ಕಾರು ಮಾರಾಟ ಸರಳಗೊಳಿಸಲು ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ಕಾರ್ಯನಿರ್ವಹಣೆಯು ಈ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ ಅಧಿಕೃವಾಗಿ ಜಾರಿಗೆ ಬರಲಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಮತ್ತು ಕಂಪನಿಯ ನಡುವೆ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಹೊಸ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್ ಪಾಲುದಾರರ ಕನಿಷ್ಠ ಹಸ್ತಕ್ಷೇಪದೊಂದಿಗೆ ನೇರವಾಗಿ ಕಂಪನಿಯೇ ಗ್ರಾಹಕರೊಂದಿಗೆ ವ್ಯವಹರಿಸಲಿದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ಹೊಸ ಯೋಜನೆಯಿಂದ ಫ್ರ್ಯಾಂಚೈಸ್ ಪಾಲುದಾರರು ಸ್ಟಾಕ್ ಪ್ರಮಾಣದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ತಡೆಯಲು ಹೊಸ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದು, ಇದು ಪ್ರಸ್ತುತ ಮಾರಾಟ ಮಾದರಿಗಿಂತಲೂ ಭಿನ್ನವಾಗಿರುತ್ತದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ಪ್ರಸ್ತುತ ಮಾರಾಟ ವಿಧಾನದಲ್ಲಿ ವಿತರಕರು ಮರ್ಸಿಡಿಸ್‌ನಿಂದ ಷೇರುಗಳನ್ನು ಖರೀದಿಸಿ ನಂತರ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಆದರೆ ಹೊಸ ವಿಧಾನದಲ್ಲಿ ಅಧಿಕೃತ ಮಾರಾಟಗಾರರಿಂದ ಕನಿಷ್ಠ ಹಸ್ತಕ್ಷೇಪದೊಂದಿಗೆ ಹೊಸ ಕಾರುಗಳು ಗ್ರಾಹಕರನ್ನುತಲುಪಲಿದ್ದು, ಈ ಮೂಲಕ ಕಾರು ತಯಾರಕರೇ ಇನ್ವಾಯ್ಸ್ ಮಾಡಲಿದ್ದಾರೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ಅಂದರೆ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಾದ್ಯಂತದ ಎಲ್ಲಾ ಗ್ರಾಹಕರಿಗೆ ಒಂದೇ ಬೆಲೆಗಳನ್ನು ನಿಗದಿಪಡಿಸಲಿದ್ದು, ಕಾರು ಮಾರಾಟವನ್ನೇ ಕಂಪನಿಯೇ ನಿರ್ವಹಿಸಿದರೂ ವಿತರಣೆಗಾಗಿ ಶೋರೂಂಗಳ ಮೂಲಕ ಪಡೆದುಕೊಳ್ಳಬೇಕಿರುತ್ತದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ಹೊಸ ಮಾರಾಟ ಸೌಲಭ್ಯದಿಂದ ವಿತರಕರು ದೊಡ್ಡ ಪ್ರಮಾಣದ ಸ್ಟಾಕ್ ಮಾದರಿಗಳಿಂದ ಅನುಭವಿಸುವ ನಷ್ಟ ತಡೆಯಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಹಕರಿಗೆ ಡೀಲರ್ಸ್‌ಗಳಿಂದಾಗುವ ಮೋಸ ಮತ್ತು ಸ್ಟಾಕ್ ಮಾರಾಟದಲ್ಲಾಗುವ ಒಳಸಂಚುಗಳನ್ನು ತಪ್ಪಿಸಲು ಸಹಕಾರಿಯಾಗಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ತೆರೆದ ಮರ್ಸಿಡಿಸ್ ಬೆಂಂಝ್

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್‌‌ನಿಂದಾಗಿ ಗ್ರಾಹಕರಿಗೆ ಮತ್ತು ಡೀಲರ್ಸ್‌ಗಳ ನಡುವೆ ಯಾವುದೇ ವ್ಯವಹಾರ ಇಲ್ಲವಾದರೂ ಕಾರು ಮಾರಾಟದಲ್ಲಿ ಲಾಭಾಂಶಗಳ ಪಾಲು ಕಂಪನಿಯೊಂದಿಗೆ ಹಂಚಿಯಾಗಲಿದ್ದು, ಸ್ಟಾಕ್ ಪ್ರಮಾಣದ ಮಾರಾಟವು ಮತ್ತಷ್ಟು ಸರಳಗೊಳ್ಳಲಿದೆ.

More from DriveSpark

Article Published On: Wednesday, June 2, 2021, 16:50 [IST]
English summary
Mercedes-Benz Introduces ‘Retail Of The Future’ Centralised Sales Model. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+