2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾಗಿರುವ ಡಿಜೈರ್ ಕಾರು ಮಾದರಿಯ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಎರ್ಟಿಗಾ ಆವೃತ್ತಿಯಲ್ಲಿ ಜೋಡಣೆ ಮಾಡಲಾಗಿರುವ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಡಿಜೈರ್ ಕಾರಿನ ವಿಎಕ್ಸ್ಐ ಮಾದರಿಯಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಇನ್ಪೋಟೈನ್ ಸಿಸ್ಟಂ ಮೂಲಕ ಟ್ರ್ಯಾಕ್ ಚೆಂಜ್, ಧ್ವನಿ ಏರಿಳಿತ, ರೆಡಿಯೋ, ಮಿಡಿಯಾ, ಸೆಟ್‌ಅಪ್, ಸಿಹೆಚ್/ಎಫ್ಎಲ್‌ಜಿ, ಡಿಎಸ್‌ಪಿ/ಎಎನ್‌ಟಿ ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದೆ. ಹೊಸ ಇನ್ಟೋಟೈನ್ ಸಿಸ್ಟಂ ಅನ್ನು ಮೊದಲ ಬಾರಿಗೆ 2020ರ ಎರ್ಟಿಗಾ ಮಾದರಿಯಲ್ಲಿ ಪರಿಚಯಿಸಿದ್ದ ಮಾರುತಿ ಸುಜುಕಿಯು ಇದೀಗ ಡಿಜೈರ್ ಕಾರಿನಲ್ಲೂ ಅಳವಡಿಸಿದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಇನ್ಪೋಟೈನ್ ಸಿಸ್ಟಂ ಹೊರತುಪಡಿಸಿ ಬೆಸ್ ವೆರಿಯೆಂಟ್‌ಗಳಲ್ಲಿ ಕೆಲವು ಹೆಚ್ಚುವರಿ ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪರಿಚಯಿಸಲಾಗಿದ್ದು, 2021ರ ಮಾದರಿಯಲ್ಲಿ ಯಾವುದೇ ಗುರುತರವಾದ ಬದಲಾವಣೆಯನ್ನು ತರಲಾಗಿಲ್ಲ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.93 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.89 ಲಕ್ಷ ಬೆಲೆ ಹೊಂದಿದ್ದು, ಕಳೆದ ವರ್ಷದ ಮಾದರಿಗೂ ಹೊಸ ಮಾದರಿಗೂ ರೂ. 4 ಸಾವಿರದಿಂದ ರೂ. 8 ಸಾವಿರದಷ್ಟು ಹೆಚ್ಚಳವಾಗಿದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಫೇಸ್‌ಲಿಫ್ಟ್ ವರ್ಷನ್ ನಂತರ ಡಿಜೈರ್ ಆವೃತ್ತಿಯಲ್ಲಿ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ನ್ಯೂ ಜನರೇಷನ್ ಬಲೆನೊದಲ್ಲಿ ಬಳಕೆ ಮಾಡಲಾಗಿರುವ ಕೆ12ಸಿ ಡ್ಯುಯಲ್ ಜೆಟ್ ಎಂಜಿನ್ ಮಾದರಿಯನ್ನೇ ಡಿಜೈರ್‌ನಲ್ಲೂ ಅಳವಡಿಸಲಾಗಿದೆ. ಜೊತೆಗೆ ಹಳೆಯ ಆವೃತ್ತಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಜೋಡಿಸಲಾಗಿದ್ದು, ಮ್ಯಾನುವಲ್ ಮತ್ತು ಎಜಿಎಸ್(ಆಟೋ) ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಫೋರ್ ಸಿಲಿಂಡರ್ ಕೆ12ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಹೊಂದಿರುವ ಡಿಜೈರ್ ಫೇಸ್‌ಲಿಫ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಈ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆದಿರುವ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 24.12 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಹೊಸ ಕಾರಿನಲ್ಲಿ ಇಂಧನ ದಕ್ಷತೆಗಾಗಿ ಐಡೆಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಇದು ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಇನ್ನುಳಿದಂತೆ ಹೊಸ ಕಾರಿನ ಗ್ರಿಲ್ ಡಿಸೈನ್ ಅನ್ನು ಸಂಪೂರ್ಣವಾಗಿ ಬದಲಾಣೆಗೊಳಿಸಿರುವ ಕಾರಿನ ಆಕರ್ಷಣೆಯನ್ನು ಹೆಚ್ಚಿಸಿದ್ದು, ಹೊಸ ವಿನ್ಯಾಸದ ಫ್ರಂಟ್ ಬಂಪರ್ ಜೊತೆಗೆ ಹೊಸದಾದ ಫಾಗ್ ಲ್ಯಾಂಪ್ ಮತ್ತು ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ನೀಡಲಾಗಿದೆ.

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಫೇಸ್‌ಲಿಫ್ಟ್ ಆವೃತ್ತಿಯಂತೆ ಮುಂದುವರಿಸಲಾಗಿದ್ದು, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇಗೆ ಸರ್ಪೋಟ್ ಮಾಡಬಲ್ಲ ಸ್ಮಾರ್ಟ್ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಆಸನಗಳು, ಫ್ಲಕ್ಸ್ ವುಡ್ ಟ್ರಮ್, ಆಟೋ ಫ್ಲೊಡಿಂಗ್ ರಿಯರ್ ವ್ಯೂ ಮಿರರ್, ಟಿಎಫ್‌ಟಿ ಸ್ಕ್ರೀನ್, ಎಂಡಿಐ ಸೌಲಭ್ಯ ಹೊಂದಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

2021ರ ಡಿಜೈರ್‌ನಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪರಿಚಯಿಸಿದ ಮಾರುತಿ ಸುಜುಕಿ

ಪ್ರಯಾಣಿಕ ಸುರಕ್ಷತೆಗೂ ಹೆಚ್ಚು ಗಮನಹರಿಸಿರುವ ಮಾರುತಿ ಸುಜುಕಿಯು ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Maruti Suzuki Dzire Gets New Infotainment System From Ertiga. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X