ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕೆಲವು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಥಾರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಭಾರತದ ಕಾರು ಪ್ರಿಯರು ಈ ಎಸ್‌ಯುವಿಯ ಬಿಡುಗಡೆಯನ್ನು ಹಲವು ದಿನಗಳಿಂದ ಎದುರು ನೋಡುತ್ತಿದ್ದರು.

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಹೊಸ ಥಾರ್ ಎಸ್‌ಯುವಿಯು ನಿರೀಕ್ಷೆಯನ್ನು ಮೀರಿ ಜನಪ್ರಿಯತೆಯನ್ನು ಪಡೆದಿರುವ ಕಾರಣಕ್ಕೆ ಈ ಎಸ್‌ಯುವಿಯ ವಿತರಣೆಯನ್ನು ಪಡೆಯಲು ಹಲವಾರು ತಿಂಗಳು ಕಾಯಬೇಕಾಗಿದೆ. ಕೆಲವೊಮ್ಮೆ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ 6 ತಿಂಗಳು ಕಾಯಬೇಕಾಗಿದೆ ಎಂದು ವರದಿಗಳು ತಿಳಿಸಿವೆ.

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಕಾಯುವ ಅವಧಿಯು ಸ್ಥಳ ಹಾಗೂ ಮಾದರಿಗಳನ್ನು ಅವಲಂಬಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೊಬ್ಬರು ಥಾರ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ ಹಲವು ದಿನಗಳ ನಂತರ ಈ ಎಸ್‌ಯುವಿಯ ವಿತರಣೆಯನ್ನು ಪಡೆದಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಮಲಯಾಳಂ ನಟಿ ಅನು ಸಿತಾರಾರವರೇ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯ ವಿತರಣೆಯನ್ನು ಪಡೆದವರು. ಅನು ಸಿತಾರಾ ಹಲವಾರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ನಟಿ ಅನು ಸಿತಾರಾ ಹೊಸ ಥಾರ್ ಎಸ್‌ಯುವಿಯ ವಿತರಣೆಯನ್ನು ಪಡೆದಿರುವ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ಎನ್‌ಬಿಟಿವಿ ಲೈವ್ ಬಿಡುಗಡೆಗೊಳಿಸಿದೆ. ಈ ಸುದ್ದಿಯಿಂದಾಗಿ ಅನು ಸಿತಾರಾರವರ ಅಭಿಮಾನಿಗಳು ಖುಷಿಯಾಗಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ತಿರುವನಂತಪುರಂನಲ್ಲಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಾರು ಡೀಲರ್ ಬಳಿ ನಟಿ ಅನು ಸಿತಾರಾ ಥಾರ್ ಎಸ್‌ಯುವಿಯ ವಿತರಣೆಯನ್ನು ಪಡೆದಿದ್ದಾರೆ. ಈ ಎಸ್‌ಯುವಿಯ ವಿತರಣೆಯನ್ನು ಪಡೆಯಲು ಅವರು ತಮ್ಮ ಪತಿಯೊಂದಿಗೆ ತೆರಳಿದ್ದರು.

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಈ ವೇಳೆ ಅವರಿಬ್ಬರು ಕೇಕ್ ಕತ್ತರಿಸಿದ್ದಾರೆ. ನಟಿ ಅನು ಸಿತಾರಾ ಕೇರಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ವಯನಾಡಿನಲ್ಲಿ ವಾಸಿಸುತ್ತಿದ್ದಾರೆ. ಮಹೀಂದ್ರಾ ಥಾರ್ ಈ ಸ್ಥಳಕ್ಕೆ ಸೂಕ್ತವಾದ ವಾಹನವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಮಹೀಂದ್ರಾ ಥಾರ್ ಎಸ್‌ಯುವಿಯು ಆಫ್-ರೋಡ್ ಪ್ರಯಾಣಕ್ಕೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಅನು ಸಿತಾರಾರವರು ಈ ಎಸ್‌ಯುವಿಯನ್ನು ಖರೀದಿಸಲು ಇದು ಸಹ ಕಾರಣವಾಗಿರಬಹುದು.

ನಟಿ ಅನು ಸಿತಾರಾ ಈಗಾಗಲೇ ಮರ್ಸಿಡಿಸ್ ಬೆಂಝ್ ಜಿಎಲ್‌ಎಯಂತಹ ಹಲವು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಈಗ ಅವರು ಖರೀದಿಸಿರುವ ಥಾರ್ ಎಸ್‌ಯುವಿಯು ಸಾಫ್ಟ್ ಟಾಪ್ ಕನ್ವರ್ಟಿಬಲ್ ರೂಫ್ ಫೀಚರ್ ಅನ್ನು ಹೊಂದಿದೆ. ಈ ಫೀಚರ್ ಹೊಂದಿರುವ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.49 ಲಕ್ಷಗಳಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಲವು ದಿನಗಳ ಕಾಯುವಿಕೆಯ ನಂತರ ಹೊಸ ಥಾರ್ ಎಸ್‌ಯುವಿಯ ವಿತರಣೆ ಪಡೆದ ನಟಿ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಡಿಆರ್‌ಎಲ್, ಅಲಾಯ್ ವ್ಹೀಲ್, ಇಎಸ್‌ಪಿ, ಎರಡು ಏರ್‌ಬ್ಯಾಗ್ ಹಾಗೂ ಎಬಿಎಸ್ ಬ್ರೇಕಿಂಗ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್'ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಚಿತ್ರಗಳನ್ನು ಎನ್‌ಬಿಟಿವಿ ಲೈವ್'ನಿಂದ ಪಡೆಯಲಾಗಿದೆ.

Most Read Articles

Kannada
English summary
Malayalam actress Anu Sithara gets delivery of new Mahindra Thar SUV. Read in Kannada.
Story first published: Saturday, January 2, 2021, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X