ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ
ಮಾರುತಿ ಸುಜುಕಿ ಆಲ್ಟೊ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆ, ಕಡಿಮೆ ಮೆಂಟೆನೆನ್ಸ್ ವೆಚ್ಚ, ಹೆಚ್ಚು ಮೈಲೇಜ್ ಸೇರಿದಂತೆ ಹಲವು ಕಾರಣಗಳಿಗಾಗಿ ಆಲ್ಟೊ ಈಗಲೂ ಭಾರತೀಯರ ನೆಚ್ಚಿನ ಕಾರ್ ಆಗಿದೆ.

ಈ ಕಾರು ಆಧುನಿಕ ಫೀಚರ್'ಗಳನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಆಲ್ಟೊ ಕಾರಿನಲ್ಲಿ ಸನ್‌ರೂಫ್ ಸೌಲಭ್ಯವನ್ನು ನೀಡಲಾಗಿಲ್ಲ. ಆದರೆ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿರುವ ಆಲ್ಟೊ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.

ಆಲ್ಟೊ ಕಾರಿನಲ್ಲಿ ಈ ಫೀಚರ್ ಹೇಗೆ ಬರಬಹುದು ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ ಮಾಡಿಫಿಕೇಶನ್ ಮೂಲಕ ಈ ಕಾರಿನಲ್ಲಿ ಸನ್‌ರೂಫ್ ಅಳವಡಿಸಿರುವುದು ವಿಶೇಷ.
MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

2012ರಲ್ಲಿ ಖರೀದಿಸಲಾದ ಈ ಆಲ್ಟೊ ಕಾರಿನ ಮಾಲೀಕರು ತಮ್ಮ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್ ಅಳವಡಿಸಿದ್ದಾರೆ. ಈ ಮೂಲಕ ತಮ್ಮ ಕಾರ್ ಅನ್ನು ಅತ್ಯಾಧುನಿಕ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ.

ಈ ವೀಡಿಯೊವನ್ನು ಎಂಜಿನಿಯರ್ ಸಿಂಗ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ಈ ವೀಡಿಯೊದಲ್ಲಿ 2012ರ ಆಲ್ಟೊ 800 ಕಾರಿನಲ್ಲಿ ಹೊಸ ಫೀಚರ್'ಗಳನ್ನು ಅಳವಡಿಸಿರುವುದನ್ನು ಕಾಣಬಹುದು.
MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಈ ಕಾರಿನ ಫ್ರಂಟ್ ಪ್ಯಾನೆಲ್'ಗಳನ್ನು ಬದಲಿಸಲಾಗಿದ್ದು, ಬ್ಲಾಕ್ ಬಂಪರ್ ಹಾಗೂ ಬಾನೆಟ್ ಲಿಪ್'ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿದ್ದ ಹೆಡ್‌ಲೈಟ್‌ಗಳನ್ನು ಬದಲಿಸಿ ಫಾಗ್ ಲ್ಯಾಂಪ್ ಹಾಗೂ ಸರ್ಕ್ಯುಲರ್ ಎಲ್ಇಡಿ ಡಿಆರ್‌ಎಲ್'ಗಳನ್ನು ಅಳವಡಿಸಲಾಗಿದೆ.

ಕಾರಿನ ಆಕರ್ಷಣೆಯನ್ನು ಹೆಚ್ಚಿಸಲು ವ್ಹೀಲ್, ಹೊಸ ಹ್ಯಾಂಡಲ್, ಏರ್ ವೆಂಟ್ ಹಾಗೂ ಮಡ್ ಗಾರ್ಡ್'ಗಳನ್ನು ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್'ನಲ್ಲಿಯೂ ಹಲವಾರು ಹೊಸ ಫೀಚರ್'ಗಳನ್ನು ಸೇರಿಸಲಾಗಿದೆ.
MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು
ಇವುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ರೇಸಿಂಗ್ ಕಾರುಗಳಲ್ಲಿರುವಂತಹ ಸ್ಪಾರ್ಕೋ ಸ್ಟೀಯರಿಂಗ್ ವ್ಹೀಲ್, ಆಂಪ್ಲಿಫೈಯರ್ ಹಾಗೂ ಸಬ್ ವೂಫರ್‌ಗಳನ್ನು ಹೊಂದಿರುವ ಸ್ಪೀಕರ್, ಎಲೆಕ್ಟ್ರಿಕ್ ಸನ್‌ರೂಫ್'ಗಳು ಸೇರಿವೆ.

ಇನ್ನು ಈ ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕಾರಿನಲ್ಲಿರುವ 796 ಸಿಸಿ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 46.3 ಬಿಹೆಚ್‌ಪಿ ಪವರ್ ಹಾಗೂ 62 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಚಿತ್ರಕೃಪೆ: ಎಂಜಿನಿಯರ್ ಸಿಂಗ್


Click it and Unblock the Notifications








