ಬುಕ್ಕಿಂಗ್ ಆರಂಭವಾದ ಕೇವಲ 20 ನಿಮಿಷಗಳಲ್ಲಿ MG Astor ಮೊದಲ ಬ್ಯಾಚ್ ಸೋಲ್ಡ್ ಔಟ್
ಎಂಜಿ ಮೋಟಾರ್(MG Motor) ಕಂಪನಿಯು ಹೊಸ ಆಸ್ಟರ್(Astor) ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೊಸ ಕಾರಿನ ಮೊದಲ ಬ್ಯಾಚ್ ಪೂರ್ಣ ಮಾರಾಟಗೊಂಡಿದೆ.

ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಆಸ್ಟರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರಿನ ಬುಕ್ಕಿಂಗ್ ಆರಂಭಿಸಿದ ಕೇವಲ 20 ನಿಮಿಷಗಳಲ್ಲಿ ಮೊದಲ ಬ್ಯಾಚ್‌ನಲ್ಲಿದ್ದ 5 ಸಾವಿರ ಯುನಿಟ್‌ಗೆ ಪೂರ್ಣ ಪ್ರಮಾಣದಲ್ಲಿ ಬುಕ್ಕಿಂಗ್ ದಾಖಲಾಗಿದೆ.

ಹೊಸ ಆಸ್ಟರ್ ಕಾರು ಮಾದರಿಯನ್ನು 2021ರ ಡಿಸೆಂಬರ್ ಕೊನೆಯ ತನಕ 5 ಸಾವಿರ ಯುನಿಟ್ ಮಾರಾಟ ಗುರಿಹೊಂದಿರುವ ಎಂಜಿ ಕಂಪನಿಯು ಮೊದಲ ಬ್ಯಾಚ್ ಪೂರ್ಣ ಪ್ರಮಾಣದಲ್ಲಿ ಮಾರಾಟಗೊಳಿಸುವ ಮೂಲಕ ಇದೀಗ ಇದೀಗ ಎರಡನೇ ಬ್ಯಾಚ್‌ಗೂ ಬುಕ್ಕಿಂಗ್ ಪುನಾರಂಭಿಸಿದೆ.

ಮೊದಲ ಬ್ಯಾಚ್‌ನಲ್ಲಿರುವ 5 ಸಾವಿರ ಯುನಿಟ್‌ಗಳು ಮುಂದಿನ ಜನವರಿ ತನಕ ವಿತರಣೆಗೊಳ್ಳಲಿದ್ದು, 2ನೇ ಬ್ಯಾಚ್‌ನಲ್ಲಿ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕಾರು ವಿತರಣೆಯಾಗಲಿದೆ.

ಆಸಕ್ತ ಗ್ರಾಹಕರು ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಡೀಲರ್ಸ್ ಇಲ್ಲವೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್, ವಿವಿಧ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿದೆ.

ಆಸ್ಟರ್ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ವಿವಿಧ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಸ್ಟೈಲ್, ಸೂಪರ್, ಸ್ಮಾರ್ಟ್, ಸ್ಯಾವಿ ಮತ್ತು ಶಾರ್ಪ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದೆ.

ಹೊಸ ಕಾರಿನಲ್ಲಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಸ್ಟರ್ ಕಾರು ಆಕರ್ಷಕವಾದ ಗ್ರಿಲ್ ಜೊತೆ ಹ್ವಾಕ್ ಐ ಹೆಡ್‌ಲ್ಯಾಂಪ್ಸ್, ಕ್ರೊಮ್ ಸ್ಟಡ್ ಗ್ರಿಲ್, ಸ್ಪ್ಲಿಟ್ ಎಲ್ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಎಕ್ಸಾಸ್ಟ್ ಟ್ರಿಪ್ಸ್, ರೂಫ್ ರೈಲ್ಸ್, ಆಲ್ ಅರೌಂಡ್ ಕ್ಲಾಡಿಂಗ್ ಹೊಂದಿರಲಿದ್ದು, ಕಾರಿನ ಒಳಭಾಗದಲ್ಲಿ 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ಅಡ್ಜೆಸ್ಟ್ ಸೀಟ್, ಡ್ರೈವ್ ಮತ್ತು ಸ್ಪೀರಿಂಗ್ ಮೋಡ್, ಪನೊರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಟೆಡ್ ರಿಯರ್ ವ್ಯೂ ಮಿರರ್ ಸೌಲಭ್ಯವಿವೆ.

ಕ್ಯಾಬಿನ್ ಫೀಚರ್ಸ್ ಹೆಚ್ಚಿಸಲು ಫ್ರಂಟ್ ಅಂಡ್ ರಿಯಲ್ ಆರ್ಮ್ ರೆಸ್ಟ್, ಲೆದರ್ ಇಂಟಿರಿಯರ್, ರಿಯರ್ ಎಸಿ ವೆಂಟ್ಸ್, ಪಿಎಂ 2.5 ಕ್ಯಾಬಿನ್ ಫಿಲ್ಟರ್ ಜೊತೆಗೆ ಹೊಸ ಕಾರಿನ ಕನೆಕ್ಟೆಡ್ ಫೀಚರ್ಸ್‌ಗಳು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಮತ್ತೊಂದು ವಿಶೇಷವೆಂದರೆ ಹೊಸ ಕಾರಿನಲ್ಲಿ ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯ ಜೋಡಿಸಲಾಗಿದ್ದು, ಇದು ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್, ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಕಾರು ಚಾಲನೆಯನ್ನು ಸರಳಗೊಳಿಸುತ್ತದೆ.

ಹೊಸ ಕಾರಿನಲ್ಲಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಆಕ್ಟಿವ್ ಸೇಫ್ಟಿ ಫೀಚರ್ಸ್‌ಗಳಲ್ಲಿ ಎಡಿಎಎಸ್ ತಂತ್ರಜ್ಞಾನವು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸೌಲಭ್ಯವಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್(ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಹಿಲ್ ಡಿಸೆಂಟ್ ಮತ್ತು 360 ಡಿಗ್ರಿ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.


Click it and Unblock the Notifications