ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಸೈಕ್ ಮೋಟಾರ್ಸ್ ಜೊತೆಗೂಡಿ ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಈಗಾಗಲೇ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ ಕಾರು ಮಾದರಿಯೊಂದು ಬಿಡುಗಡೆಗೊಳಿಸಲು ಯೋಜನೆಯಲ್ಲಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಬಿಡುಗಡೆಗೊಳಿಸಲು ನಿರ್ಧರಿಸಿರುವ ಸೈಬರ್ಸ್ಟರ್ ಸ್ಪೋರ್ಟ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಹೊಂದಿದ್ದು, ಕಂಪನಿಯು ಕಳೆದ ತಿಂಗಳು 31ರಂದು ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿತ್ತು. ಇದೀಗ ಉತ್ಪಾದನಾ ಮಾದರಿಯ ಅಭಿವೃದ್ದಿಗೆ ಚಾಲನೆ ನೀಡಿರುವ ಎಂಜಿ ಕಂಪನಿಯು ಸೀಮಿತ ಸಂಖ್ಯೆಯಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಹೊಸ ಕಾರಿನ ವಿನ್ಯಾಸಗಳ ಕುರಿತಾಗಿ ಟೀಸರ್ ಚಿತ್ರಗಳನ್ನು ಮಾತ್ರ ಹಂಚಿಕೊಂಡಿರುವ ಎಂಜಿ ಮೋಟಾರ್ ಕಂಪನಿಯು ಉತ್ಪಾದನಾ ಆವೃತ್ತಿಯ ಅನಾವರಣದೊಂದಿಗೆ ಹೊಸ ಕಾರಿನ ಮತ್ತಷ್ಟು ಮಾಹಿತಿಗಳನ್ನು ಬಹಿರಂಗಪಡಿಸಲಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಟು ಸೀಟರ್ ಸೌಲಭ್ಯದ ಸೈಬರ್ಸ್ಟರ್ ಸ್ಪೋರ್ಟ್ ಸೂಪರ್ ಎಲೆಕ್ಟ್ರಿಕ್ ಕಾರು ಮಾದರಿಯು ವಿಶೇಷವಾಗಿ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಪ್ರತಿ ಚಾರ್ಜ್‌ಗೆ 800 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಇದಕ್ಕಾಗಿ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಲಿದ್ದು, ಪ್ರತಿ ಚಕ್ರಕ್ಕೂ ಪ್ರತ್ಯೇಕ ಮೋಟಾರ್ ಶಕ್ತಿ ಪೂರೈಕೆ ತಂತ್ರಜ್ಞಾನ ಹೊಂದಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಸೈಬರ್ಸ್ಟರ್ ಕಾರು ಮಾದರಿಯು ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಬಲ್ಲ ಶಕ್ತಿ ಹೊಂದಿದ್ದು, ಚಾಲನೆಗೆ ಪೂರಕವಾದ ಹಲವಾರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಪರ್ಫಾಮೆನ್ಸ್‌ಗೆ ಪೂರಕವಾಗಿ ಏರ್ ಡೈನಾಮಿಕ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು ಮಾದರಿಯು 5ಜಿ ಕಾರ್ ಕೆನೆಕ್ಟ್ ಟೆಕ್ನಾಲಜಿಯೊಂದಿಗೆ ಹಲವಾರು ಎಲೆಕ್ಟ್ರಿಕ್ ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಕಾರನ್ನು ಅನಾವರಣಗೊಳಿಸಿ ಮುಂದಿನ ಕೆಲವೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಸದ್ಯ ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಎಂಜಿ ಕಂಪನಿಯು ಬ್ಯಾಟರಿ ತಂತ್ರಜ್ಞಾನ ಸುಧಾರಣೆ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಹೆಚ್ಚಿಸುತ್ತಿದ್ದು, ಹೊಸ ಸೈಬರ್ಸ್ಟರ್ ಕಾರು ಮಾದರಿಯು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಎನ್ನಲಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಹೊಸ ಸೈಬರ್ಸ್ಟರ್ ಸ್ಪೋರ್ಟ್ ಕಾರು ಮಾದರಿಯನ್ನು ಸದ್ಯಕ್ಕೆ ಯುರೋಪ್ ಮಾರುಕಟ್ಟೆಗಳಿಗಾಗಿ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಲಿದ್ದು, ಮೈಲೇಜ್ ಮತ್ತು ಪರ್ಫಾಮೆನ್ಸ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

ಇನ್ನು ಜಗತ್ತಿನಾದ್ಯಂತ ಇಂಧನಗಳ ಬೆಲೆ ಹೆಚ್ಚಳ ಮತ್ತು ವಾಯುಮಾಲಿನ್ಯದ ಕಾರಣಕ್ಕೆ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ವಿನೂತನ ಮಾದರಿಯ ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸೈಬರ್ಸ್ಟರ್ ಕಾನ್ಸೆಪ್ಟ್ ಕಾರು ಮಾದರಿಯ ಉತ್ಪಾದನಾ ಆವೃತ್ತಿಯ ಅನಾವರಣಕ್ಕೆ ಸಿದ್ದವಾದ ಎಂಜಿ ಮೋಟಾರ್

2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಪ್ರಮುಖ ರಾಷ್ಟ್ರಗಳಿಂದ ಮಹತ್ವದ ನಿರ್ಣಯ ಕೈಗೊಂಡಿರುವ ಪರಿಣಾಮ ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

Most Read Articles

Kannada
English summary
MG Cyberster Concept To Enter Production. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X