ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
ಮಾರುತಿ ಸುಜುಕಿ ತನ್ನ ಬಲೆನೊ ಸೆಡಾನ್ ಕಾರ್ ಅನ್ನು 1999ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಹಾಗೂ ಮಿಟ್ಸುಬಿಷಿ ಲ್ಯಾನ್ಸರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಲಾಗಿತ್ತು.

ಈ ಕಾರು ಉತ್ತಮ ನಿರ್ವಹಣೆಯ ಜೊತೆಗೆ ಸಂಸ್ಕರಿಸಿದ, ಸ್ಲೀಕ್ ಆದ, ಹೆಚ್ಚು ಟ್ಯೂನ್ ಮಾಡಬಹುದಾದ 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿತ್ತು. ಈ ಕಾರು ಆಗಿನ ಕಾಲಕ್ಕೆ ಕಾರು ಉತ್ಸಾಹಿಗಳಿಂದ ಹೆಚ್ಚು ಪ್ರಶಂಸಗೆ ಒಳಗಾಗಿತ್ತು. ಆದರೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ವಿಫಲವಾಯಿತು.

ಈ ಹಿಂದೆ ನಾವು ಮಾಡಿಫೈಗೊಂಡ ಹಲವು ಕಾರುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈ ಲೇಖನದಲ್ಲಿ ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡಿರುವ ಮಾರುತಿ ಸುಜುಕಿ ಬಲೆನೊ ಸೆಡಾನ್ ಕಾರಿನ ಬಗೆಗಿನ ವಿವರಗಳನ್ನು ನೋಡೋಣ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾಡಿಫೈಗೊಂಡಿರುವ ಬಲೆನೊ ಸೆಡಾನ್ ಕಾರಿನ ವೀಡಿಯೊವನ್ನು ಇಂಡಿಯಾ ಸೋನಿಕ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.ಈ ವೀಡಿಯೊದಲ್ಲಿ ಕಾರಿನ ಸಂಪೂರ್ಣ ಮಾಡಿಫಿಕೇಶನ್ ಅನ್ನು ಕಾಣಬಹುದು.

ಮಾಡಿಫೈಗೊಂಡಿರುವ ನಂತರ ಈ ಕಾರು ಫೋರ್ಡ್ ಮುಸ್ಟಾಂಗ್‌ನಂತೆ ಮಾರ್ಪಟ್ಟಿದ್ದು, ಐಷಾರಾಮಿಯಾಗಿ ಕಾಣುತ್ತದೆ. ಈ ಬಲೆನೊ ಸೆಡಾನ್ ಕಾರ್ ಅನ್ನು ಅದರ ಚಾಸೀಸ್ ಮೇಲೆ ಕೊಂಡೊಯ್ದು ಫೋರ್ಡ್ ಮುಸ್ಟಾಂಗ್‌ನಂತಹ ಬಾಡಿ ಪ್ಯಾನೆಲ್‌ಗಳನ್ನು ಅಳವಡಿಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರಿನ ವಿನ್ಯಾಸವು ಮೂಲ ಕಾರಿನ ವಿನ್ಯಾಸಕ್ಕಿಂತ ಭಿನ್ನವಾಗಿರುವುದರಿಂದ ಈ ಕಾರು ಭಾಗಶಃ ಮುಸ್ಟಾಂಗ್‌ನಂತೆ ಕಾಣುತ್ತದೆ. ಈ ಕಾರು ಪೂರ್ತಿಯಾಗಿ ಫೋರ್ಡ್ ಮುಸ್ಟಾಂಗ್'ನಂತೆ ಮಾಡಿಫೈಗೊಂಡಿಲ್ಲ ಎಂಬುದು ಗಮನಾರ್ಹ.

ಕೆಲವು ಮಾಡಿಫಿಕೇಶನ್ ಹಾಗೂ ಕಾರು ಕಸ್ಟಮೈಸ್ ಕಂಪನಿಗಳು ಬಾಡಿ ಕಿಟ್‌ಗಳೊಂದಿಗೆ ಕಾರುಗಳನ್ನು ಅಪರೂಪದ ಸೂಪರ್ ಕಾರುಗಳಂತೆ ಮಾಡಿಫೈಗೊಳಿಸಿ ಮಾರಾಟ ಮಾಡುತ್ತವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಈ ವೀಡಿಯೊದಲ್ಲಿ, ಫೆರಾರಿ ಎಂಜೊ, ಬುಗಾಟ್ಟಿ ಚಿರೋನ್ ಹಾಗೂ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಬಾಡಿ ಕಿಟ್‌ಗಳನ್ನು ಸಹ ಕಾಣಬಹುದು. ಕಸ್ಟಮೈಸ್ ಮಾಡಲಾದ ಈ ಬಾಡಿ ಕಿಟ್‌ಗಳು ಬಹುತೇಕ ಅಸಲಿ ಮಾದರಿಗಳಂತೆ ಕಾಣುತ್ತವೆ.

ಇವುಗಳನ್ನು ಯಾವುದೇ ವಾಹನದ ಚಾಸಿಸ್ ಮೇಲೆ ಅಳವಡಿಸಬಹುದಾಗಿದೆ. ಬಾಡಿ ಕಿಟ್‌ಗಳ ಮೂಲಕ ಸೂಪರ್‌ಕಾರ್‌ಗಳಂತೆಯೇ ಕಾರುಗಳನ್ನು ಮಾಡಿಫೈಗೊಳಿಸುವುದು ಸಾಧ್ಯವಿಲ್ಲವೆಂದು ಈ ವೀಡಿಯೋ ಹೇಳುತ್ತದೆ. ಪರ್ಫಾಮೆನ್ಸ್ ಕಾರಣಕ್ಕೆ ಈ ಬಲೆನೊ ಸೆಡಾನ್ ಕಾರ್ ಅನ್ನು ಮಾಡಿಫೈಗೊಳಿಸಲಾಗಿದೆ.
ಚಿತ್ರಕೃಪೆ: ಇಂಡಿಯಾ ಸೋನಿಕ್


Click it and Unblock the Notifications








