ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಇತ್ತೀಚೆಗೆ ಬಾರತೀಯ ಮಾರುಕಟ್ಟೆಯಲ್ಲಿ 15 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು, ಅವುಗಳಲ್ಲಿ 7 ಎಎಂಜಿ ಮಾದರಿಗಳಾಗಿವೆ ಎಂದು ಕಂಪನಿ ಹೇಳಿದೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಎಎಂಜಿ ಇ 53 4ಮ್ಯಾಟಿಕ್ ಪ್ಲಸ್ ಮತ್ತು ಎಎಂಜಿ ಇ 63ಎಸ್ 4 ಮ್ಯಾಟಿಕ್ ಪ್ಲಸ್ ಕಾರುಗಳ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಎಎಂಜಿ ಸೆಡಾನ್ ಸೆಡಾನ್ ಕಾರುಗಳು ಇದೇ ತಿಂಗಳ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಈ ಹಿಂದೆ ಎಎಂಜಿ ಇ 63 ಅನ್ನು ಮಾರಾಟ ಮಾಡುತ್ತಿದ್ದರು, ಆದರೆ ಎಎಂಜಿ ಇ 53 ಕಾರು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸುತ್ತಿದೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಮರ್ಸಿಡಿಸ್ ಬಂಝ್ ಕಂಪನಿಯು 2021ರಲ್ಲಿ ಎರಡು ಎಎಂಜಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಎಎಂಜಿ ಎ35 ಲಿಮೋಸಿನ್ ಮತ್ತು ಎಎಂಜಿ ಜಿಎಲ್ಎ 35 ಮಾದರಿಗಳಾಗಿದೆ. ಈ ಎರಡು ಕಾರುಗಳನ್ನು ಸ್ಥಳೀಯವಾಗಿ ಜೋಡಿಸಲ್ಪಟ್ಟಿವೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಹೆಚ್ಚುವರಿಯಾಗಿ ಕಂಪನಿಯು ಭಾರತದಲ್ಲಿ ಎಎಂಜಿ ಜಿಎಲ್ಸಿ 43 ಕೂಪೆ ಅನ್ನು ಕೂಡ ತಯಾರಿಸುತ್ತಿದೆ. ಇದೀಗ ಸ್ಥಳೀಯವಾಗಿ ತಯಾರಿಸಿದ ಎಎಂಜಿ ಮಾದರಿಗಳನ್ನು ಪರಿಚಯಿಸುವುದಾಗಿ ಕಂಪನಿ ಹೇಳಿದ್ದರೂ, ಇದು ಎಎಂಜಿ ಇ 53 4ಮ್ಯಾಟಿಕ್ ಪ್ಲಸ್ ಮತ್ತು ಎಎಂಜಿ ಇ 63ಎಸ್ 4 ಮ್ಯಾಟಿಕ್ ಪ್ಲಸ್ ಕಾರುಗಳಾಗಿರಬಹುದು.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಮರ್ಸಿಡಿಸ್-ಎಎಂಜಿ ಇ 53 4ಮ್ಯಾಟಿಕ್ ಪ್ಲಸ್ ಕಾರಿನಲ್ಲಿ 3.0-ಲೀಟರ್ ಆರು ಸಿಲಿಂಡರ್ ಇನ್-ಲೈನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಇಕ್ಯೂ ಬೂಸ್ಟ್ ಸ್ಟಾರ್ಟರ್-ಅಲ್ಟ್ರಾನೆಟ್ ಜೋಡಿಯಾಗಿ ಬರುತ್ತದೆ

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇದೇ ಎಂಜಿನ್ ಅನ್ನು ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕಾರಿನಲ್ಲಿ ನೀಡಲಾಗಿದೆ. ಈ ಎಂಜಿನ್ 435 ಬಿಹೆಚ್‌ಪಿ ಪವರ್ ಮತ್ತು 520 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಇಕ್ಯೂ ಬೂಸ್ಟ್ ಸ್ಟಾರ್ಟರ್-ಅಲ್ಟ್ರಾನೆಟ್ ಹೆಚ್ಚುವರಿ 21 ಬಿಹೆಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಒದಗಿಸುತ್ತದೆ

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ 48ವಿ ಆನ್‌ಬೋರ್ಡ್ ಎಲೆಕ್ಟ್ರಿಕ್ ಸಿಸ್ಟಂ ಸಹ ನೀಡುತ್ತದೆ. ಇದರ ಎಂಜಿನ್ ಎಎಂಜಿ ಸ್ಪೀಡ್‌ಶಿಫ್ಟ್ ಟಿಸಿಟಿ 9ಜಿ ಟ್ರಾನ್ಸ್‌ಮಿಷನ್ ಮತ್ತು ಸಂಪೂರ್ಣ ವೇರಿಯಬಲ್ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಎಎಂಜಿ ಪರ್ಫಾರ್ಮೆನ್ಸ್ 4 ಮ್ಯಾಟಿಕ್ ಪ್ಲಸ್'ಗೆ ಜೋಡಿಸಲಾಗುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಮರ್ಸಿಡಿಸ್-ಎಎಂಜಿ ಇ 63ಎಸ್ 4 ಮ್ಯಾಟಿಕ್ ಪ್ಲಸ್ ಕಾರಿನಲ್ಲಿ 4.0-ಲೀಟರ್ ವಿ8 ಬಿಟುರ್ಬೊ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಕಾರಿನ ಟಾಪ್-ಎಂಡ್ ಎಸ್ ರೂಪಾಂತರವು 612 ಬಿಹೆಚ್‌ಪಿ ಮತ್ತು ಟಾರ್ಕ್ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇದೇ ಎಂಜಿನ್ ಅನ್ನು ಭಾರತೀಯ ಮಾದರಿಯಲ್ಲಿ ನೀಡಲಾಗುತ್ತದೆ. ಈ ಎಂಜಿನ್ ಅನ್ನು ಎಎಂಜಿ ಸ್ಪೀಡ್‌ಶಿಫ್ಟ್ ಎಂಸಿಟಿ 9-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ, ಈ ಕಾರು ಕೇವಲ 3.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಮರ್ಸಿಡಿಸ್-ಎಎಂಜಿ ಪರ್ಫಾಮೆನ್ಸ್ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಎರಡೂ ಕಾರುಗಳು ವಿನ್ಯಾಸ ಮತ್ತು ಸ್ಟೈಲಿಂಗ್ ಅಂಶಗಳನ್ನು ಹಂಚಿಕೊಳ್ಳುತ್ತವೆ, ಈ ಕಾರುಗಳಲ್ಲಿ ಲಂಬ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿರುವ ಪನಾಮೆರಿಕಾನಾ ಗ್ರಿಲ್, ಸ್ಪೋರ್ಟಿ ಬಂಪರ್. ಎಲ್‌ಇಡಿ ಹೆಡ್‌ಲ್ಯಾಂಪ್, ಹಿಂಭಾಗದಲ್ಲಿ ಎರಡೂ ಕಾರುಗಳು ಒಂದು ಜೋಡಿ ನಯವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂನೊಂದಿಗೆ ಬ್ಲಾಕ್ ಡಿಫ್ಯೂಸರ್ ಅನ್ನು ಹೊಂದಿರುತ್ತದೆ.

Article Published On: Saturday, July 3, 2021, 19:22 [IST]
English summary
Mercedes-AMG E 53 4M+ And AMG E 63 S 4M+ Launch Date Announced. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+