ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಮೆರಿಕಾದ ಟೆಕ್ಸಾಸ್‌ನಲ್ಲಿ ಲ್ಯಾಂಬೊರ್ಗಿನಿ (Lamborghini) ಕಾರು ಹಾಗೂ ರೋಲೆಕ್ಸ್ ವಾಚ್ ಖರೀದಿಸಲು ಕರೋನಾ ವೈರಸ್ ಪರಿಹಾರ ನಿಧಿಯನ್ನು ಬಳಸಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಪ್ರಕಾರ, ಲೀ ಪ್ರೈಸ್ ಎಂಬಾತ ನಕಲಿ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (PPP) ಅಡಿಯಲ್ಲಿ 1.6 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ. 12 ಕೋಟಿ ಸಾಲವನ್ನು ಪಡೆದು, ಅದರಿಂದ ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ್ದರು.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ತನ್ನ ಅಕ್ರಮ ಚಟುವಟಿಕೆಗಳನ್ನು ಮರೆ ಮಾಡಲು, 30 ವರ್ಷದ ಲೀ ಪ್ರೈಸ್ ಮೋಸದಿಂದ ಮೂರು ಶೆಲ್ ಕಂಪನಿಗಳನ್ನು ತೆರೆದು ಅದರಲ್ಲಿ ಹಣವನ್ನು ಠೇವಣಿ ಮಾಡಿದ್ದ. ಪ್ರೈಸ್ ತನ್ನ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ನಕಲಿ ಚಾಲನಾ ಪರವಾನಗಿ ಹಾಗೂ ತೆರಿಗೆ ದಾಖಲೆಗಳನ್ನು ಸಲ್ಲಿಸಿದ್ದ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಹೇಳಿದೆ. ಆತ ಲ್ಯಾಂಬೊರ್ಗಿನಿ ಕಾರಿನ ಜೊತೆಗೆ ಇನ್ನೂ ಅನೇಕ ವಸ್ತುಗಳನ್ನು ಖರೀದಿಸಿದ್ದ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಟೆಕ್ಸಾಸ್ ನ್ಯಾಯಾಲಯದ ಪ್ರಕಾರ, ಲೀ ಪ್ರೈಸ್ ನೌಕರರ ಅಥವಾ ವೇತನದಾರರ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಸಾಲದ ಹಣದಲ್ಲಿ ಆತ ಲ್ಯಾಂಬೊರ್ಗಿನಿ ಉರುಸ್ (Urus), ಫೋರ್ಡ್ ಎಫ್ 350 ಹಾಗೂ ರೋಲೆಕ್ಸ್ ವಾಚ್ ಖರೀದಿಸಿದ್ದ. ಆತನಿಂದ ಸುಮಾರು 7,00,000 ಡಾಲರ್ ಅಂದರೆ ಸುಮಾರು ರೂ. 56 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬಯಲಾದ ದೊಡ್ಡ ವಂಚನೆ

ಕರೋನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಹಣಕಾಸಿನ ನೆರವು ನೀಡಲು ಟೆಕ್ಸಾಸ್‌ನಲ್ಲಿ ಪರಿಹಾರ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಈ ಕಾರ್ಯಕ್ರಮವು ಇದೇ ವರ್ಷದ ಜೂನ್ 31 ರಂದು ಕೊನೆಗೊಂಡಿತು. ಈ ಕಾರ್ಯಕ್ರಮದಲ್ಲಿ 474 ಮಂದಿ ಹಣಕ್ಕೆ ಸಂಬಂಧಿಸಿದ ವಂಚನೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರಿಂದ ಟೆಕ್ಸಾಸ್ ಸರ್ಕಾರವು ಇದುವರೆಗೂ ಅರ್ಧ ಶತಕೋಟಿ ಡಾಲರ್'ಗಳಿಗಿಂತ ಹೆಚ್ಚು ಹಣ ಕಳೆದುಕೊಂಡಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲ್ಯಾಂಬೊರ್ಗಿನಿ ಉರುಸ್ ವಿಶೇಷತೆ

ಇನ್ನು ಲ್ಯಾಂಬೊರ್ಗಿನಿ ಉರುಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಎಸ್‌ಯುವಿಯಲ್ಲಿ 4.0 ಲೀಟರ್ 8 ಸಿಲಿಂಡರ್ ಟ್ವಿನ್ ಟರ್ಬೊ ವಿ 8 ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 641 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಭಾರತದಲ್ಲಿ ಹಲವು ಚಿತ್ರ ತಾರೆಯರು ಹಾಗೂ ಉದ್ಯಮಿಗಳು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ಆಫ್ ರೋಡಿಂಗ್‌ಗಾಗಿ ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಲ್ಯಾಂಬೊರ್ಗಿನಿ ಉರುಸ್, ಫೋಕ್ಸ್‌ವ್ಯಾಗನ್ ಗ್ರೂಪ್‌ನ MLB ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಆಡಿ ಕ್ಯೂ7 ಹಾಗೂ ಪೋರ್ಷೆ ಕೇನ್ ಕಾರುಗಳು ಸಹ ಈ ಪ್ಲಾಟ್ ಫಾರಂ ಅನ್ನು ಆಧರಿಸಿವೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್‌ಕಾರ್‌ನಿಂದ ಪ್ರೇರಿತವಾಗಿದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಅಳವಡಿಸಲಾಗಿದೆ. 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳು ಒಂದು ಆಯ್ಕೆಯಾಗಿವೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲ್ಯಾಂಬೊರ್ಗಿನಿ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ತನ್ನ ಹೊಸ ಹುರಾಕನ್ ಇವೊ ಸ್ಪೈಡರ್ ಸೂಪರ್‌ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ ಸೂಪರ್‌ಫಾಸ್ಟ್ ಸ್ಪೋರ್ಟ್ಸ್ ಕಾರು ಕೇವಲ 3.5 ಸೆಕೆಂಡ್‌ಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.44 ಕೋಟಿಗಳಾಗಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಇನ್ನು ಲ್ಯಾಂಬೊರ್ಗಿನಿ ಕಂಪನಿಯು ತನ್ನ ಕಾರುಗಳಲ್ಲೇ ಮೊದಲ ಬಾರಿಗೆ ಉರುಸ್ ಕಾರಿನಲ್ಲಿ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದೆ. ಉರುಸ್ ಎಸ್‌ಯುವಿಯು 4.0 ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿದೆ. ಪ್ರತಿ ಗಂಟೆಗೆ 305 ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ಕಾರಿನಲ್ಲಿ ಎಲ್ಲಾ ಪ್ರದೇಶಗಳಲ್ಲೂ ಸರಾಗವಾದ ಚಾಲನೆಗಾಗಿ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ. ಈ ಕಾರಿನಲ್ಲಿ ಸ್ಟ್ರೀಟ್, ಟ್ರ್ಯಾಕ್ ಹಾಗೂ ಆಫ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಹೀಗಾಗಿ ಈ ಕಾರು ಐಷಾರಾಮಿ ಕಾರು ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಐಷಾರಾಮಿ ಕಾರುಗಳ ಮಾರಾಟದಲ್ಲಿ ಉನ್ನತ ಸ್ಥಾನ ಹೊಂದಿರುವ ಲ್ಯಾಂಬೊರ್ಗಿನಿ ಕಂಪನಿಯು 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಕಾರಣಕ್ಕೆ ಈ ಎಸ್‌ಯುವಿಗಳ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾರಣಕ್ಕೆ ಹೊಸ ಉರುಸ್ ಮೂಲಕ ಕಂಪನಿಯು ಹೊಸ ದಾಖಲೆ ಬರೆದಿದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಸೂಪರ್ ಸ್ಪೋರ್ಟಿ ಫೀಚರ್ ಗಳನ್ನು ಹೊಂದಿರುವ ಉರುಸ್ ಕಾರಿನ ಬೆಲೆ ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ. 3.15 ಕೋಟಿಗಳಾಗಿದೆ. ಈ ಕಾರ್ ಅನ್ನು ವಿ 8 ಹಾಗೂ ಪರ್ಲ್ ಕ್ಯಾಸ್ಸೊಲ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕೋವಿಡ್ ಪರಿಹಾರ ನಿಧಿ ಬಳಸಿ ಐಷಾರಾಮಿ ಕಾರು ಖರೀದಿಸಿದವನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ಕಾರಿನಲ್ಲಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ವೆಂಟಿಲೆಟೆಡ್ ಲೆದರ್ ಸೀಟ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 8 ಏರ್‌ಬ್ಯಾಗ್‌, ಅತ್ಯಾಧುನಿಕ ಇನ್ಪೋಟೇನ್‌ಮೆಂಟ್ ಸಿಸ್ಟಂ, 85 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Man sent to jail for buying lamborghini urus from covid 19 relief fund details
Story first published: Thursday, December 2, 2021, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X