1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇದರ ನಡುವೆ, ಮರ್ಸಿಡಿಸ್ ಬೆಂಝ್ ತನ್ನ ವಿಷನ್ ಇಕ್ಯೂಎಕ್ಸ್ಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರನ್ನು ಮುಂದಿನ ವರ್ಷದ ಜನವರಿ 3 ರಂದು ಅನಾವರಣವಾಗಲಿದೆ ಎಂದು ಘೋಷಿಸಿದೆ. ಡೈಮ್ಲರ್ ಗ್ರೂಪ್ ರಿಸರ್ಚ್ ಮತ್ತು ಮರ್ಸಿಡಿಸ್-ಬೆಂಝ್ ಕಾರ್ಸ್ ಸಿಒಒ, ಮಾರ್ಕಸ್ ಲಿಂಕ್ಡ್‌ಇನ್‌ನಲ್ಲಿ ಮಾತನಾಡಿ, ಮುಂಬರುವ ಎಲೆಕ್ಟ್ರಿಕ್ ವಾಹನವನ್ನು ಕಂಪನಿಯು ಇದುವರೆಗೆ ನಿರ್ಮಿಸಿದ ಅತ್ಯಂತ ಪರಿಣಾಮಕಾರಿ ಮಾದರಿ ಎಂದು ಹೇಳುತ್ತಾ, ಈ ಇವಿ 1,000 ಕಿ.ಮೀ ಗಿಂತ ಹೆಚ್ಚು ರೇಂಜ್ ಹೊಂದಿರಲಿದೆ ಎಂದು ಹೇಳಿದರು.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ನೈಜ ರಸ್ತೆ ಪರಿಸ್ಥಿತಿಗಳಲ್ಲಿ ಒಂದು ಬ್ಯಾಟರಿ ಚಾರ್ಜ್‌ನಲ್ಲಿ 1,000 ಕಿ.ಮೀ ವರೆಗೆ ಚಲಿಸಬಲ್ಲ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಲು ವಾಹನ ತಯಾರಕರು ಬಯಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಸಾಮಾನ್ಯ ಹೆದ್ದಾರಿ ವೇಗದಲ್ಲಿ ಪ್ರತಿ 100 ಕಿ.ಮೀಗೆ ಕಿಲೋವ್ಯಾಟ್-ಗಂಟೆಗಳ ಏಕ-ಅಂಕಿಯ ಬಳಕೆಯ ಮೌಲ್ಯವನ್ನು ಸಾಧಿಸುವುದು ಗುರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಕಾರು ಒಂದು ಶೋ ಕಾರ್ ಅಲ್ಲ ಎಂದು ಅವರು ಸೇರಿಸಿದರು ಏಕೆಂದರೆ ಇದು ಹೆಚ್ಚು ಅಂತರಶಿಸ್ತೀಯ ತಂತ್ರಜ್ಞಾನ ಕಾರ್ಯಕ್ರಮವಾಗಿದ್ದು, ಇವಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಪ್ರತಿಯೊಂದು ಬಿಲ್ಡಿಂಗ್ ಬ್ಲಾಕ್‌ನ ಮೇಲೆ ಕಂಪನಿಯು ಗಮನಹರಿಸಿದೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಮರ್ಸಿಡಿಸ್-ಬೆಂಝ್ ವಿನ್ಯಾಸ ಮತ್ತು ತಾಂತ್ರಿಕ ವಿಶೇಷಣಗಳಂತಹ ಇತರ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಆದರೂ ಟೀಸರ್ ಚಿತ್ರಗಳು ಇದು ಲೋ-ಇಶ್ ಪ್ರೊಫೈಲ್‌ನೊಂದಿಗೆ ಸೆಡಾನ್ ಆಗಲಿದೆ ಎಂದು ಬಹಿರಂಗಪಡಿಸುತ್ತದೆ. ಕಂಪನಿಯು ತನ್ನ ಅತ್ಯಂತ ಪರಿಣಾಮಕಾರಿ ಇವಿ ಎಂದು ಹೇಳಿಕೊಂಡಿದೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಸಹ ಏರೋಡೈನಾಮಿಕ್ ಪರಿಭಾಷೆಯಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ಪಾದನಾ ವಾಹನ ವಿಭಾಗದಲ್ಲಿ ಕಡಿಮೆ ಡ್ರ್ಯಾಗ್ ಗುಣಾಂಕವನ್ನು ಹೊಂದಿರುವ EQS ನ 0.20 ಡ್ರ್ಯಾಗ್ ಗುಣಾಂಕವನ್ನು ಮೀರುವುದು ಗುರಿಯಾಗಿದೆ ಎಂದು ಸ್ಕಾಫರ್ ಹಂಚಿಕೊಂಡಿದ್ದಾರೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ವಾಹನದ ಪ್ರಮುಖ ಅಂಶವೆಂದರೆ ಅದರ ಬ್ಯಾಟರಿ ಪ್ಯಾಕ್ ಆಗಿದ್ದು, ಮರ್ಸಿಡಿಸ್-ಬೆಂಝ್ ಇಕ್ಯೂಎಸ್‌ಗೆ ಹೋಲಿಸಿದರೆ ಸೆಲ್ ಮಟ್ಟದಲ್ಲಿ ಶಕ್ತಿಯ ಸಾಂದ್ರತೆಯನ್ನು ಇನ್ನೂ 20 ಪ್ರತಿಶತದಷ್ಟು ಹೆಚ್ಚಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಸ್ಕಾಫರ್ ತಿಳಿಸಿದ್ದಾರೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇನ್ನು ಮರ್ಸಿಡಿಸ್ ಬೆಂಝ್ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಇತರ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳನ್ನು ಕೈಬಿಟ್ಟು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖಮಾಡುತ್ತಿದ್ದಾರೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಇದರೊಂದಿಗೆ ತನ್ನ ಇಕ್ಯೂ ಎಲೆಕ್ಟ್ರಿಕ್ ಕಾರಿನ ಸರಣಿಯನ್ನು ವಿಸ್ತರಿಸುತ್ತಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಮತ್ತು ಇಕ್ಯೂಎಸ್ ನಂತರ ಹೊಸ ಇಕ್ಯೂಇ ಪೋರ್ಟ್ಫೋಲಿಯೊಗೆ ಸೇರುವ ಸಮಯ ಬಂದಿದೆ. ಇದೀಗ ಜರ್ಮನ್ ಕಾರು ತಯಾರಕರು ಇಕ್ಯೂಇ ಕಾರಿನ ಟೀಸರ್ ಇತ್ತೀಚೆಗೆ ಬಿಡುಗಡೆಗೊಳಿಸಿತು. ಸ್ಟೈಲಿಂಗ್ ಅಂಶಗಳ ವಿಷಯದಲ್ಲಿ ಇದು ಹೆಚ್ಚು ಸಿಲೂಯೆಟ್ ಇಕ್ಯೂಎಸ್ ಮಾದರಿಯಂತಿದೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಈ ಟೀಸರ್ ಚಿತ್ರವು ಸೂಚಿಸುವಂತೆ ಇದು ನೋಡಲು ಹೆಚ್ಚು ಭಿನ್ನವಾಗಿರುವುದಿಲ್ಲ ಆದರೆ ಒಳಾಂಗಣವು ನಾವು ಇಕ್ಯೂಎಸ್ ನಲ್ಲಿ ನೋಡಿದಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಇ ಮುಂಬರುವ 2021ರ ಐಎಎ ಮ್ಯೂನಿಚ್ ಮೋಟಾರ್ ಶೋನಲ್ಲಿ ಫ್ರಾಂಕ್‌ಫರ್ಟ್ ಮೋಟಾರ್ ಶೋ ಬದಲಿಗೆ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಲಿದೆ.

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಆದರೆ ಅಭಿವೃದ್ಧಿಯು ಕೇವಲ ಇಕ್ಯೂಇಗೆ ಸೀಮಿತವಾಗಿಲ್ಲ. ಮರ್ಸಿಡಿಸ್ ಇಕ್ಯೂಎಸ್ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ಎಎಂಜಿ ಎಡಿಷನ್ ಮತ್ತು ಎಲೆಕ್ಟ್ರಿಕ್ ಮರ್ಸಿಡಿಸ್-ಮೇಬ್ಯಾಕ್ ಎಸ್‍ಯುವಿಯು ಕಾನ್ಸೆಪ್ಟ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ನಂತರ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಸಹ ಸ್ಟ್ಯಾಂಡ್‌ನಲ್ಲಿರುವ ನಿರೀಕ್ಷೆಯಿದೆ, ಮ್ಯೂನಿಚ್ ಮೋಟಾರ್ ಶೋ "ಎಲೆಕ್ಟ್ರಿಫೈಡ್" ಆಗಲಿದೆ ಮತ್ತು ಕೆಲವು ಭವಿಷ್ಯದ ಮಾದರಿಗಳೊಂದಿಗೆ ಭರವಸೆ ನೀಡುತ್ತದೆ. ಟೀಸರ್ ಚಿತ್ರವು ಇಕ್ಯೂಇಯ ಮೂರು ಇನ್-ಡ್ಯಾಶ್ ಡಿಸ್ ಪ್ಲೇಗಳನ್ನು ಒಂದೇ ಗ್ಲಾಸ್ ಪೇನ್ ಅಡಿಯಲ್ಲಿ ಮುಚ್ಚಿರುವುದನ್ನು ತೋರಿಸುತ್ತದೆ,

1,000 ಕಿ.ಮೀ ರೇಂಜ್ ಹೊಂದಿರುವ Mercedes Vision EQXX ಇವಿ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯಾದ ಇಕ್ಯೂಸಿ(EQC) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿತು.ಇದೀಗ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಇಕ್ಯೂಸಿ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿಯ ಮುಂದಿನ ಬ್ಯಾಚ್‌ಗಾಗಿ ಬುಕ್ಕಿಂಗ್ ಸ್ವೀಕರಿಸಲು ಆರಂಭಿಸಿದೆ. ಪ್ರಸ್ತುತ, ಎಲೆಕ್ಟ್ರಿಕ್ ಎಸ್‌ಯುವಿಯು ಭಾರತಕ್ಕೆ ಸಂಪೂರ್ಣ ನಿರ್ಮಿತ ಯುನಿಟ್ (ಸಿಬಿಯು) ಮಾದರಿಯಾಗಿ ಬರುತ್ತಿದೆ. ಇನ್ನು ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣಗೊಂಡ ವೇಳೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

More from DriveSpark

Article Published On: Saturday, November 27, 2021, 19:13 [IST]
English summary
Mercedes benz teased new vision eqxx concept with 1 000 km range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+