ವೆರಿಯೆಂಟ್‌ಗಳಿಗೆ ಅನುಗುಣವಾಗಿ MG Astor ಎಸ್‌ಯುವಿ ಕಾರಿನಲ್ಲಿ ಏನೆಲ್ಲಾ ಹೊಸ ಸೌಲಭ್ಯಗಳಿವೆ?

ಎಂಜಿ ಮೋಟಾರ್(MG Motor) ಕಂಪನಿಯು ತನ್ನ ಹೊಸ ಆಸ್ಟರ್(Astor) ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗಿದ್ದು, ಹೊಸ ಕಾರಿನ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಂಜಿನ್ ಆಯ್ಕೆ ಮತ್ತು ತಾಂತ್ರಿಕ ಸೌಲಭ್ಯಗಳ ಮಾಹಿತಿಯನ್ನು ಇಲ್ಲಿ ತಿಳಿಯೋಣ.

MG Astor ಎಸ್‌ಯುವಿ ವಿಶೇಷತೆಗಳೇನು?

ಆಸ್ಟರ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ನಾಲ್ಕು ವೆರಿಯೆಂಟ್‌ ಮತ್ತು ವಿವಿಧ ಏಳು ಮಾದರಿಗಳು ಖರೀದಿಗೆ ಲಭ್ಯವಿರಲಿವೆ. ವಿವಿಧ ವೆರಿಯೆಂಟ್‌ಗಳಲ್ಲಿರುವ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ವೆರಿಯೆಂಟ್‌ಗಳೊಂದಿಗೆ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿರುವ ಎಂಜಿ ಆಸ್ಟರ್ ಕಾರು ಮಾದರಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಪಡೆದುಕೊಂಡಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಫೀಚರ್ಸ್ ಮತ್ತು ಬೆಲೆ ನಿರ್ಧಾರವಾಗಲಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಆಸ್ಟರ್ ಸ್ಟೈಲ್

ಹೊಸ ಕಾರಿನಲ್ಲಿ ಸ್ಟೈಲ್ ವೆರಿಯೆಂಟ್ ಆರಂಭಿಕ ಮಾದರಿಯಾಗಿದ್ದು, ಇದು 1.5-ಲೀಟರ್ ವಿಟಿಐ-ಟೆಕ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ. 9.80 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಮಾದರಿಯಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಸ್ಟೈಲ್ ಮಾದರಿಯಲ್ಲಿ ಕಂಪನಿಯು ಕ್ರೋಮ್ ಹೊಂದಿರುವ ಫುಲ್ ಎಲ್ಇಡಿ ಹ್ವಾಕ್ಐ ಹೆಡ್‌ಲ್ಯಾಂಪ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಆರ್16 ಸ್ಟೀಲ್ ವ್ಹೀಲ್ ಜೊತೆಗೆ ವ್ಹೀಲ್ ಕವರ್, ಬಾಡಿ ಕಲರ್ ರಿಯರ್ ವ್ಯೂ ಕ್ಯಾಮೆರಾ, ರಿಯರ್ ವ್ಯೂ ಮಿರರ್‌ನಲ್ಲಿಯೇ ಟರ್ನ್ ಇಂಡೀಕೇಟರ್, ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್, ಲೆದರ್ ವ್ಯಾರ್ಪ್ ಸ್ಟೀರಿಂಗ್ ವ್ಹೀಲ್, 3.5 ಇಂಚಿನ ಮಲ್ಟಿ ಕಲರ್ ಮಲ್ಟಿ ಇನ್ಪೋ ಡಿಸ್‌ಪ್ಲೇ, 10.1 ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, 60:40 ಅನುಪಾತದ ಹಿಂಬದಿಯ ಸೀಟುಗಳು, ಹೊಂದಾಣಿಕೆ ಮಾಡಬಹುದಾದ ರಿಯರ್ ಸೀಟ್ ಅಡ್ಜೆಸ್ಟ್ ಸೌಲಭ್ಯಗಳಿವೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಹಾಗೆಯೇ ಫಾಲೋ ಮಿ ಹೋಂ ಹೆಡ್‌ಲ್ಯಾಂಪ್, ಆಟೋ ಎಸಿ, ಪಿಎಂ 2.5 ಫಿಲ್ಟರ್, ರಿಯರ್ ಎಸಿ, ಎಲೆಕ್ಟ್ರಾನಿಕ್ ಪವರ್ ಮತ್ತು ಮೋಡ್ ಅಡ್ಜಸ್ಟ್, ಟಿಲ್ಟ್ ಸ್ಟೀರಿಂಗ್, ಆಲ್ ಪವರ್ ವಿಂಡೋ, ಡ್ರೈವರ್ ವಿಂಡೋ ಒನ್ ಟಚ್ ಆಟೋ ಡೌನ್, ರಿಯರ್ ವೈಪರ್ ಮತ್ತು ವಾಷರ್, ಪವರ್ಡ್ ರಿಯರ್ ವ್ಯೂ ಮಿರರ್, ಡ್ಯಯಲ್ ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಆಕ್ಟಿವ್ ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ನೀಡಲಾಗಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಇದರೊಂದಿಗೆ ಹಿಲ್ ಡಿಸೆಂಟ್ ಕಂಟ್ರೋಲ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, ಎಮೆರ್ಜೆನ್ಸಿ ಫ್ಯೂಲ್ ಕಟ್ಆಫ್, ರಿಯರ್ ಡಿಫಾಗರ್ ಸೌಲಭ್ಯವಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಆಸ್ಟರ್ ಸೂಪರ್

ಹೊಸ ಕಾರಿನ ಸೂಪರ್ ವೆರಿಯೆಂಟ್‌ನಲ್ಲಿ ಕಂಪನಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಯನ್ನು ನೀಡಲಾಗಿದ್ದು, ಇದು ಎಕ್ಸ್‌ಶೋರೂಂ ಪ್ರಕಾರ ರೂ. 11.28 ಲಕ್ಷದಿಂದ ರೂ. 12.68 ಲಕ್ಷ ಬೆಲೆ ಹೊಂದಿದೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಸೂಪರ್ ವೆರಿಯೆಂಟ್‌ನಲ್ಲಿ ಕಂಪನಿಯು ಸ್ಟೈಲ್ ವೆರಿಯೆಂಟ್‌ನಲ್ಲಿರುವ ಕೆಲವು ಪ್ರಮುಖ ತಾಂತ್ರಿಕ ಸೌಲಭ್ಯಗಳೊಂದಿಗೆ ಆರ್17 ಅಲಾಯ್ ವ್ಹೀಲ್, ಸ್ಯಾಟಿನ್ ಸಿಲ್ವರ್ ರೂಫ್ ರೈಲ್ಸ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಇಂಟಿರಿಯರ್ ಮ್ಯಾಪ್ ಲ್ಯಾಂಪ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಕಾರ್ನರಿಂಗ್ ಅಸಿಸ್ಟ್ ಸೌಲಭ್ಯಗಳಿವೆ.

MG Astor ಎಸ್‌ಯುವಿ ವಿಶೇಷತೆಗಳೇನು?

ಆಸ್ಟರ್ ಸ್ಮಾರ್ಟ್

ಹೊಸ ಕಾರಿನ ಸ್ಮಾರ್ಟ್ ಆವೃತ್ತಿಯಲ್ಲಿ ಎಂಜಿ ಕಂಪನಿಯು 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಸ್ಮಾರ್ಟ್ ವೆರಿಯೆಂಟ್ ಪ್ರಮುಖ ಮೂರು ಮಾದರಿಗಳೊಂದಿಗೆ ಆರಂಭಿಕವಾಗಿ ರೂ. 12.98 ಲಕ್ಷ, ರೂ. 14.18 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 15.88 ಲಕ್ಷ ಬೆಲೆ ಹೊಂದಿದೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಸ್ಮಾರ್ಟ್ ಮಾದರಿಯಲ್ಲಿ ಎಂಜಿ ಕಂಪನಿಯು ಸ್ಟೈಲ್ ಮತ್ತು ಸೂಪರ್ ಮಾದರಿಗಳಲ್ಲಿರುವ ಕೆಲವು ಪ್ರಮುಖ ತಾಂತ್ರಿಕ ಸೌಲಭ್ಯಗಳೊಂದಿಗೆ ಫ್ರಂಟ್ ಮತ್ತು ರಿಯರ್ ಬಂಪರ್ ಸ್ಕೀಡ್ ಪ್ಲೇಟ್(ಗ್ಲಾಸಿ ಬ್ಲ್ಯಾಕ್ ಫೀನಿಶ್), ಡೋರ್ ಗಾರ್ನಿಶ್, ಸ್ಪೋರ್ಟಿ ಬ್ಲ್ಯಾಕ್ ಮತ್ತು ಬ್ರಿಟ್ ಡೈನಾಮಿಕ್ ಬ್ಯಾಡ್ಜ್ ನೀಡಲಾಗುತ್ತದೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಹಾಗೆಯೇ ಸ್ಮಾರ್ಟ್ ಮಾದರಿಯಲ್ಲಿ ಫುಲ್ ಡಿಜಿಟಲ್ ಕ್ಲಸ್ಟರ್ ಜೊತೆ 7 ಇಂಚಿನ ಎಲ್‌ಸಿಡಿ ಸ್ಕೀನ್, ಐ-ಸ್ಮಾರ್ಟ್ ಕನೆಕ್ಟ್ ಕಾರ್ ಟೆಕ್ನಾಲಜಿ, ಇಂಟ್ರಾಕ್ಟಿವ್ ಎಮೊಜಿ, ಡಿಜಿಟಲ್ ಕೀ, ಬ್ಲೂಟೂತ್, ಮೈಮ್ಯಾಪ್ ಇಂಡಿಯಾ, ಪಾರ್ಕ್ ಪ್ಲಸ್, ಜಿಯೋ ಸಾವನ್ ಆ್ಯಪ್, ರಿಮೋಟ್ ಕಾರ್ ಕಂಟ್ರೋಲ್, ಆ್ಯಂಟಿ ಥೇಪ್ಛ್ ಇಮ್‌ಮೊಬಿಲೈಷನ್, ರಿಮೋಟ್ ಎಸಿ, ರಿಮೋಟ್ ಡೋರ್, ಫೈಂಡ್ ಮೈ ಕಾರ್, ಐ ಸ್ಮಾರ್ಟ್ ಆ್ಯಪ್, ಜಿಯೋಫೆನ್ಸ್, ಆನ್‌ಲೈನ್ ನ್ಯಾವಿಗೇಷನ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಟೈರ್ ಪ್ರೆಷರ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಎಂಟ್ರಿ, ಆಟೋ ಹೆಡ್‌ಲ್ಯಾಂಪ್, 4 ಏರ್‌ಬ್ಯಾಗ್, ವ್ಯಾನಿಟಿ ಮಿರರ್, ಸ್ಪೀಡ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳಿವೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಆಸ್ಟರ್ ಶಾರ್ಪ್

ಹೊಸ ಕಾರಿನಲ್ಲಿ ಶಾರ್ಪ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿದ್ದು, ಶಾರ್ಪ್ ವೆರಿಯೆಂಟ್‌ನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಶಾರ್ಪ್ ವೆರಿಯೆಂಟ್ ಪ್ರಮುಖ ಮೂರು ಮಾದರಿಗಳೊಂದಿಗೆ ಆರಂಭಿಕವಾಗಿ ರೂ. 13.95 ಲಕ್ಷ, ರೂ. 14.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಶಾರ್ಪ್ ವೆರಿಯೆಂಟ್‌ನಲ್ಲಿ ಎಂಜಿ ಕಂಪನಿಯು ಮೊದಲ ಮೂರು ವೆರಿಯೆಂಟ್‌ಗಳಲ್ಲಿರುವ ಕೆಲವು ಪ್ರಮುಖ ತಾಂತ್ರಿಕ ಸೌಲಭ್ಯಗಳೊಂದಿಗೆ ಪನೊರಮಿಕ್ ಸನ್‌ರೂಫ್, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಆಸನಗಳು, ರೈನ್ ಸೆನ್ಸಿಂಗ್ ವೈಪರ್ಸ್, 360 ಡಿಗ್ರಿ ಕ್ಯಾಮೆರಾ ಜೊತೆಗೆ ಅಟೋನಮಸ್ ಲೆವಲ್ 2 ಪ್ಯಾಕೇಜ್‌ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೆಡ್‌ಲ್ಯಾಂಪ್ ಕಂಟ್ರೋಲ್, ಲೈನ್ ಡಿಪಾರ್ಚರ್ ವಾರ್ನಿಂಗ್, ಲೈನ್ ಡಿಪಾರ್ಚರ್ ಪ್ರಿವೆಷನ್, ಲೈನ್ ಕೀಪ್ ಅಸಿಸ್ಟ್ ಸೌಲಭ್ಯಗಳಿವೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಇದಲ್ಲದೇ ಹೈ ಎಂಡ್ ಮಾದರಿಗಾಗಿ ಫಾರ್ವಡ್ ಕೂಲಿಷನ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಸ್ಪೀಡ್ ಅಸಿಸ್ಟ್ ಸಿಸ್ಟಂ ಇನ್ಫಾರ್ಮೆಷನ್ ಮೋಡ್, ಸ್ಪೀಡ್ ಅಸಿಸ್ಟ್ ಸಿಸ್ಟಂ, ಬ್ಲೈಡ್ ಸ್ಪಾಟ್, ಲೈನ್ ಚೆಂಜ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸಿಸ್ಟಂ ಸೌಲಭ್ಯಗಳಿವೆ.

ಎಂಜಿ ಆಸ್ಟರ್ ವಿಶೇಷತೆಗಳೇನು?

ಇನ್ನು ಹೊಸ ಕಾರು 4323 ಎಂಎಂ ಉದ್ದ, 1650 ಎಂಎಂ ಎತ್ತರ, 1809 ಎಂಎಂ ಅಗಲ ಹೊಂದಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Mg astor suv variants wise explained
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X