾಶ್‌ಬೋರ್ಡ್, ಲೌಂಜ್ ಲೈಟಿಂಗ್ ಮತ್ತು ಕೂಲ್ಡ್ ಸೆಂಟರ್ ಗ್ಲೋವ್ ಬಾಕ್ಸ್ ಅನ್ನು ಹೊಂದಿದೆ.

ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟ್ ಮಾಡಬಹುದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯು ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಫೀಚರ್ ಗಳನ್ನು ನೀಡಿದ್ದಾರೆ.

ಈ ಎಸ್‍ಯುವಿಯಲ್ಲಿರುವ ಸುರಕ್ಷತಾ ಫೀಚರ್ಸ್'ಗಳು ಆರು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಡಿಸೆಂಟ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್, ರೋಲ್‌ಓವರ್ ಸಿಸ್ಟಂನೊಂದಿಗೆ ಸ್ಟೆಬಿಲಿಟಿ ಪ್ರೋಗ್ರಾಂ, ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿವೆ


Click it and Unblock the Notifications