ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಕಳೆದ ಕೆಲವು ತಿಂಗಳುಗಳಿಂದ ಕರೋನಾ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ. ಈ ಕಾರಣಕ್ಕೆ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ತೆಗೆದು ಹಾಕಲಾಗಿದೆ. ಆದರೂ ದೇಶಿಯ ಮಾರುಕಟ್ಟೆಯ ಕಾರು ಮಾರಾಟ ಪ್ರಮಾಣವು ಕಳೆದ ತಿಂಗಳು ಸುಮಾರು 36.6% ನಷ್ಟು ಕುಸಿದಿದೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 1,85,636 ಯುನಿಟ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ 2,92,858 ಯುನಿಟ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿದ್ದವು. ಕಳೆದ ತಿಂಗಳ ಮಾರಾಟ ಪ್ರಮಾಣವು ಈ ವರ್ಷದ ಆಗಸ್ಟ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 28.5% ನಷ್ಟು ಕಡಿಮೆಯಾಗಿದೆ. ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ Maruti Suzuki ಇಂಡಿಯಾದ ಕಾರು ಮಾರಾಟ ಪ್ರಮಾಣವು ಕಳೆದ ತಿಂಗಳು ಅರ್ಧಕ್ಕಿಂತಲೂ ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಸೆಮಿ ಕಂಡಕ್ಟರ್‌ಗಳ ಕೊರತೆಯಿಂದಾಗಿ Maruti Suzuki ಕಂಪನಿಯು ಕಾರುಗಳ ಉತ್ಪಾದನೆಯನ್ನು 60% ನಷ್ಟು ಕಡಿತಗೊಳಿಸಿರುವುದಾಗಿ ಕಳೆದ ತಿಂಗಳಷ್ಟೇ ಘೋಷಿಸಿತ್ತು. ಇದರಿಂದ Maruti Suzuki ಕಂಪನಿಯ ಕಾರುಗಳನ್ನು ಬುಕ್ ಮಾಡಿದವರಿಗೆ ಸರಿಯಾದ ಸಮಯಕ್ಕೆ ಕಾರಿನ ವಿತರಣೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ Maruti Suzuki ಕಾರುಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 57.3% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Maruti Suzuki ಕಂಪನಿಯ 1,47,912 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಕೇವಲ 63,111 ಯುನಿಟ್ ಕಾರುಗಳು ಮಾರಾಟವಾಗಿವೆ. ಅದೇ ರೀತಿ ಮತ್ತೊಂದು ಪ್ರಮುಖ ಕಾರು ತಯಾರಕ ಕಂಪನಿಯಾದ Hyundai ಕಾರುಗಳ ಮಾರಾಟವು ಸಹ ಕಳೆದ ತಿಂಗಳು 34.2% ನಷ್ಟು ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಕಳೆದ ತಿಂಗಳು ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ Hyundai ಕಂಪನಿಯ ಒಟ್ಟು 33,087 ಯುನಿಟ್ ಕಾರುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಕೊರಿಯಾ ಮೂಲದ Hyundai ಕಂಪನಿಯು 50,313 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಈ ಎರಡು ಪ್ರಮುಖ ಕಂಪನಿಗಳು ಮಾರಾಟದಲ್ಲಿ ಕುಸಿತ ದಾಖಲಿಸಿದ್ದರೆ ಭಾರತೀಯ ಮೂಲದ Tata Motors ಕಂಪನಿಯ ಪ್ರಯಾಣಿಕ ಕಾರುಗಳ ಮಾರಾಟವು 21.4% ನಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Tata Motors ಕಂಪನಿಯ 21,200 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಕಳೆದ ತಿಂಗಳು Tata Motorsಕಂಪನಿಯು ಒಟ್ಟು 25,719 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ Tata Motors ಕಂಪನಿಯ ಕಾರು ಮಾರಾಟವು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 21.4% ನಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಕಳೆದ ಕೆಲವು ತಿಂಗಳುಗಳಿಂದ Tata Motors ಕಾರುಗಳ ಮಾರಾಟದಲ್ಲಿ ಏರಿಕೆ ಕಂಡು ಬರುತ್ತಿದೆ. ಇದರಿಂದ ಕಳೆದ ತಿಂಗಳು ಮಾರಾಟ ಪ್ರಮಾಣವು 21.4% ನಷ್ಟು ಏರಿಕೆಯಾಗಿದೆ. Maruti Suzuki ಹಾಗೂ Hyundai ನಂತಹ ಪ್ರಮುಖ ಕಂಪನಿಗಳು ಜಾಗತಿಕ ಸೆಮಿ ಕಂಡಕ್ಟರ್‌ಗಳ ಕೊರತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ Tata Motors ಕಾರುಗಳ ಮಾರಾಟವು ಹೆಚ್ಚುತ್ತಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಮುಂಬರುವ ತಿಂಗಳುಗಳಲ್ಲಿ Tata Motors ಕಾರುಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಂಪನಿಯ ಬಹು ನಿರೀಕ್ಷಿತ Punch ಮೈಕ್ರೋ ಎಸ್‌ಯುವಿಯು ಇಂದು (ಅಕ್ಟೋಬರ್ 4) ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ Kia Motors ಕಂಪನಿಯ ಒಟ್ಟು 14,441 ಯುನಿಟ್ ಕಾರುಗಳು ಕಳೆದ ತಿಂಗಳು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

Kia Motors ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 22.7% ನಷ್ಟು ಕಡಿಮೆಯಾಗಿದೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ Mahindra and Mahindra ಕಂಪನಿಯು ಕಳೆದ ತಿಂಗಳು 12,863 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. Mahindra and Mahindra ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 12.3% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಈ ಪಟ್ಟಿಯಲ್ಲಿ ಜಪಾನ್ ಮೂಲದ Toyota ಕಾರು ತಯಾರಕ ಕಂಪನಿಯು ಆರನೇ ಸ್ಥಾನದಲ್ಲಿದೆ. Toyota ಕಂಪನಿಯು ಕಳೆದ ತಿಂಗಳು 9,284 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಈ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 14.4% ನಷ್ಟು ಹೆಚ್ಚಾಗಿದೆ. ಈ ಪಟ್ಟಿಯಲ್ಲಿರುವ Skoda, Nissan ಹಾಗೂ Volkswagen ಕಾರುಗಳ ಮಾರಾಟವು ಸಹ ಕಳೆದ ತಿಂಗಳು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

Skoda ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 1,312 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ ಕಳೆದ ತಿಂಗಳು 3,027 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯ ಮಾರಾಟ ಪ್ರಮಾಣವು ಈ ಬಾರಿ 130.7% ನಷ್ಟು ಏರಿಕೆಯಾಗಿದೆ. ಇನ್ನು Nissan ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 780 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ ಕಳೆದ ತಿಂಗಳು 2,816 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಪ್ಯಾಸೆಂಜರ್ ಕಾರು ಮಾರಾಟ

ಈ ಮೂಲಕ ಕಂಪನಿಯ ಮಾರಾಟ ಪ್ರಮಾಣದಲ್ಲಿ ಈ ಬಾರಿ 261% ನಷ್ಟು ಏರಿಕೆ ಕಂಡು ಬಂದಿದೆ. Volkswagen 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 2,026 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ ಕಳೆದ ತಿಂಗಳು 2,563 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯ ಕಾರು ಮಾರಾಟದಲ್ಲಿ ಈ ಬಾರಿ 26.5% ನಷ್ಟು ಏರಿಕೆ ಕಂಡು ಬಂದಿದೆ.

Most Read Articles

Kannada
English summary
Maruti suzuki records 57 3 percent fall in september 2021 car sales details
Story first published: Monday, October 4, 2021, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X