ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಭಾರತೀಯ ಮಾರುಕಟ್ಟೆಯಲ್ಲಿ ಸಿ-ಕ್ಲಾಸ್ ಸೆಡಾನ್ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಮೂರು ರೂಪಾಂತರಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸಿ200 ಪ್ರೋಗ್ರೆಸ್ಸಿವ್ ರೂಪಾಂತರವು ರೂ.59,863 ಗಳವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಸಿ200 ಪ್ರೋಗ್ರೆಸ್ಸಿವ್ ರೂಪಾಂತರದಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 201 ಬಿಹೆಚ್‌ಪಿ ಪವರ್ ಮತ್ತು 300 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಇನ್ನು ಸಿ220ಡಿ ಪ್ರೋಗ್ರೆಸ್ಸಿವ್ ರೂಪಾಂತರದ ಬೆಲೆಯನ್ನು ರೂ.59,237 ಗಳವರೆಗೆ ಹೆಚ್ಚಿಸಲಾಗಿದೆ. ಈ ಸಿ220ಡಿ ಪ್ರೋಗ್ರೆಸ್ಸಿವ್ ರೂಪಾಂತರದಲ್ಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಈ ಎಂಜಿನ್ 192 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಕಂಪನಿಯು ಕ್ಯಾಬ್ರಿಯೊಲೆಟ್ ಸಿ300 ಕನ್ವರ್ಟಿಬಲ್ ರೂಪಾಂತರದ ಬೆಲೆಯನ್ನು ರೂ.3.14 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಈ ಎಂಜಿನ್ 258 ಬಿಹೆಚ್‌ಪಿ ಪವರ್ ಮತ್ತು 370 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ 300ಡಿ ಎಎಂಜಿ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈ ರೂಪಾಂತರದಲ್ಲಿ 2.0 ಲೀಟರ್ ಹೊಂದಿದ್ದ ಡೀಸೆಲ್ ಎಂಜಿನ್ 245 ಬಿಹೆಚ್‌ಪಿ ಪವರ್ ಮತ್ತು 370 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಮರ್ಸಿಡಿಸ್ ಬೆಂಝ್ ತನ್ನ ಹೊಸ ಮೇಬ್ಯಾಕ್ ಎಸ್ 680 ಅಲ್ಟ್ರಾ-ಐಷಾರಾಮಿ ಸೆಡಾನ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಸೆಡಾನ್ ತನ್ನ ಹಿಂದಿನ ಮಾದರಿಯ ವಿನ್ಯಾಸದ ಹೆಚ್ಚಿನ ವಿನ್ಯಾಸ ಅಂಶಗಳನ್ನು ಮುಂದಕ್ಕೆ ಸಾಗಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

2022ರ ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಪ್ರೀಮಿಯಂ ಡ್ಯುಯಲ್-ಟೋನ್ ಫಿನಿಶ್ ಮತ್ತು ದೊಡ್ಡ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಒಳಭಾಗದಲ್ಲಿ ಐದು ಸ್ಕ್ರೀನ್ ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒಂದು 12.3-ಇಂಚಿನ ಡ್ರೈವರ್ ಡಿಸ್ ಪ್ಲೇ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್ ಯುನಿಟ್ 12.8-ಇಂಚಿನ ಒಎಲ್‌ಇಡಿ ಟಚ್‌ಸ್ಕ್ರೀನ್ ಆಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಇನ್ನು ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಇದೀಗ ಮ್ಯಾಟಿಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಬರುತ್ತದೆ. ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಸೆಡಾನ್ ಚಿತ್ರಗಳನ್ನು ಹೊರತುಪಡಿಸಿ ಇತರ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು

ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಸಿ-ಕ್ಲಾಸ್ ಕಾರಿನ ಬೆಲೆಯನ್ನು ಹೆಚ್ಚಿಸಿರಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mercedes-Benz Increases The Price Of The C-Class. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X