ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್, ಕರ್ಫ್ಯೂ ವಿಧಿಸಲಾಗುತ್ತಿದ್ದು, ವೈಸರ್ ಭೀತಿ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸರಿಸುತ್ತಿವೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಅದರಲ್ಲೂ ತೀವ್ರ ಉಸಿರಾಟದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಆಕ್ಸಿಜನ್ ಕೊರತೆಯು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಉತ್ಪಾದನಾ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಮಟ್ಟದ ಬೇಡಿಕೆಯು ಹರಿದುಬರುತ್ತಿರುವುದು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಹೀಗಾಗಿ ಹೆಚ್ಚಿನ ಮಟ್ಟದ ಆಕ್ಸಿಜನ್ ಪೂರೈಕೆ ಮಾಡಲು ಪರದಾಡುತ್ತಿರುವ ಆಕ್ಸಿಜನ್ ಕಂಪನಿಗಳು ಸಾಮಾರ್ಥ್ಯ ಮೀರಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಕೆಲವು ಆಕ್ಸಿಜನ್ ಉತ್ಪಾದನಾ ವಿವಿಧ ಕಂಪನಿಗಳ ಜೊತೆಗೂಡಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತೆರೆಯುತ್ತಿವೆ. ಇತ್ತೀಚೆಗೆ ಗುಜರಾತ್ ಮೂಲದ ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿಯು ಕೂಡಾ ಎಂಜಿ ಮೋಟಾರ್ ಜೊತೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ವಡೋದರದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಕಾರು ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಪರಿಸ್ಥಿತಿಗೆ ಅನುಗುಣವಾಗಿ ಕಾರು ಉತ್ಪಾದನಾ ಘಟಕದಲ್ಲೇ ಆಕ್ಸಿಜನ್ ಉತ್ಪಾದನೆಯನಯನ್ನು ಹೆಚ್ಚಿಸಲಾಗಿದ್ದು, ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿಯು ತನ್ನ ಒಟ್ಟು ಉತ್ಪದನಾ ಸಾಮರ್ಥ್ಯದ ಆಕ್ಸಿಜನ್ ಪ್ರಮಾಣದಲ್ಲಿ ಶೇ.31ರಷ್ಟು ಎಂಜಿ ಘಟಕದಲ್ಲೇ ಉತ್ಪಾದನೆ ಮಾಡುತ್ತಿದೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ವೈದ್ಯಕೀಯ ಅಗತ್ಯತೆಗೆ ಕಾರು ಉತ್ಪಾದನಾ ಘಟಕವನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಎಂಜಿ ಮೋಟಾರ್ ಹೆಮ್ಮೆ ವ್ಯಕ್ತಪಡಿಸಿದ್ದು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿವೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು ಬೆಡ್ ಸಮಸ್ಯೆ ನಿವಾರಣೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ 200 ಗುಣಮಟ್ಟದ ಹಾಸಿಗೆಗಳನ್ನು ದೇಣಿಗೆಯಾಗಿ ನೀಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಹಾಗೆಯೇ ಆಂಬ್ಯುಲೆನ್ಸ್ ಕೊರತೆ ನಿಗಿಸಲು ಎಂಜಿ ಮೋಟಾರ್ ಕಂಪನಿಯು ಪೆಟಿಎಂ ಕಂಪನಿ ಜೊತೆಗೂಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವಿ ಮೇರೆಗೆ ತುರ್ತಾಗಿ ಸುಮಾರು 8 ಕಾರ್ ಆಂಬ್ಯುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಿವೆ.

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ನಿತಿನ್ ಗಡ್ಕರಿಯವರು ಎಂಜಿ ಮೋಟಾರ್ ಮತ್ತು ಪೆಟಿಎಂ ಕಂಪನಿಗಳಿಗೆ ಖುದ್ದಾಗಿ ಕರೆ ಮಾಡಿ ಮನವಿ ಮಾಡಿದ್ದು, ನಾಗಪುರ ಮತ್ತು ಅಮರಾವತಿ ವಿಭಾಗಗಳಲ್ಲಿ ಸುಮಾರು 100 ಕಾರ್ ಆ್ಯಂಬುಲೆನ್ಸ್ ನಿಯೋಜನೆಗಾಗಿ ಮನವಿ ಮಾಡಿದ್ದಾರೆ. ಸಚಿವರ ಮನವಿಗೆ ತುರ್ತಾಗಿ ಸ್ಪಂದಿಸಿದ ಎಂಜಿ ಮೋಟಾರ್ ಕಂಪನಿಯು ತಕ್ಷಣಕ್ಕೆ ಲಭ್ಯವಿದ್ದ 8 ಕಾರ್ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದೆ.

MOST READ: ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ಬೇಡಿಕೆಗೆ ಅನುಗುಣವಾಗಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ಹೆಚ್ಚಿಸಿದ ಎಂಜಿ ಮೋಟಾರ್

ಮುಂದಿನ ಕೆಲವೇ ವಾರಗಳಲ್ಲಿ ಸಚಿವರ ಸೂಚಿಸಿರುವ 100 ಕಾರ್ ಆಂಬ್ಯುಲೆನ್ಸ್‌ಗಳನ್ನು ಅಗತ್ಯವಿರುವ ಎಲ್ಲಾ ಕಡೆಗಳಲ್ಲೂ ನಿಯೋಜಿಸುವುದಾಗಿ ಭರವಸೆ ನೀಡಿದ್ದು, ಎಂಜಿ ಮೋಟಾರ್ ವಿವಿಧ ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Article Published On: Monday, May 17, 2021, 20:26 [IST]
English summary
MG Motor India and Devnandan Gases increase production of medical oxygen by 31%. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+