ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಭಾರತದಲ್ಲಿ ಎಂಜಿ ಮೋಟಾರ್ ನಿರ್ಮಾಣದ ನಾಲ್ಕನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಗ್ಲೊಸ್ಟರ್ ಎಸ್‌ಯುವಿ ಕಾರು ಬಿಡುಗಡೆಯಾದ ಆರಂಭದಲ್ಲೇ ಭರ್ಜರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದೀಗ ಹೊಸ ಕಾರು ಖರೀದಿಗಾಗಿ 3ನೇ ಸುತ್ತಿನ ಬುಕ್ಕಿಂಗ್ ಪ್ರಕ್ರಿಯೆಯೊಂದಿಗೆ ಬೆಲೆ ಹೆಚ್ಚಳ ಮಾಡಲಾಗಿದೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಗ್ಲೊಸ್ಟರ್ ಕಾರು ಖರೀದಿಗಾಗಿ ಹಂತ ಹಂತವಾಗಿ ಬುಕ್ಕಿಂಗ್ ಪ್ರಕ್ರಿಯೆ ನಡೆಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಬರೋಬ್ಬರಿ 4 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಸ್ವಿಕರಿಸಿದ್ದು, ಬುಕ್ಕಿಂಗ್ ಆಧಾರದ ಮೇಲೆ ಗ್ರಾಹಕರಿಗೆ ಈಗಾಗಲೇ ಹೊಸ ಕಾರಿನ ವಿತರಣೆಯನ್ನು ಆರಂಭಿಸಲಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 35.38 ಲಕ್ಷ ಬೆಲೆ ಹೊಂದಿದ್ದ ಗ್ಲೊಸ್ಟರ್ ಕಾರು ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಬೆಲೆ ಹೆಚ್ಚಳ ಪಡೆದುಕೊಂಡಿತ್ತು.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಇದೀಗ ವಾಹನಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಿಸಿದ್ದು, ಗ್ಲೊಸ್ಟರ್ ಎಸ್‌ಯುವಿ ಮಾದರಿಯು ಸಹ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 50 ಸಾವಿರದಿಂದ ರೂ. 80 ಸಾವಿರದಷ್ಟು ದುಬಾರಿಯಾಗಿದೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಬೆಲೆ ಹೆಚ್ಚಳದ ನಂತರ ಗ್ಲೊಸ್ಟರ್ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.36.38 ಲಕ್ಷಕ್ಕೆ ನಿಗದಿಮಾಡಿದ್ದು, ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿರುವ ಗ್ಲೊಸ್ಟರ್ ಕಾರು ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸೌಲಭ್ಯ ಹೊಂದಿದ್ದು, ಇವುಗಳ ಹೊರತಾಗಿಯೂ ಈ ಎಸ್‌ಯುವಿಯಲ್ಲಿ ಸಾಕಷ್ಟು ಪ್ರೀಮಿಯಂ ಫೀಚರ್ಸ್ ಹಾಗೂ ಎಕ್ವಿಪ್‌ಮೆಂಟ್‌ಗಳಿವೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹೊರಭಾಗದಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳಿವೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಒಳಭಾಗದಲ್ಲಿ ಲೆದರ್ ಸೀಟ್, ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್, ಆ್ಯಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, 8 ಇಂಚಿನ ಎಂಐಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌, ತ್ರೀ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರನ್ನಿಂಗ್ ಟೇಲ್‌ಗೇಟ್, ಹಿಟ್/ಕೂಲ್ ಮಾಡಬಹುದಾದ ಮುಂಭಾಗದ ಆಸನಗಳು, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ವೇ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಫ್ರಂಟ್ ಸೀಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಹಾಗೆಯೇ ಐ-ಸ್ಮಾರ್ಟ್ ತಂತ್ರಜ್ಞಾನವು ಚಾಲಕನ ಸ್ಮಾರ್ಟ್‌ಫೋನ್ ಮೂಲಕ ಅಪ್ಲಿಕೇಶನ್ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದು ವಾಹನದ ಸ್ಥಿತಿ, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋಫೆನ್ಸಿಂಗ್, ಕಾರಿನ ವಿವಿಧ ಫೀಚರ್ ಗಳ ರಿಮೋಟ್ ಫಂಕ್ಷನ್ ಸೇರಿದಂತೆ ಒಟ್ಟು 57 ಹೆಚ್ಚುವರಿ ಫೀಚರ್ ಗಳನ್ನು ನೀಡುತ್ತದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಈ ಮೂಲಕ ಕಾರು ಪ್ರಯಾಣವನ್ನು ಆರಾಮದಾಯಕ ಮತ್ತು ಸುರಕ್ಷಿತವಾಗಿಸುವ ಹೊಸ ಗ್ಲೊಸ್ಟರ್ ಎಸ್‌ಯುವಿ ಕಾರು 4,985-ಎಂ ಉದ್ದ, 1,926-ಎಂಎಂ ಅಗಲ, 1,867-ಎಂಎಂ ಎತ್ತರ ಹಾಗೂ 2,950-ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದ್ದು, ಸೂಪರ್ ಹಾಗೂ ಸ್ಮಾರ್ಟ್ ಮಾದರಿಗಳು ಒಂದೇ ಟರ್ಬೋ ಚಾರ್ಜರ್ ಅನ್ನು ಹೊಂದಿದ್ದರೆ ಟಾಪ್-ಎಂಡ್ ಮಾದರಿಗಳಾದ ಶಾರ್ಪ್ ಹಾಗೂ ಸ್ಯಾವಿಯಲ್ಲಿ ಟ್ವಿನ್-ಟರ್ಬೊ ಸೆಟಪ್ ಅಳವಡಿಸಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗ್ಲೊಸ್ಟರ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಎಂಜಿ ಮೋಟಾರ್

ಬೇಸ್ ಮಾದರಿಗಳಲ್ಲಿರುವ 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 160-ಬಿಹೆಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ, ಟಾಪ್-ಎಂಡ್ ಮಾದರಿಯಲ್ಲಿರುವ 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 216-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
MG Gloster Prices Hiked Across Select Variants. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X