ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡುತ್ತಿವೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕೋವಿಡ್ 2ನೇ ಅಲೆಯಿಂದಾಗಿ ಇಡೀ ದೇಶವೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಆರ್ಥಿಕ ಚಟುವಟಿಕೆಗಳಿಲ್ಲದೆ ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಾಮಾಜಿಕ ಜವಾಬ್ದಾರಿ ಅಡಿ ಹಲವು ವಾಹನ ತಯಾಕರ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ರೀತಿಯ ಸಹಕಾರ ಘೋಷಿಸಿವೆ. ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕವಾಗಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು ಇದೀಗ ಕೇಂದ್ರ ಸಚಿವರ ಸೂಚನೆ ಮೇರೆಗೆ ವೈದ್ಯಕೀಯ ಸೇವೆಗಳಿಗೆ ಮತ್ತೊಂದು ಸಹಕಾರ ನೀಡಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ನಾಗಪುರ ಮತ್ತು ಅಮರಾವತಿ ವಿಭಾಗಗಳನ್ನು ಒಳಗೊಂಡ ವಿದರ್ಭದಲ್ಲಿ ಆಂಬ್ಯುಲೆನ್ಸ್ ಕೊರತೆ ನಿಗಿಸಲು ಎಂಜಿ ಮೋಟಾರ್ ಮತ್ತು ಪೆಟಿಎಂ ಕಂಪನಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವಿ ಮೇರೆಗೆ ತುರ್ತಾಗಿ ಸುಮಾರು 8 ಕಾರ್ ಆಂಬ್ಯುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಿವೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ನಿತಿನ್ ಗಡ್ಕರಿಯವರು ಎಂಜಿ ಮೋಟಾರ್ ಮತ್ತು ಪೆಟಿಎಂ ಕಂಪನಿಗಳಿಗೆ ಖುದ್ದಾಗಿ ಕರೆ ಮಾಡಿ ಮನವಿ ಮಾಡಿದ್ದು, ನಾಗಪುರ ಮತ್ತು ಅಮರಾವತಿ ವಿಭಾಗಗಳಲ್ಲಿ ಸುಮಾರು 100 ಕಾರ್ ಆ್ಯಂಬುಲೆನ್ಸ್ ನಿಯೋಜನೆಗಾಗಿ ಮನವಿ ಮಾಡಿದ್ದಾರೆ. ಸಚಿವರ ಮನವಿಗೆ ತುರ್ತಾಗಿ ಸ್ಪಂದಿಸಿದ ಎಂಜಿ ಮೋಟಾರ್ ಕಂಪನಿಯು ತಕ್ಷಣಕ್ಕೆ ಲಭ್ಯವಿದ್ದ 8 ಕಾರ್ ಆಂಬ್ಯುಲೆನ್ಸ್‌ಗಳನ್ನು ನಿಯೋಜನೆಸಿದೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಮುಂದಿನ ಕೆಲವೇ ವಾರಗಳಲ್ಲಿ ಸಚಿವರ ಸೂಚಿಸಿರುವ 100 ಕಾರ್ ಆಂಬ್ಯುಲೆನ್ಸ್‌ಗಳನ್ನು ಅಗತ್ಯವಿರುವ ಎಲ್ಲಾ ಕಡೆಗಳಲ್ಲೂ ನಿಯೋಜಿಸುವುದಾಗಿ ಭರವಸೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ನಿನ್ನೆಯಷ್ಟೇ ಸರ್ಕಾರಿ ಆಸ್ಪತ್ರೆಗಳ ಬೆಡ್ ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 200 ಗುಣಮಟ್ಟದ ಹಾಸಿಗೆಗಳನ್ನು ದೇಣಿಗೆಯಾಗಿ ನೀಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕಳೆದ ವರ್ಷವು ಸಹ ಕೋವಿಡ್ ಹೆಚ್ಚಳದ ಸಂದರ್ಭದಲ್ಲಿ ಕಾರು ಉತ್ಪಾದನೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಮಾಕ್ಸ್ ಕಂಪನಿಯ ವೆಂಟೆಲೆಟರ್ ಉತ್ಪಾದನೆಯ ಹೆಚ್ಚಳಕ್ಕೂ ಸ್ಥಳಾವಕಾಶ ಒದಗಿಸಿದೆ.

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಜೊತೆಗೆ ಎಂಜಿ ಮೋಟಾರ್ ಕಂಪನಿಯು ದೇಶಾದ್ಯಂತ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಕರೋನಾ ವಾರಿಯರ್ಸ್‌ಗೆ ಯಾವುದೇ ತೊಂದರೆಯಾಗದಂತೆ ನಿರಂತವಾಗಿ ವೆಹಿಕಲ್ ಸ್ಯಾನಿಟೈಜ್ ಸೌಲಭ್ಯವನ್ನು ಉಚಿತವಾಗಿ ಒದಗಿಸುತ್ತಿದ್ದು, ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಸಮುದಾಯದ ಸೇವೆಗೆ ಜೊತೆಯಾಗಿರುವ ಎಂಜಿ ಮೋಟಾರ್ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕೇಂದ್ರ ಸಚಿವರ ಮನವಿ ಮೇರೆಗೆ ತುರ್ತಾಗಿ 8 ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಹಲವಾರು ವಾಹನ ತಯಾಕರ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೆಲವು ಕಂಪನಿಗಳು ವೈದ್ಯಕೀಯ ಸೇವೆಗಳಿಗೆ ಸಹಕಾರ ನೀಡಿದ್ದಲ್ಲಿ ಇನ್ನು ಕೆಲವು ಕಂಪನಿಗಳು ಹಣಕಾಸಿನ ನೆರವು ಒದಗಿಸುತ್ತಿವೆ.

Article Published On: Saturday, May 15, 2021, 21:50 [IST]
English summary
MG has immediately delivered 8 units of the Ambulance to Nagpur local authorities. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+