ಸರ್ಕಾರಿ ಆಸ್ಪತ್ರೆಗಳಿಗಾಗಿ ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡುತ್ತಿವೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಕೋವಿಡ್ 2ನೇ ಅಲೆಯಿಂದಾಗಿ ಇಡೀ ದೇಶವೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಆರ್ಥಿಕ ಚಟುವಟಿಕೆಗಳಿಲ್ಲದೆ ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಾಮಾಜಿಕ ಜವಾಬ್ದಾರಿ ಅಡಿ ಹಲವು ವಾಹನ ತಯಾಕರ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ರೀತಿಯ ಸಹಕಾರ ಘೋಷಿಸಿವೆ. ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ವೈದಕೀಯ ಸೇವೆಗಳಿಗೆ ಸಹಕಾರ ನೀಡುತ್ತಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು ಇದೀಗ ಕೇಂದ್ರ ಸಚಿವರ ಸೂಚನೆ ಮೇರೆಗೆ ವೈದ್ಯಕೀಯ ಸೇವೆಗಳಿಗೆ ಮತ್ತೊಂದು ಸಹಕಾರ ನೀಡಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ನಾಗಪುರ ಮತ್ತು ಅಮರಾವತಿ ವಿಭಾಗಗಳನ್ನು ಒಳಗೊಂಡ ವಿದರ್ಭದಲ್ಲಿ ಆಂಬ್ಯುಲೆನ್ಸ್ ಕೊರತೆ ನಿಗಿಸಲು ಎಂಜಿ ಮೋಟಾರ್ ಮತ್ತು ಪೆಟಿಎಂ ಕಂಪನಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವಿ ಮೇರೆಗೆ ತುರ್ತಾಗಿ ಸುಮಾರು 8 ಕಾರ್ ಆಂಬ್ಯುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಿವೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಹೆಕ್ಟರ್ ಆ್ಯಂಬುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಿಗಾಗಿ ನಿಯೋಜಿಸಲಾಗಿದ್ದು, 3ನೇ ಅಲೆಯ ಭೀತಿಯಿಂದಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ವಿವಿಧ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ಆಟೋ ಕಂಪನಿಗಳು ಸಹ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೆಲವು ಕಂಪನಿಗಳು ವೈದ್ಯಕೀಯ ಸೇವೆಗಳಿಗೆ ಸಹಕಾರ ನೀಡಿದ್ದಲ್ಲಿ ಇನ್ನು ಕೆಲವು ಕಂಪನಿಗಳು ಹಣಕಾಸಿನ ನೆರವು ಒದಗಿಸುತ್ತಿವೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಕೈಗೊಂಡಿರುವ ಎಂಜಿ ಮೋಟಾರ್ ಕಂಪನಿಯು ಇತ್ತೀಚೆಗೆ ಬೆಡ್ ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 200 ಗುಣಮಟ್ಟದ ಹಾಸಿಗೆಗಳನ್ನು ದೇಣಿಗೆಯಾಗಿ ನೀಡಿತ್ತು.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಕಳೆದ ವರ್ಷವು ಸಹ ಕೋವಿಡ್ ಹೆಚ್ಚಳದ ಸಂದರ್ಭದಲ್ಲಿ ಕಾರು ಉತ್ಪಾದನೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಮಾಕ್ಸ್ ಕಂಪನಿಯ ವೆಂಟೆಲೆಟರ್ ಉತ್ಪಾದನೆಯ ಹೆಚ್ಚಳಕ್ಕೂ ಸ್ಥಳಾವಕಾಶ ಒದಗಿಸಿದೆ.

ಎಂಟು ಹೆಕ್ಟರ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಎಂಜಿ ಮೋಟಾರ್

ಜೊತೆಗೆ ಎಂಜಿ ಮೋಟಾರ್ ಕಂಪನಿಯು ದೇಶಾದ್ಯಂತ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಕರೋನಾ ವಾರಿಯರ್ಸ್‌ಗೆ ಯಾವುದೇ ತೊಂದರೆಯಾಗದಂತೆ ನಿರಂತವಾಗಿ ವೆಹಿಕಲ್ ಸ್ಯಾನಿಟೈಜ್ ಸೌಲಭ್ಯವನ್ನು ಉಚಿತವಾಗಿ ಒದಗಿಸುತ್ತಿದ್ದು, ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಸಮುದಾಯದ ಸೇವೆಗೆ ಜೊತೆಯಾಗಿರುವ ಎಂಜಿ ಮೋಟಾರ್ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Most Read Articles

Kannada
English summary
MG Motor India Donates 8 Hector Ambulances. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X