ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಹೆಕ್ಟರ್ ಮಾದರಿಯು ಮಿಡ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಹೆಕ್ಟರ್ ಬಳಿಕ ಎಂಜಿ ಕಂಪನಿಯು ತನ್ನ ಇತರ ಜನಪ್ರಿಯ ಎಸ್‍ಯುವಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಎಂಜಿ ತನ್ನ ಹೆಕ್ಟರ್ ಎಸ್‍ಯುವಿಯ ಬಳಿಕ ಭಾರತದಲ್ಲಿ ತನ್ನ ಪೋರ್ಟ್ಫೋಲಿಯೊದಲ್ಲಿರುವ ಝಡ್ಎಸ್ ಇವಿ, ಹೆಕ್ಟರ್ ಪ್ಲಸ್ ಮತ್ತು ಗ್ಲೋಸ್ಟರ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಿದರು. ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು 2020ರ ಡಿಸೆಂಬರ್ ತಿಂಗಳ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, 2020 ಡಿಸೆಂಬರ್ ತಿಂಗಳಲ್ಲಿ ಎಂಜಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 4,010 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ವಾರ್ಷಿಕ ಕಾರು ಮಾರಾಟದಲ್ಲಿ ಹೋಲಿಕೆಯಲ್ಲಿ ಶೇ.33 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಎಂಜಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಕ್ಟರ್ ಎಸ್‍ಯುವಿಯ 3430 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಇನ್ನು 2019ರ ಮಾರಾಟಕ್ಕೆ ಹೋಲಿಸಿದರೆ 2020ರಲ್ಲಿ ಒಟ್ಟಾರೆ ಮಾರಾಟವು ಶೇ.77 ರಷ್ಟು ಏರಿಕೆಯಾಗಿದೆ ಎಂದು ಎಂಜಿ ಮೋಟಾರ್ ಇಂಡಿಯಾ ಪ್ರಕಟಿಸಿದೆ. ಎಂಜಿ ಕಂಪನಿಯ ಹೆಕ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿಂದ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಾಕೇಶ್ ಸಿದಾನಾ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಉತ್ತಮ ಬೆಳವಣಿಗೆಯನ್ನು ನಾವು ಸಾಧಿಸುತ್ತಿದ್ದೇವೆ. ಹೊಸ ವರ್ಷದಿಂದ ಎಂಜಿ ಕಾರು ಮಾರಾಟದ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿದರು.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಎಂಜಿ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಎಂಜಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಹಲವು ಹೊಸ ಮಾದರಿಗಳನ್ನು ಕೂಡ ಪರಿಚಯಿಸಲಿದೆ.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಹೊಸ ಎಂಜಿ ಗ್ಲೋಸ್ಟರ್ ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಅಲ್ಟುರಾಸ್ ಜಿ 4, ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಇನ್ನು ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾಗಿ ಜೆಡ್ಎಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದರು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದರಿಂದ ಜೆಡ್ಎಸ್ ಎಲೆಕ್ಟ್ರಿಕ್ ಜೊತೆಗೆ ಜೆಡ್ಎಸ್ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ಎಂಜಿ ಸಜ್ಜಾಗುತ್ತಿದೆ.

ಕಾರು ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ತನ್ನ ಎಲ್ಲಾ ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯ ಗ್ರಾಹಕರಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಎಂಜಿ ಮಾರಾಟದಲ್ಲಿ ಈಗ ತಿಂಗಳಿಗೊಮ್ಮೆ ಉತ್ತಮ ಚೇತರಿಕೆಯನ್ನು ಕಾಣುತ್ತಿದೆ.

Article Published On: Friday, January 1, 2021, 20:06 [IST]
English summary
Car Sales Report For December 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+